ಕುತೂಹಲ ಕೆರಳಿಸಿದ ನೆತನ್ಯಾಹು ಅಮೆರಿಕ ಭೇಟಿ
ವಾಷಿಂಗ್ಟನ್,ಜು.೨೩- ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಈ ವಾರದಲ್ಲಿ ಅಮೇರಿಕಾ ಪ್ರವಾಸ ಕೈಗೊಳ್ಳಲಿದ್ದು ಅಧ್ಯಕ್ಷ ಜೋ ಬೈಡೆನ್ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಹೀಗಾಗಿ ಉಭಯ ನಾಯಕರ ಭೇಟಿ ಕುತೂಹಲ ಕೆರಳಿಸಿದೆ.
ಕಳೆದ ವರ್ಷ ಅಕ್ಟೋಬರ್ ೭ ರ ಬಳಿಕ ಹಮಾಸ್ ದಾಳಿಯ ನಂತರ ಇಸ್ರೇಲ್ ಪ್ರಧಾನಿ ಅಮೆರಿಕಾ ಭೇಟಿ ಮಹತ್ವ ಪಡೆದುಕೊಂಡಿದೆ.
ಇಸ್ರೇಲಿ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕಾ ಬೇಟಿಯ ವೇಳೆ ಇಸ್ರೇಲ್ ಮತ್ತು ಅಮೇರಿಕಾ ಆಡಳಿತದಿಂದ ಗಾಜಾ ಯುದ್ಧ ಕೊನೆಗೊಳಿಸುವ ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ವಾಷಿಂಗ್ಟನ್‌ನಲ್ಲಿನ ರಾಜಕೀಯ ಪ್ರಕ್ಷುಬ್ಧತೆಯು ಪ್ರವಾಸ ಮತ್ತು ಭವಿಷ್ಯದ ಸಂಬಂಧಗಳನ್ನು ಮರು ರೂಪಿಸುವ ಕುರಿತು ಚರ್ಚೆ ನಡೆಸುವ ನಿರೀಕ್ಷೆ ಇದೆ ಎನ್ನಲಾಗಿದೆ
ಕೋವಿಡ್ ಸೋಂಕಿಗೆ ಒಳಗಾಗಿದ್ದ ಜೋ ಬೈಡೆನ್ ಇತ್ತೀಚೆಗೆ ಚೇತರಿಸಿಕೊಳ್ಳುತ್ತಿದ್ದಾರೆ.ಇದರ ನಡುವೆ ಮುಂದಿನ ವಾರ ಇಸ್ರೇಲ್ ಪ್ರಧಾನಿ ಅವರ ಭೇಟಿ ಉಭಯ ದೇಶಗಳ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಅಮೆರಿಕಾ ಪ್ರವಾಸದ ವೇಳೆ, ಯುದ್ಧದ ಬಗ್ಗೆ ಅವರ ಕಠಿಣವಾದ ವಿಧಾನದ ಬಗ್ಗೆ ತಿಂಗಳುಗಳ ಉದ್ವಿಗ್ನತೆಯ ನಂತರ ಮತ್ತು ಇಸ್ರೇಲಿ ಜೊತೆ ದ್ವಿಪಕ್ಷೀಯ ಸಂಬಂಧ ಸೇರಿದಂತೆ ಹಲವು ಪ್ರಮುಖ ವಿಷಯಗಳಲ್ಲಿ ಮಾತುಕತೆ ನಡೆಸುವ ಸಾಧ್ಯತೆ ಇದೆ
ಅಮೆರಿಕಾದ ಮುಂದಿನ ಅಧ್ಯಕ್ಷೀಯ ಚುನಾವಣಾ ಕಣದಿಂದ ಹಿಂದೆ ಸರಿದಿರುವ ಜೋ ಬೈಡೆನ್ ಅವರು ಮುಂದಿನ ಜನವರಿ ೨೦ರ ಅವರೆಗೆ ಅಧ್ಯಕ್ಷರಾಗಿ ಮುಂದುವರಿಲಿದ್ದಾರೆ.
ಇಸ್ರೇಲ್‌ನಲ್ಲಿ ಪ್ರಧಾನಿ ಅವರು ವಿಮಾನ ಹತ್ತುವ ಕ್ಷಣದವರೆಗೂ ಸಾಕಷ್ಟು ಅನಪೇಕ್ಷಿತ ಗಮನ ಸೆಳೆದರು.
ಇಸ್ರೇಲಿ ಒತ್ತೆಯಾಳುಗಳನ್ನು ಮುಕ್ತಗೊಳಿಸಲು ಹಮಾಸ್‌ನೊಂದಿಗೆ ಕದನ ವಿರಾಮ ಒಪ್ಪಂದ ಸೇರಿದಂತೆ ಹಲವು ವಿಷಯಗಳು ಚರ್ಚೆಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ