ವಿದ್ಯಾರ್ಥಿಗಳ ಕೇಂದ್ರ ಬದಲಾವಣೆ ಮಾಹಿತಿ ಕೇಳಿದ ಸುಪ್ರೀಂ
ನವದೆಹಲಿ,ಜು.೧೮- ನೀಟ್-ಯುಜಿ ಪರೀಕ್ಷೆ ಬರೆದ ೨೩.೩೩ ಲಕ್ಷ ವಿದ್ಯಾರ್ಥಿಗಳಲ್ಲಿ ಎಷ್ಟು ವಿದ್ಯಾರ್ಥಿಗಳು ತಮ್ಮ ಕೇಂದ್ರ ಬದಲಾಯಿಸಿದ್ದಾರೆ ಎನ್ನುವ ಕುರಿತು ಮಾಹಿತಿ ನೀಡುವಂತೆ ಸುಪ್ರೀಂಕೋರ್ಟ್, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ ಸೂಚಿಸಿದೆ.
ನೀಟ್ ಅವ್ಯವಹಾರ ಪ್ರಕರಣದ ತನಿಖೆಗೆ ಕೈಗೆತ್ತಿಕೊಂಡ ಸುಪ್ರೀಂಕೋರ್ ಎನ್ ಟಿಎಗೆ ಈ ಪ್ರಶ್ನೆ ಕೇಳಿದ್ದು ತಿದ್ದುಪಡಿಗಳ ಹೆಸರಿನಲ್ಲಿ ವಿದ್ಯಾರ್ಥಿಗಳು ಕೇಂದ್ರಗಳನ್ನು ಬದಲಾಯಿಸಿದ್ದಾರೆ ಮತ್ತು ೧೫,೦೦೦ ವಿದ್ಯಾರ್ಥಿಗಳು ತಿದ್ದುಪಡಿಗಾಗಿ ವಿಂಡೋವನ್ನು ಬಳಸಿಕೊಂಡಿದ್ದಾರೆ ಎನ್ನುವ ಕುರಿತು ಮಾಹಿತಿ ನೀಡಿ ಎಂದು ನಿರ್ದೇಶಿಸಿದೆ,
ವಿದ್ಯಾರ್ಥಿಗಳು ನಗರವನ್ನು ಮಾತ್ರ ಬದಲಾಯಿಸಬಹುದು ಮತ್ತು ಯಾವುದೇ ಅಭ್ಯರ್ಥಿ ಕೇಂದ್ರ ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದು ಎನ್‌ಟಿಎ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಈ ವ್ಯವಸ್ಥೆಯಿಂದ ಕೇಂದ್ರವನ್ನು ನಿಗದಿಪಡಿಸಲಾಗಿದೆ. ಪರೀಕ್ಷೆಗೆ ಕೇವಲ ಎರಡು ದಿನ ಮಾತ್ರ ಕೇಂದ್ರದ ಹಂಚಿಕೆಯಾಗಿದೆ, ಆದ್ದರಿಂದ ಯಾವ ಕೇಂದ್ರವನ್ನು ನಿಗದಿಪಡಿಸಲಾಗುವುದು ಎಂದು ಯಾರಿಗೂ ತಿಳಿದಿಲ್ಲ ಎಂದು ಸಮಜಾಯಿಷಿ ನೀಡಿದೆ.
ನೀಟ್ ?ಯುಜಿ ೨೦೨೪ರ ಪರೀಕ್ಷೆಯಲ್ಲಿ ಅಗ್ರ ನೂರು ಶ್ರೇಣಿಗಳನ್ನು ಮತ್ತು ಅವರು ಯಾವ ನಗರಗಳಿಂದ ಬಂದಿದ್ದಾರೆ ಎಂಬುದರ ಕುರಿತು ಮಾಹಿತಿ ನೀಡುವಂತೆ ಸುಪ್ರೀಂಕೋರ್ಟ್ ಕೇಳಿದೆ.
ಒಂದು ಲಕ್ಷದ ಎಂಟು ಸಾವಿರ ಅಭ್ಯರ್ಥಿಗಳಲ್ಲಿ ಎಷ್ಟು ಅಭ್ಯರ್ಥಿಗಳು ತಮ್ಮ ನಗರಗಳನ್ನು ಬದಲಾಯಿಸಿದ್ದಾರೆ.ಯಾವುದೇ ಶಂಕಿತ ಪ್ರದೇಶಗಳಿಗೆ ಬದಲಾಯಿಸಲಾಗಿದೆಯೇ ಏಪ್ರಿಲ್ ೯ ಮತ್ತು ೧೦ ರ ನಡುವೆ ನೋಂದಾಯಿಸಿದವರ ನಡುವೆ ಯಾವುದೇ ತಾಳೆ ಆಗಿದೆಯಾ ಅಥವಾ ಇಲ್ಲವೆ ಎಂದೂ ಕೂಟ ಪ್ರಶ್ನಿಸಿದೆ.