ಪ್ರಧಾನಿ ಗೇಬ್ರಿಯಲ್ ರಾಜೀನಾಮೆ ಅಂಗೀಕಾರ
ಪ್ಯಾರಿಸ್.ಜು.೧೭- ಫ್ರಾನ್ಸ್ ಪ್ರಧಾನ ಮಂತ್ರಿ ಗೇಬ್ರಿಯಲ್ ಅಟ್ಟಲ್ ನೀಡಿದ್ದ ರಾಜೀನಾಮೆಯನ್ನು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅಂಗೀಕರಿಸಿದ್ದಾರೆ.
ಆದರೆ ದೇಶದ ಸ್ಥಿರತೆ ಕಾಪಾಡುವುದಕ್ಕಾಗಿ ತಾತ್ಕಲಿಕವಾಗಿ ಮುಂದುವರೆಯುವಂತೆ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುವಂತೆ ಗೇಬ್ರಿಯಲ್ ಅವರಿಗೆ ಸೂಚಿಸಲಾಗಿದೆ
ಜು.೨೬ರಿಂದ ಪ್ರತಿಷ್ಠಿತ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟ ಆರಂಭವಾಗಲಿದೆ.ಇದರ ಮಧ್ಯೆ ಬಿಕ್ಕಟ್ಟು ನಿರ್ಮಾಣವಾಗಿದೆ.
ಪ್ರಧಾನಿ ಗೇಬ್ರಿಯಲ್ ಮತ್ತು ಇತರೆ ಸಚಿವರ ರಾಜೀನಾಮೆಯನ್ನು ಅಂಗಕರಿಲಸಾಗಿದೆ. ಆದರೆ ಹೊಸ ಸರ್ಕರ ರಚನೆಯಾಗುವವರೆಗೂ ಹುದ್ದೆಯಲ್ಲಿ ಮುಂದುವರೆಯುವಂತೆ ಸೂಚಿಸಲಾಗಿದೆ ಎಂದು ಅಧ್ಯಕ್ಷ ಮ್ಯಾಕ್ರಾನ್ ಅವರ ಕಚೇರಿ ತಿಳಿಸಿದೆ.
ಈಗಿನ ಸರ್ಕಾರ ದಿನನಿತ್ಯದ ಚಟುವಟಿಕೆಗಳನ್ನು ನಿರ್ವಹಿಸುವುದರದತ್ತ ಗಮನ ಹರಿಸಲಿದೆ. ಇತ್ತೀಚೆಗೆ ನಡೆದ ಸಂಸತ್ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ದೊರೆಯದೇ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಎರಡನೆ ಮಹಾ ಯುದ್ಧದ ಬಳಿಕೆ ಇದೇ ಮೊದಲ ಬಾರಿಗೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.