ದೇಶದೊಳಕ್ಕೆ ಒಂದು ಗ್ರಾಂ ಮಾದಕ ವಸ್ತು ಬರಲು ಬಿಡಲ್ಲ
ನವದೆಹಲಿ,ಜು.೧೯- ಭಾರತಕ್ಕೆ ಒಂದು ಗ್ರಾಂ ಮಾದಕ ವಸ್ತು ಬರಲು ಅಥವಾ ನಿರ್ಗಮಿಸಲು ಬಿಡುವುದಿಲ್ಲ ಎಂದು ಕೇಂದ್ರ ಗೃಹ ಅಮಿತ್ ಶಾ ಪ್ರತಿಜ್ಞೆ ಮಾಡಿದ್ದಾರೆ.
ಕೆಲವು ಪಾಶ್ಚಿಮಾತ್ಯ ದೇಶಗಳು ಮಾದಕ ದ್ರವ್ಯಗಳಳನ್ನು ಅಪರಾಧೀಕರಿಸಲು ಕೈಗೊಂಡ ನೀತಿ ತಿರಸ್ಕರಿಸಿದ ಕಾರಣ ಭಾರತ ಮಾದಕ ವಸ್ತು ವಿರುದ್ಧದ ನಿರ್ಣಾಯಕ ಹೋರಾಟದ ಘಟ್ಟದಲ್ಲಿದೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ನಾರ್ಕೋ-ಸಮನ್ವಯ ಕೇಂದ್ರದ ೭ನೇ ಉನ್ನತ ಮಟ್ಟದ ಸಭೆಯಲ್ಲಿ ಕೇಂದ್ರ ಮತ್ತು ರಾಜ್ಯ ಮಾದಕ ದ್ರವ್ಯ ವಿರೋಧಿ ಏಜೆನ್ಸಿಗಳ ಹಿರಿಯ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಮಾದಕ ವಸ್ತು ಪೂರೈಕೆ ಸರಪಳಿಗ ಕಿತ್ತುಹಾಕಲು ನಿರ್ದಯ ವಿಧಾನ ಅಳವಡಿಸಿಕೊಳ್ಳುವಂತೆ ಮಾದಕ ದ್ರವ್ಯ ವಿರೋಧಿ ಏಜೆನ್ಸಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮಾದಕ ವಸ್ತು ವಿರುದ್ದ ಹೋರಾಟ ಮಾಡಲು ’ಮಾನಸ್ ಸಹಾಯವಾಣಿ ಸಂಖ್ಯೆ ೧೯೩೩ ಆರಭಿಸಲಾಗಿದೆ. ಮಾದಕ ವಸ್ತುಗಳ ಕಳ್ಳಸಾಗಣೆ ಕುರಿತು ಜನರು ಮಾದಕ ದ್ರವ್ಯ ನಿಯಂತ್ರಣ ಬ್ಯೂರೋಗೆ ಮಾಹಿತಿ ನೀಡಲು ಇವುಗಳನ್ನು ಬಳಸಬಹುದು ಎಂದು ಹೇಳಿದ್ದಾರೆ
“ಇಡೀ ಮಾದಕವಸ್ತು ವ್ಯವಹಾರ ಈಗ ನಾರ್ಕೋ-ಭಯೋತ್ಪಾದನೆಯೊಂದಿಗೆ ಸಂಬಂಧ ಹೊಂದಿದೆ, ಮತ್ತು ಮಾದಕವಸ್ತು ವ್ಯಾಪಾರದಿಂದ ಉತ್ಪತ್ತಿಯಾಗುವ ಹಣ ದೇಶದ ಭದ್ರತೆಗೆ ಅತ್ಯಂತ ಗಂಭೀರ ಅಪಾಯವಾಗಿದೆ. ಎಲ್ಲಾ ಏಜೆನ್ಸಿಗಳ ಗುರಿ ಮಾದಕವಸ್ತು ಬಳಕೆದಾರರನ್ನು ಬಂಧಿಸುವುದು ಮಾತ್ರವಲ್ಲದೆ ಅದನ್ನು ಭೇದಿಸುವುದೂ ಆಗಿರಬೇಕು ಸೂಚನೆ ನೀಡಿದ್ದಾರೆ
ಮಾದಕ ವಸ್ತು ಭಾರತಕ್ಕೆ ಬರುವುದು ಮತ್ತು ಇಲ್ಲಿಂದ ವಿದೇಶಕ್ಕೆ ಹೋಗಲು ಅವಕಾಶ ಮಾಡಿಕೊಡುವುದಿಲ್ಲ ಈ ಮಾದಕ ವಸ್ತು ಪೂರೈಕೆ ಸರಪಳಿಯ ಕಡೆಗೆ ನಿರ್ದಯ ಧೋರಣೆ ಇರಬೇಕು, ಬೇಡಿಕೆ ಕಡಿತಕ್ಕೆ ಕಾರ್ಯತಂತ್ರದ ವಿಧಾನ ಮತ್ತು ಹಾನಿ ಕಡಿತಕ್ಕೆ ಮಾನವೀಯ ವಿಧಾನ” ಅನುಸರಿಸಬೇಕು ಎಂದಿದ್ದಾರೆ
೨೨ ಸಾವಿರ ಕೋಟಿ ಮೌಲ್ಯದ ಮಾದಕ ವಸ್ತು ವಶ
೨೦೦೪-೧೩ರ ಕೊನೆಯ ದಶಕಕ್ಕೆ ಹೋಲಿಸಿದರೆ ೨೦೧೪-೨೪ರ ವರ್ಷಗಳಲ್ಲಿ ಮಾದಕ ದ್ರವ್ಯ ವಿರೋಧಿ ಏಜೆನ್ಸಿಗಳು ಮೂರು ಪಟ್ಟು ಹೆಚ್ಚು ಮಾದಕವಸ್ತುಗಳನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಶಪಡಿಸಿಕೊಂಡಿವೆ ಎಂದು ಅಮಿತ್ ಶಾ ಹೇಳಿದ್ದಾರೆ.
೨೦೦೪-೧೩ರಲ್ಲಿ ವಶಪಡಿಸಿಕೊಂಡ ೫,೯೩೩ ಕೋಟಿ ಮೌಲ್ಯದ ೧.೫೨ ಲಕ್ಷ ಕೆಜಿ ಮಾದಕ ದ್ರವ್ಯಗಳಿಗೆ ಹೋಲಿಸಿದರೆ ನಮ್ಮ ಸರ್ಕಾರದ ಅವಧಿಯಲ್ಲಿ ಸುಮಾರು ೨೨,೦೦೦ ಕೋಟಿ ಮೌಲ್ಯದ ಸುಮಾರು ೫.೪೩ ಲಕ್ಷ ಕೆಜಿ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ