ಮೊಹರಂ ಅಚರಣೆ; ಕುಸಿದು ಬಿದ್ದ ಶೆಡ್ 20 ಅಡಿ ಆಳಕ್ಕೆ ಕುಸಿದ ನೂರಕ್ಕೂ ಹೆಚ್ಚು ಜನ
ಬಳ್ಳಾರಿ: ನಗರದಲ್ಲಿ ಮೋಹರಂ ಆಚರಣೆ ವೇಳೆ ಬೃಹತ್ ಅವಘಡ ಆದರೆ ದೊಡ್ಡ ಅನಾಹುತ ತಪ್ಪಿದೆ.
ಮೋಹರಂ ಅಚರಣೆ ವೇಳೆ ಪೀರಲ ದೇವರ ಮೆರವಣಿಗೆ ನೋಡಲೆಂದು ನಗರದ ಹೊರವಲಯದ ಹಳೇ ಬೈಪಾಸ್ ರಸ್ತೆಯ ಮನೆಯ ಮೇಲಿನ ತಗಡಿನ ಶೆಡ್ ಮೇಲೆ ನೂರಕ್ಕು ಹೆಚ್ಚು ಜನರು ಕೂತಿದ್ದರು.
ಭಾರ ತಡೆಯದೆ ಅದು ಕುಸಿದು ಬಿದ್ದಿದೆ. ಇದರಿಂದಾಗಿ ಅದರ ಮೇಲಿದ್ದ ನೂರಕ್ಕೂ ಹೆಚ್ಚು ಜನರು ಒಬ್ಬರ ಮೇಲೋಬ್ವರು ಬಿದ್ದಿದ್ದಾರೆ. ಒಂದಿಬ್ಬರಿಗೆ ಸಣ್ಣಪುಟ್ಟ ಗಾಯವಾಗಿರೋದು ಬಿಟ್ರೆ
ಅದೃಷ್ಟಕ್ಕೆ ಯಾರಿಗೂ ಯಾವುದೇ ಅಪಾಯವಾಗಿಲ್ಲ.