ಟೆಸ್ಟ್: ೨ನೇ ದಿನವೂ ಪಂದ್ಯ ಮಳೆಗೆ ಆಹುತಿ
ಕಾನ್ಪುರ, ಸೆ.೨೮- ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೆ ಟೆಸ್ಟ್ ಪಂದ್ಯದ ಎರಡನೆ ದಿನದ ಪಂದ್ಯಾಟ ಮಳೆಗೆ ಆಹುತಿಯಾಗಿದೆ.
ಗ್ರೀನ್‌ಪಾರ್ಕ್‌ನಲ್ಲಿ ನಡೆಯಬೇಕಿದ್ದ ಎರಡನೆ ದಿನ ಪಂದ್ಯಾಟ ಒಂದೇ ಒಮದು ಎಸೆತ ಕಾಣದೇ ರದ್ದಾಯಿತು. ಮೊದಲ ದಿನದ ಪಂದ್ಯಾಟ ಅರ್ಧಕ್ಕೆ ಮಳೆ ಮತ್ತು ಮಂದ ಬೆಳಕಿನ ಕಾರಣ
ಪಂದ್ಯವನ್ನು ಮುಂದೂಡಲಾಗಿತ್ತು. ಎರಡನೆ ದಿನ ಪಂದ್ಯ ಆರಂಭಕ್ಕೂ ಮುನ್ನ ಮಳೆ ಜೋರಾಗಿ ಸುರಿದಿತ್ತು.
ಎರಡನೆ ದಿನದಾಟದ ಪಂದ್ಯದಲ್ಲಿ ಭಾರೀ ಮಳೆಯಾಗಿರುವುದರಿಂದ ಮೈದಾನದಲ್ಲಿ ಹೆಚ್ಚು ಮಳೆ ನೀರು ನಿಂತಿದೆ. ಈ ಹಿನ್ನೆಲೆಯಲ್ಲಿ ಮೂರನೆ ದಿನದ ಪಂದ್ಯಾಟ ನಡೆಯುವುದು ಅನುಮಾನದಿಂದ ಕೂಡಿದೆ.
ಮಳೆ ನಿಲ್ಲದ ಕಾರಣ ಟೀಮ್ ಇಂಡಿಯಾ ವಾಪಸ್ ಹೋಟೇಲ್‌ಗೆ ಮರಳಿದೆ. ಮೊದಲ ದಿನ ಕೇವಲ ೩೫ ಓವರ್‌ಗಳನ್ನ ಹಾಕಲಾಗಿತ್ತು. ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್‌ನಲ್ಲಿ ೩ ವಿಕೆಟ್ ನಷ್ಟಕ್ಕೆ ೧೦೭ ರನ್ ಕಲೆ ಹಾಕಿದೆ.