ಕಳಚಿದ ಟೈರ್ ಪ್ರಯಾಣಿಕರು ಪಾರು
ಚಿಕ್ಕಮಗಳೂರು,ಜು.೧೭- ಚಲಿಸುತ್ತಿದ್ದಾಗಲೇ ಖಾಸಗಿ ಬಸ್‌ನ ಟೈರುಗಳು ಕಳಚಿ ಓಡಿದ ಘಟನೆ ನಡೆದಿದ್ದು ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬಾಳೆಹೊನ್ನೂರು ಬಳಿ ನಡೆದಿದೆ.
ಬೆಂಗಳೂರಿನಿಂದ ಶೃಂಗೇರಿಗೆ ತೆರಳುತ್ತಿದ್ದ ಖಾಸಗಿ ಬಸ್ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ರೋಟರಿ ಸರ್ಕಲ್ ಬಳಿ ತೆರಳುವಾಗ ಇದ್ದಕ್ಕಿದ್ದಂತೆ ಚಲಿಸುತ್ತಿದ್ದ ಬಸ್‌ನ ಟೈಯರ್‌ಗಳು ಕಳಚಿ ಬಿದ್ದಿವೆ.
ಬಸ್‌ನ ಹಿಂಬದಿ ಟೈರು ಕಳಚಿ ಓಡಿದ್ದು ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತ ತಪ್ಪಿದೆ.ಟೈರುಗಳು ಕಳಚಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಘಾಟಿ ಪ್ರದೇಶದಲ್ಲಿ ಘಟನೆ ಸಂಭವಿಸಿದ್ದರೆ ಮಹಾ ದುರಂತ ಸಂಭವಿಸುತ್ತಿತ್ತು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪ್ರಯಾಣಿಕರು ಪಾರಾಗಿದ್ದಾರೆ.