ಟ್ರಂಪ್ ಹತ್ಯೆ ವಿಫಲ ಅಮೆರಿಕನ್ನರಲ್ಲಿ ಹೆಚ್ಚಿದ ಆತಂಕ
ವಾಷಿಂಗ್ಟನ್, ಜು,೧೭- ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯೆಯ ವಿಫಲ ಯತ್ನದ ನಂತರ ಐವರು ಅಮೆರಿಕನ್ನರಲ್ಲಿ ನಾಲ್ವರು ದೇಶ ಅವ್ಯವಸ್ಥೆ, ಅಭದ್ರತೆಗೆ ಜಾರುತ್ತಿದೆ ಎನ್ನುವ ಆತಂಕ ಹೊರಹಾಕಿದ್ದಾರೆ.
ದೇಶ ನಿಯಂತ್ರಣ ಕಳೆದುಕೊಳ್ಳುತ್ತಿದ್ದು ದೇಶದ ನಾಗರಿಕರು ಭಯ ಪಡುವ ಸ್ಥಿತಿಗೆ ಬಂದಿದೆ ಎಂದು ಆತಂಕ ಹೊರಹಾಕಿರುವುದು ಸದ್ಯದಲ್ಲಿಯೇ ನಡೆಯಲಿರುವ ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ.
ಈ ವರ್ಷದ ನವೆಂಬರ್ ೫ ರ ಚುನಾವಣೆಯ ಮೇಲೆ ಜನರ ಅಭಿಪ್ರಾಯ ತೀವ್ರ ಪರಿಣಾಮ ಬೀರಲಿದ್ದು , ಚುನಾವಣೆ ವೇಳೆಗೆ ಇನ್ನಷ್ಟು ರಾಜಕೀಯ ಹಿಂಸಾಚಾರ ಸೃಷ್ಟಿ ಯಾಗಬಹುದು ಎನ್ನುವ ಆತಂಕ ಎದುರಾಗಿದೆ.
ಎರಡು ದಿನಗಳ ಸಮೀಕ್ಷೆಯಲ್ಲಿ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಡೋನಾಲ್ಡ್ ಟ್ರಂಪ್ ನೋಂದಾಯಿತ ಮತದಾರರಲ್ಲಿ ಶೇಕಡಾ ೪೩ ರಿಂದ ಶೇಕಡಾ ೪೧ ರಷ್ಟು ಹಾಗು ಡೆಮಾಕ್ರಟಿಕ್ ಅಮೇರಿಕಾ ಅಧ್ಯಕ್ಷ ಜೋ ಬೈಡೆನ್ ಅವರಿಗಿಂತ ಸ್ವಲ್ಪ ಮುನ್ನಡೆ ಸಾಧಿಸಿದ್ದಾರೆ ಎಂದು ಹೇಳಿದ್ದಾರೆ.
ಸಮೀಕ್ಷೆಯ ೩ ಶೇಕಡಾವಾರು ಪಾಯಿಂಟ್ ಮಾರ್ಜಿನ್ ದೋಷದ ಒಳಗಿದೆ, ಡೋನಾಲ್ಡ್ ಟ್ರಂಪ್ ಅವರ ಪ್ರಯತ್ನವನ್ನು ಸೂಚಿಸುತ್ತದೆ.ಮತದಾರರ ಭಾವನೆಯಲ್ಲಿ ಪ್ರಮುಖ ಬದಲಾವಣೆ ಉಂಟುಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಶೇಕಡಾ ೮೦ ರಷ್ಟು ಮತದಾರರು ಡೆಮೋಕ್ರಾಟ್‌ಗಳು ಮತ್ತು ರಿಪಬ್ಲಿಕನ್‌ಗಳ ಸಮಾನ ಷೇರುಗಳನ್ನು ಒಳಗೊಂಡಂತೆ “ದೇಶ ನಿಯಂತ್ರಣ ಕಳೆದುಕೊಳ್ಳುತ್ತಿದೆ ಎಂದಿದ್ದಾರೆ ಆನ್‌ಲೈನ್‌ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ೯೯೨ ನೋಂದಾಯಿತ ಮತದಾರರನ್ನು ಒಳಗೊಂಡಂತೆ ರಾಷ್ಟ್ರವ್ಯಾಪಿ ೧,೨೦೨ ಅಮೇರಿಕಾದ ವಯಸ್ಕರನ್ನು ಸಮೀಕ್ಷೆ ಮಾಡಲಾಗಿತ್ತು.
ಪೆನ್ಸಿಲ್ವೇನಿಯಾದಲ್ಲಿ ನಡೆದ ಪ್ರಚಾರ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ವೇಳೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಂತಕನ ಗುಂಡು ಕಿವಿಗೆ ತಗುಲಿದಾಗ ಸ್ವಲ್ಪದರಲ್ಲೇ ಸಾವಿನಿಂದ ಬಚಾವ್ ಆಗಿದ್ದರು. ಈ ಘಟನೆಯ ಬಳಿಕ ಅಮೇರಿಕಾ ಜನರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ
೧೯೬೩ ರಲ್ಲಿ ಡೆಮಾಕ್ರಟಿಕ್ ಅಧ್ಯಕ್ಷ ಜಾನ್ ಎಫ್. ಕೆನಡಿ ಹತ್ಯೆಯಾದಾಗ, ೧೯೬೮ ರಲ್ಲಿ ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ರಾಬರ್ಟ್ ಎಫ್. ಕೆನಡಿ ಹತ್ಯೆಯಾದ ೧೯೬೦ ರಂತಹ ಪ್ರಕ್ಷುಬ್ಧ ರಾಜಕೀಯ ಅವಧಿಗಳ ನೆನಪುಗಳನ್ನು ಈ ಘಟನೆ ನೆನಪು ಮಾಡಿದೆ ಎಂದಿದ್ದಾರೆ
ಸಮೀಕ್ಷೆಯಲ್ಲಿ ಸುಮಾರು ಶೇಕಡಾ ೮೪% ಮತದಾರರು ಚುನಾವಣೆಯ ನಂತರ ಉಗ್ರಗಾಮಿಗಳು ಹಿಂಸಾಚಾರದ ಕೃತ್ಯಗಳನ್ನು ಮಾಡುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ, ಮೇ ತಿಂಗಳಲ್ಲಿ ನಡೆಸಿದ ಸಮೀಕ್ಷೆಯ ಫಲಿತಾಂಶಗಳಿಂದ ಶೇಕಡಾ ೭೪ ರಷ್ಟು ಮತದಾರರು ಆ ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ ಎನ್ನುವ ಸಂಗತಿ ಬಯಲಾಗಿದೆ.