ಟ್ರೇಡ್ ಮಾರ್ಕ್ ಉಲ್ಲಂಘನೆ ಸ್ಥಗಿತಕ್ಕೆ ಹೈಕೋರ್ಟ್ ಆದೇಶ
ನವದೆಹಲಿ,ಜು.೧೬-ಹಣಕಾಸು ವಂಚನೆಗಳಿಂದ ಗ್ರಾಹಕರನ್ನು ರಕ್ಷಿಸಲು ದೆಹಲಿಯ ಹೈಕೋರ್ಟ್,ಫೇಸ್ ಬುಕ್, ವಾಟ್ಸಾಪ್, ಟೆಲಿಗ್ರಾಂಗಳಿಗೆ ಟ್ರೇಡ್ ಮಾರ್ಕ್ ಗಳ ಉಲ್ಲಂಘನೆಯ ಚಟುವಟಿಕೆಗಳನ್ನು ತಕ್ಷಣವೇ ಸ್ಥಗಿತಗೊಳಿಸಲು ಆದೇಶ ನೀಡಿದೆ.
ಹಣಕಾಸು ವಂಚನೆ ತಪ್ಪಿಸಲು ಮತ್ತು ಅದರ ಹೆಸರಿನಲ್ಲಿ ಗ್ರಾಹಕರಿಗೆ ಮಾಡುವ ವಂಚನೆಗಳಿಂದ ರಕ್ಷಿಸಲು ಕೋರ್ಟ್ ಇಂತಹ ಮಹತ್ವದ ಆದೇಶ ಹೊರಡಿಸಿದೆ.
ಫೇಸ್ ಬುಕ್, ವಾಟ್ಸಾಪ್ ಮತ್ತು ಟೆಲಿಗ್ರಾಂಗಳಿಗೆ ರೇಜರ್ ಪೇಯ ಟ್ರೇಡ್ ಮಾರ್ಕ್ ಗಳ ಉಲ್ಲಂಘನೆ ಮತ್ತು ವಂಚನೆಯ ಚಟುವಟಿಕೆಗಳನ್ನು ತಕ್ಷಣವೇ ಸ್ಥಗಿತಗೊಳಿಸುವುದನ್ನು ಕಡ್ಡಾಯಗೊಳಿಸಿದೆ. ಈ ಕ್ರಮವು ಹಣಕಾಸು ವಂಚನೆ ತಪ್ಪಿಸಲು ಮತ್ತು ಅದರ ಹೆಸರಿನಲ್ಲಿ ಗ್ರಾಹಕರಿಗೆ ಮಾಡುವ ವಂಚನೆಗಳಿಂದ ರಕ್ಷಿಸುವ ರೇಜರ್ ಪೇಯ ಬದ್ಧತೆಯನ್ನು ಮರು ದೃಢೀಕರಿಸುತ್ತದೆ
ಈ ಆದೇಶವು ರೇಜರ್ ಪೇ ಟ್ರೇಡ್ ಮಾರ್ಕ್ ಅನಧಿಕೃತ ಬಳಕೆ ನಿರ್ಬಂಧಿಸುತ್ತದೆ, ವಂಚನೆ ಮಾಡುವವರ ಬ್ಯಾಂಕ್
ಖಾತೆಗಳು ಮತ್ತು ಯುಪಿಐ ಐಡಿಗಳ ಅಮಾತನು ಮತ್ತು ಫ್ರೀಜಿಂಗ್ ಮಾಡುತ್ತದೆ.
ಗ್ರಾಹಕರನ್ನು ರಕ್ಷಿಸಲು ಮತ್ತು ಹಣಕಾಸು ವಂಚನೆಯ ವಿರುದ್ಧ ತನ್ನ ಬ್ರಾಂಡ್ ಗುರುತನ್ನು ಕಾಪಾಡಿಕೊಳ್ಳಲು ಭಾರತದ ಮುಂಚೂಣಿಯ ಉದ್ಯಮಗಳ ಆಮ್ನಿಚಾನಲ್ ಪೇಮೆಂಟ್ಸ್ ಮತ್ತು ಬ್ಯಾಂಕಿಂಗ್ ಪ್ಲಾಟ್ ಫಾರಂ ರೇಜರ್ ಪೇ ನಡೆಸಿದ ಕಾನೂನು ಹೋರಾಟದಿಂದ ಮಹತ್ವದ ಆದೇಶ ಹೊರಬಿದ್ದಿದೆ.
ಹಲವು ವರ್ಷಗಳಿಂದ ನಾವು ನಮ್ಮ ಗ್ರಾಹಕರನ್ನು ಹಣಕಾಸು ವಂಚನೆಯಿಂದ ತಪ್ಪಿಸಲು ಸದೃಢ ಸುರಕ್ಷತೆಯ ಕ್ರಮಗಳನ್ನು ಅನುಷ್ಠಾನಗೊಳಿಸಲು ಬದ್ಧರಾಗಿದ್ದು, ಇದರಲ್ಲಿ ನಿಯಮಿತ ಮೂಲಸೌಕರ್ಯದ ಅಪ್‌ಡೇಟ್‌ಗಳ ಮತ್ತು ಕಠಿಣ ಭದ್ರತೆಯ ನಿಯಮಗಳು ಒಳಗೊಂಡಿವೆ.