ನದಿಗೆ ಹಾರಿದ ವ್ಯಕ್ತಿ ಶವಕ್ಕಾಗಿ ಶೋಧ
ಸಂಜೆವಾಣಿ ವಾರ್ತೆ
ಹರಿಹರ ಜು ೧೮; ಉಕ್ಕಿ ಹರಿಯುತ್ತಿರುವ ತುಂಗಾಭದ್ರ ನದಿಗೆ ಹಾರಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಹರ ತುಂಗಭದ್ರಾ ಸೇತುವೆ ಬಳಿ ನಡೆದಿದೆ.ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಮಾರುತಿ (೫೭) ಎಂದು ತಿಳಿದು ಬಂದಿದ್ದು ಬೆಂಗಳೂರು ಬನ್ನೇರುಘಟ್ಟದ ದೇವರ ಚಿಕ್ಕನಹಳ್ಳಿ ಬಡಾವಣೆ ನಿವಾಸಿ ಎಂದು ತಿಳಿದು ಬಂದಿದೆ.
ಕಳೆದ ಸಂಜೆ ೬ ಗಂಟೆ ಸುಮಾರಿಗೆ ತುಂಬಿ ಹರಿಯುತ್ತಿರುವ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವ್ಯಕ್ತಿ ಪಾನಿಪುರಿ ವ್ಯಾಪಾರ ಮಾಡಿಕೊಂಡಿದ್ದು ಇತ್ತೀಚಿಗೆ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿ ಮಾನಸಿಕವಾಗಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ವ್ಯಕ್ತಿಯ ಪುತ್ರ ನಾಗರಾಜ್ ಹರಿಹರ ನಗರ ಠಾಣೆ ತಿಳಿಸಿದ್ದಾರೆ.ಕಳೆದ ಎರಡು ದಿನಗಳಿಂದ ಶವಕ್ಕಾಗಿ ಅಗ್ನಿಶಾಮಕದಳ ಈಜುಗಾರರ ತಂಡದಿಂದ ಶವಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಅಗ್ನಿಶಾಮಕ ದಳದ ಪಿಎಸ್‌ಐ ಸಂಜೀವ್ ಕುಮಾರ್ ಆರ್ ಮಾತನಾಡಿ ನದಿಯಲ್ಲಿ ನೀರಿನ ಸೆಳೆತವು ಭಾರಿ ಪ್ರಮಾಣದಲ್ಲಿ ಇರುವುದರಿಂದ ಶವ ಶೋಧ ಕಾರ್ಯಕ್ಕೆ ಅಡಚಣೆಯಾಗಿದೆ ಇಂದು ಗುತ್ತೂರು ಐರಣಿ ಹೊಳೆಮಠ, ಚಿಕ್ಕಿಬಿದರಿ, ಕೋಣಂತಂಬಿಗಿ ಹರಿಹರ ದಿಂದ ನದಿಯ ಸಾಲಿನಲ್ಲಿ ತೆಪ್ಪಗಳನ್ನು ಬಳಸಿ ಶವದ ಶೋಧ ಕಾರ್ಯಕ್ಕೆ ಮುಂದಾಗಿದ್ದೇವೆ. ಹುಕ್ಕೇರುತ್ತಿರುವ ನೀರಿನ ಪ್ರಮಾಣ ಕಡಿಮೆಯಾದ ಬಳಿಕ ಶವ ಹುಡುಕಲಿಕ್ಕೆ ಅನುಕೂಲವಾಗುತ್ತದೆ ಆದರೆ ನಮ್ಮ ಪ್ರಯತ್ನ ಮಾಡುತ್ತಿದ್ದೇನೆ ಎಂದರು. ಅಗ್ನಿಶಾಮಕದಳದ ಬಸವರಾಜ್. ಚಂದನ್ ಎಂ ಆರ್. ಮಾದೇವ ಪಿ ಎಂ ಪತಿ ನಾಯಕ್. ಈಜುಗಾರ ತಂಡ ನದಿ ದಡದಲ್ಲಿ ಇದ್ದಾರೆ