ವಸತಿ ಶಾಲೆ ಬೇಕಿದ್ದರೆ ಶಪಥ ಮಾಡಲಿ:ಪ್ರಿಯಾಂಕ್ ಸವಾಲು
ಬೆಂಗಳೂರು, ಜು.೨೪- ದಲಿತ, ಹಿಂದುಳಿದ ಸೇರಿದಂತೆ ಎಲ್ಲಾ ಜನಾಂಗದ ಮಕ್ಕಳಿಗೆ ಗುಣಮಟ್ಟ ವಸತಿ ಶಾಲೆ ಬೇಕಿದ್ದರೆ, ಈ ಕೂಡಲೇ ಸಮುದಾಯ ಭವನದ ಬೇಡಿಕೆ ಬಿಡುವುದು ಮಾತ್ರವಲ್ಲದೇ, ಶಪಥ ಮಾಡುವಂತೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.
ನಗರದಲ್ಲಿಂದು ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯೆ ರೂಪಕಲಾ ಅವರ ಪ್ರಶ್ನೆಗೆ ಸಮಾಜ ಕಲ್ಯಾಣ ಸಚಿವರ ಪರವಾಗಿ ಉತ್ತರಿಸಿದ ಅವರು, ಈ ಹಿಂದೆ ನಾನು ಇದೇ ಖಾತೆಯ ಸಚಿವನಾಗಿದ್ದೇ. ಆಗ ಸಮುದಾಯ ಭವನ ಹೆಸರಿನಲ್ಲಿ ಬರೋಬ್ಬರಿ ಒಂದು ಸಾವಿರ ಕೋಟಿ ಮೀಸಲಿಡಲಾಗಿತ್ತು.
ಈ ಸಮುದಾಯ ಭವನ ನಿರ್ಮಾಣವೂ ರಾಜಕೀಯ ಅಸ್ತ್ರ, ಪ್ರಚಾರಕ್ಕೆ ಸೀಮಿತವಾಗಿದೆ. ಈಗಲೂ ಕಾಲ ಮಿಂಚಿಲ್ಲ.ಇದಕ್ಕೆ ಮೀಸಲಿಟ್ಟ ಅನುದಾನ ಸಂಂಪೂರ್ಣವಾಗಿ ದಲಿತ, ಹಿಂದುಳಿದ ಸೇರಿದಂತೆ ಎಲ್ಲಾ ಜನಾಂಗದ ಮಕ್ಕಳಿಗೆ ಗುಣಮಟ್ಟ ವಸತಿ ಶಾಲೆ ಅಭಿವೃದ್ಧಿಗೆ ಖರ್ಚು ಮಾಡಿ ಎಂದು ಹೇಳಲಿ. ಇಂದಿನಿಂದಲೇ ವಸತಿ ಶಾಲೆಗಳು ಗುಣಮಟ್ಟ ಆಗಲಿವೆ ಎಂದು ತಿಳಿಸಿದರು.
ಇದಕ್ಕೂ ಮೊದಲು ರೂಪಕಲಾ ಪ್ರಸ್ತಾಪಿಸಿ, ಸಮಾಜ ಕಲ್ಯಾಣ ಇಲಾಖೆ ಅಡಿ ಬರುವ ಶಾಲೆಗಳಲ್ಲಿ ಆಹಾರ ಗುಣಮಟ್ಟ ಇಲ್ಲ.ಅದರಲ್ಲೂ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ರಕ್ಷಣೆಯೇ ಇಲ್ಲದಂತೆ ಆಗಿದೆ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ವಿಶೇಷ ತನಿಖೆ ತಂಡ ರಚಿಸಿ, ನಿಗಾ ಇಟ್ಟು ಮಕ್ಕಳ ಪ್ರಗತಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ದನಿಗೂಡಿಸಿದ ಕಾಂಗ್ರೆಸ್ ನ ಕಂಪ್ಲಿ ಗಣೇಶ್, ನರೇಂದ್ರ ಸ್ವಾಮಿ, ಬಂಗಾರಪೇಟೆ ನಾರಾಯಣಸ್ವಾಮಿ ಸೇರಿದಂತೆ ಪ್ರಮುಖರು, ರಾಜ್ಯ ಸರ್ಕಾರ ಈ ಶಾಲೆಗಳ ಗುಣಮಟ್ಟಕ್ಕೆ ಅನುದಾನ ಹೆಚ್ಚಳ ನೀಡಬೇಕು. ಎಷ್ಟು ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ಮಾಡೋತ್ತಾರೂ ಅಷ್ಟೋ ಮಂದಿಗೆ ವಸತಿ ಶಾಲೆ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂದರು.
ಇದೇ ವೇಳೆ ಬಿಜೆಪಿ ಹಿರಿಯ ಸದಸ್ಯ ಸುರೇಶ್ ಕುಮಾರ್, ಏಳು ಮತ್ತು ಎಂಟನೇ ತರಗತಿಯ ವಿದ್ಯಾರ್ಥಿಗಳು ಈ ವಸತಿ ಶಾಲೆಗಳಲ್ಲಿ ಇದ್ದು ಆತ್ಮಹತ್ಯೆ ಗೆ ಮುಂದಾಗುತ್ತಿದ್ದಾರೆ.ಇಂತಹ ಮಾನಸಿಕತೆಯನ್ನು ಅರ್ಥ ಮಾಡಿಕೊಂಡು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಆಗ ಸಚಿವ ಪ್ರಿಯಾಂಕ್ ಖರ್ಗೆ, ಇದನ್ನು ಸರ್ಕಾರ ಈಗಾಗಲೇ ಗಂಭೀರವಾಗಿ ಪರಿಗಣಿಸಿದೆ.ರೋಟರಿ ಸಂಸ್ಥೆಯ ಸಹಯೋಗದೊಂದಿಗೆ ಮಕ್ಕಳ ಮನೋಭಾವ, ಧೈರ್ಯ ತುಂಬುವ ಚಟುವಟಿಕೆಗಳನ್ನು ಆಯೋಜಿಸಲು ಮುಂದಾಗಿದೆ ಎಂದು ಅವರು ಸಮಾಜಾಯಿಷಿ ನೀಡಿದರು.