ಬಾಲಕನ ಬೌಲಿಂಗ್‌ಗೆ ಪಾಕ್ ಮಾಜಿ ವೇಗಿ ಫಿದಾ
ಕರಾಚಿ,ಜು.೧೬- ಪಾಕಿಸ್ತಾನದ ಬಾಲಕನೊಬ್ಬ ವೇಗಿ ಜಸ್ಪ್ರೀತ್ ಬುಮ್ರಾ ಅವರಂತೆ ಬೌಲಿಂಗ್ ಮಾಡಿರುವ ವಿಡಿಯೋವೊಂದನ್ನ ಮಾಜಿ ವೇಗಿ ವಾಸೀಮ್ ಅಕ್ರಮ್ ಹಂಚಿಕೊಂಡಿದ್ದಾರೆ.
ಜಸ್ಪ್ರೀತ್ ಬುಮ್ರಾ ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಬೌಲರ್. ವಿಶಿಷ್ಟ ಶೈಲಿಯಲ್ಲಿ ಬೌಲಿಂಗ್ ಮಾಡುವ ಬುಮ್ರಾಗೆ ವಿಶ್ವಾದ್ಯಂತ ಸಾಕಷ್ಟು ಅಭಿಮಾನಿಗಳಿದ್ದಾರೆ. ಬುಮ್ರಾ ಅವರ ಬೌಲಿಂಗ್‌ನಿಂದ ಸಾಕಷ್ಟು ಮಂದಿ ಪ್ರೇರಣೆಗೊಂಡಿದ್ದಾರೆ.
ಇದೀಗ ಪಾಕಿಸ್ತಾನದ ಬಾಲಕನೊಬ್ಬ ಬುಮ್ರಾ ಅವರಂತೆ ಬೌಲಂಗ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪಾಕ್ ಬಾಲಕ ಹಲವಾರು ಗಂಟೆಗಳ ಪರಿಶ್ರಮ ಅಭ್ಯಾಸದ ನೆರವಿನಿಂದ ಥೇಟ್ ಬುಮ್ರಾ ಅವರಂತೆ ಬೌಲಿಂಗ್ ಮಾಡಲು ಸಾಧ್ಯವಾಗಿದೆ.
ಸ್ವತಃ ಪಾಕ್ ಮಾಜಿ ವೇಗಿ ವಾಸೀಮ್ ಅಕ್ರಮ್ ಬಾಲಕನ ಬದ್ಧತೆ ಮತ್ತು ನಿಖರತಯೆನ್ನು ಪ್ರಶಂಸಿದ್ದಾರೆ. ಬಾಲಕನ ಬೌಲಿಂಗ್ ಶೈಲಿ ಮತ್ತು ನಿಯಂತ್ರಣ ಶ್ರೇಷ್ಠ ಬೌಲರ್ ಬುಮ್ರಾ ಅವರಂತಿದೆ. ಇದು ಈ ದಿನದ ಅದ್ಭುತ ವಿಡಿಯೋ ಎಂದು ಎಕ್ಸ್‌ನಲ್ಲಿ ಹಾಡಿ ಹೊಗಳಿದ್ದಾರೆ. ಟಿ೨೦ ವಿಶ್ವಕಪ್‌ನಲ್ಲಿ ಬುಮ್ರಾ ೮ ಪಂದ್ಯಗಳಿಂದ ೧೫ ವಿಕೆಟ್ ಪಡೆದು ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು.