ಸಿಕ್ಕಿಂ ಮಾಜಿ ಸಚಿವ ಪೌಡ್ಯಾಲ್ ಶವವಾಗಿ ಪತ್ತೆ
ಗ್ಯಾಂಗ್ಟಕ್.ಜು.೧೭- ನಾಪತ್ತೆಯಾಗಿದ್ದ ಸಿಕ್ಕಿಂನ ಮಾಜಿ ಸಚಿವ ಆರ್.ಸಿ.ಪೌಡ್ಯಾಲ್ ಶವವಾಗಿ ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಪತ್ತೆಯಾಗಿದ್ದಾರೆ.
ಪೌಡ್ಯಾಲ್ ಅವರ ಮೃತ ದೇಹ ತೀಸ್ತಾ ನದಿಯಿಂದ ಕಾಲುವೆಗೆ ತೇಲಿ ಬಂದಿದೆ ಎಂದು ಅನುಮಾನಪಡಲಾಗಿದೆ. ಬಟ್ಟೆ ಮತ್ತು ವಾಚ್‌ನಿಂದಾಗಿ ಪೌಡ್ಯಾಲ್ ಅವರನ್ನು ಗುರುತು ಹಿಡಿಯಲು ಸಾಧ್ಯವಾಯಿತೆಂದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಿಕ್ಕಿಂ ವಿಧಾನಸಭೆಯಲ್ಲಿ ಉಪಸಭಾಪತಿಯಾಗಿದ್ದ ಪೌಡ್ಯಾಲ್ ನಂತರ ಅರಣ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಜು,೭ರಂದು ಪೌಡ್ಯಾಲ್ ಅವರು ಪಾಕ್ಯೊಂಗ್ ಜಿಲ್ಲೆಯ ಚೋಟಾ ಸಿಂಗ್ಟಾಮ್‌ನಿಂದ ನಾಪತ್ತೆಯಾಗಿದ್ದರು. ಅವರನ್ನು ಹುಡುಕಲು ವಿಶೇಷ ತಂಡವನ್ನು ರಚಸಲಾಗಿತ್ತು. ಆದರೆ ಅವರು ಶವವಾಗಿ ಪತ್ತೆಯಾಗಿದ್ದಾರೆ. ತನಿಖೆ ಮುಂದುವರೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.