ಜು. ೨೨ ಸುಪ್ರೀಂನಲ್ಲಿ ಚುನಾವಣಾ ಬಾಂಡ್ ಅರ್ಜಿ ವಿಚಾರಣೆ
ನವದೆಹಲಿ,ಜು.೧೯- ಚುನಾವಣಾ ಬಾಂಡ್‌ಗಳ ಯೋಜನೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಮೇಲ್ವಿಚಾರಣೆಯ ತನಿಖೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಜುಲೈ ೨೨ ರಂದು ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ, ವಕೀಲ ಪ್ರಶಾಂತ್ ಭೂಷಣ್ ಅವರ ಸಲ್ಲಿಕೆಗಳನ್ನು ಗಮನಿಸಿ ಈ ಹೇಳಿಕೆ ನೀಡಿದೆ.
ಎರಡು ಎನ್‌ಜಿಒಗಳಾದ ಪಿಐಎಲ್ – ಕಾಮನ್ ಕಾಸ್ ಮತ್ತು ಸೆಂಟರ್ ಫಾರ್ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್ (ಸಿಪಿಐಎಲ್) ಅನ್ನು ವಿಚಾರಣೆಗೆ ಪಟ್ಟಿ ಮಾಡಲಾಗಿದೆ.
ಪಟ್ಟಿ ಮಾಡಲಾದ ಇದೇ ರೀತಿಯ ಮನವಿಯನ್ನು ಜುಲೈ ೨೨ ರಂದು ಹಿಂದಿನ ಪಿಐಎಲ್ ಜೊತೆಗೆ ತೆಗೆದುಕೊಳ್ಳಲಾಗುವುದು ಎಂದು ಪೀಠ ಹೇಳಿದೆ.
ಚುನಾವಣಾ ಬಾಂಡ್‌ಗಳ ಯೋಜನೆಯನ್ನು “ಹಗರಣ” ಎಂದು ಬಣ್ಣಿಸಿ, ದತ್ತಾಂಶದಿಂದ ಬಹಿರಂಗಪಡಿಸಿದಂತೆ ವಿವಿಧ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದ “ಶೆಲ್ ಕಂಪನಿಗಳು ಮತ್ತು ನಷ್ಟದ ಕಂಪನಿಗಳ” ನಿಧಿಯ ಮೂಲವನ್ನು ತನಿಖೆ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮನವಿಯಲ್ಲಿ ಕೋರಲಾಗಿದೆ.
“ಕ್ವಿಡ್ ಪ್ರೋಕೋ ವ್ಯವಸ್ಥೆಗಳ ಭಾಗವಾಗಿ ಕಂಪನಿಗಳು ದೇಣಿಗೆ ನೀಡಿದ ಹಣವನ್ನು ಹಿಂಪಡೆಯಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮನವಿಯಲ್ಲಿ ಕೋರಲಾಗಿದೆ, ಇವುಗಳು ಅಪರಾಧದ ಆದಾಯವೆಂದು ಕಂಡುಬಂದರೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಐವರು ನ್ಯಾಯಾಧೀಶರ ಸಂವಿಧಾನ ಪೀಠ, ಫೆಬ್ರವರಿ ೧೫ ರಂದು ಬಿಜೆಪಿ ಸರ್ಕಾರ ಪರಿಚಯಿ ಸಿದ ಅನಾಮಧೇಯ ರಾಜಕೀಯ ನಿಧಿಯ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ರದ್ದುಗೊಳಿಸಿತ್ತು.
ಉನ್ನತ ನ್ಯಾಯಾಲಯದ ತೀರ್ಪಿನ ನಂತರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೋಜನೆಯ ಅಡಿಯಲ್ಲಿ ಅಧಿಕೃತ ಹಣಕಾಸು ಸಂಸ್ಥೆ, ಚುನಾವಣಾ ಆಯೋಗ ಡೇಟಾವನ್ನು ಹಂಚಿಕೊಂಡಿದೆ, ಅದು ನಂತರ ಅದನ್ನು ಸಾರ್ವಜನಿಕಗೊಳಿಸಿತು.
೨೦೧೮ ರ ಜನವರಿ ೨ ರಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ ಚುನಾವಣಾ ಬಾಂಡ್‌ಗಳ ಯೋಜನೆಯನ್ನುಯೋಜನೆ ರಾಜಕೀಯ ನಿಧಿಯಲ್ಲಿ ಪಾರದರ್ಶಕತೆಯನ್ನು ತರುವ ಪ್ರಯತ್ನಗಳ ಭಾಗವಾಗಿ ರಾಜಕೀಯ ಪಕ್ಷಗಳಿಗೆ ನೀಡಿದ ನಗದು ದೇಣಿಗೆಗೆ ನೀಡಿಕೆ ಕಾನುನು ಬಾಹೀರ ಎಂದು ಸುಪ್ರೀಂಕೋರ್ಟ್ ಹೇಳಿತ್ತು. “ಚುನಾವಣಾ ಬಾಂಡ್ ಹಗರಣ ೨ಜಿ ಹಗರಣ ಅಥವಾ ಕಲ್ಲಿದ್ದಲು ಹಗರಣದಂತೆ ಹಣದ ಹಾದಿಯನ್ನು ಹೊಂದಿದೆ, ಅಲ್ಲಿ ಸ್ಪೆಕ್ಟ್ರಮ್ ಮತ್ತು ಕಲ್ಲಿದ್ದಲು ಗಣಿಗಾರಿಕೆ ಗುತ್ತಿಗೆಗಳ ಹಂಚಿಕೆಗಳನ್ನು ನಿರಂಕುಶವಾಗಿ ಮಾಡಲಾಗಿದೆ, ಆದರೆ ಹಣದ ಜಾಡು ಹಿಡಿದಿರುವ ಯಾವುದೇ ಪುರಾವೆಗಳಿಲ್ಲ. ಆದರೂ ಈ ನ್ಯಾಯಾಲಯ ನ್ಯಾಯಾಲಯದ ಮೇಲ್ವಿಚಾರಣೆಯ ತನಿಖೆಗೆ ಆದೇಶಿಸಿದೆ.