ಅಭಿಷೇಕ್-ಐಶ್ವರ್ಯ ವಿಚ್ಚೇದನ ಪಡೆದಿದ್ದಾರಾ…ಹೀಗೊಂದು ಗುಸು ಗುಸು
ಮುಂಬೈ,ಜು.೧೮- ಬಾಲಿವುಡ್ ತಾರಾ ದಂಪತಿ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ದಂಪತಿ ವಿಚ್ಚೇದನ ಪಡೆದಿದ್ದಾರೆ ಎನ್ನುವ ಗುಸು ಗುಸು ಬಾಲಿವುಡ್ ಅಂಗಳದಲ್ಲಿ ಹರಿದಾಡಿದ್ದು ಅದಕ್ಕೆ ಪೂರಕ ಎನ್ನುವಂತೆ ಇತ್ತೀಚೆಗೆ ನಡೆದ ಉದ್ಯಮಿ ಮುಖೇಶ್ ಅಂಬಾನಿ ಪುತ್ರನ ವಿವಾಹದಲ್ಲಿ ಬೇರೆ ಬೇರೆ ಪಾಲ್ಗೊಂಡಿದ್ದುದ್ದು ಇದಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಗೆ ಪೂರಕವಾಗಿ ವಿಚ್ಚೇದನ ನೀಡಿದ್ದಾರಾ ಎನ್ನುವ ಅಭಿಮಾನಿಗಳ ಪೋಸ್ಟ್‌ಗೆ ನಟ ಅಭಿಷೇಕ್ ಬಚ್ಚನ್ ಲೈಕ್ ಮಾಡಿರುವುದು ನಾನಾ ಅರ್ಥಗಳಿಗೆ ಎಡೆ ಮಾಡಿಕೊಟ್ಟಿದೆ
ಹಲವು ದಿನಗಳಿಂದ ಪುತ್ರಿಯೊಂದಿಗೆ ಐಶ್ವರ್ಯ ರೈ ಬೇರೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಜೊತೆಗೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಈ ದಂಪತಿ ಬೇರೆ ಬೇರೆ ಕಾಣಿಸಿಕೊಂಡಿದ್ದರು ವಿವಾಹ ವಿಚ್ಚೇಧನಕ್ಕೆ ಪುಷ್ಠಿ ಸಿಕ್ಕಿದಂತಾಗಿದೆ.
ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ರೈ ದಂಪತಿ ಪ್ರೀತಿಸಿ ಮದುವೆಯಾದವರು. ಮದುವೆಯಾಗಿ ೧೭ ವರ್ಷ ಕಳೆದಿದೆ. ಈ ನಡುವೆ ಸಂಸಾದರಲ್ಲಿ ಕಾಣಿಸಿಕೊಂಡು ಬಿರುಕು ತಾರಾ ದಂಪತಿಯನ್ನು ಬೇರೆ ಬೇರೆ ಮಾಡಿದೆ ಎಂದು ಬಾಲಿವುಡ್ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.
ವಿವಾಹ ವಿಚ್ಚೇದನಕ್ಕೆ ಸಂಬಂಧಿಸಿದಂತೆ ಅಭಿಷೇಕ್ ಬಚ್ಚನ್ ಮಾಡಿರುವ ಲೈಕ್ ಇರುವ ಪೋಸ್ಟ್ ಅನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಾನಾ ರೀತಿ ವ್ಯಾಖ್ಯಾನ ಮಾಡುತ್ತಿದ್ದಾರೆ
ಸಾಮಾಜಿಕ ಜಾಲತಾಣದಲ್ಲಿ ಅನೇಕರು ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದಾರೆ. ಹಲವಾರು ಜನರು ಕಾಮೆಂಟ್ ಕೂಡ ಮಾಡಿದ್ದಾರೆ.
ಬಚ್ಚನ್ ಕುಟುಂಬ ಸದಸ್ಯರಿಲ್ಲದೆ ಅಂಬಾನಿ ಮದುವೆಯ ರೆಡ್ ಕಾರ್ಪೆಟ್ ಮೇಲೆ ನಡೆದಾಗ ಐಶ್ವರ್ಯಾ ಹುಬ್ಬು ಹಾರಿಸಿದ್ದರು. ಅಮಿತಾಬ್ ಬಚ್ಚನ್, ಜಯಾ ಬಚ್ಚನ್ ಮತ್ತು ಶ್ವೇತಾ ಬಚ್ಚನ್ ಅವರೊಂದಿಗೆ ಅಭಿಷೇಕ್ ಕ್ಯಾಮೆರಾಗಳಿಗೆ ಪೋಸ್ ನೀಡಿದ ಕ್ಷಣಗಳ ನಂತರ ಅವರು ತಮ್ಮ ಮಗಳು ಆರಾಧ್ಯ ಅವರೊಂದಿಗೆ ಕಾಣಿಸಿಕೊಂಡಿದ್ದರು. ಇದು ಇಬ್ಬರ ವಿಚ್ಚೇಧನವಾಗಿದೆ ಎಂದೂ ಹೇಳಲಾಗಿದೆ
ಆದರೇ ಇದುವರೆಗೂ ಅಭಿಷೇಕ್ ಬಚ್ಚನ್ ಆಗಲಿ ಐಶ್ವರ್ಯ ರೈ ಆಗಲಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.