ಸ್ಥಾಯಿ ಸಮಿತಿ ಚುನಾವಣೆ: ಸುಪ್ರೀಂಗೆ ಬಿಜೆಪಿ ಮೊರೆ
ನವದೆಹಲಿ,ಸೆ.೨೮- ದೆಹಲಿ ಮಹಾನಗರ ಪಾಲಿಕೆಯ ವಿವಿಧ ಸ್ಥಾಯಿ ಸಮಿತಿ ಚುನಾವಣೆ ಅಘೋಷಿತ ಎಂದು ಮುಂದೂಡಿರುವ ಮೇಯರ್ ಶೆಲ್ಲಿ ಒಬೆರಾಯ್ ಅವರ ನಿರ್ಧಾರ ಪ್ರಶ್ನಿಸಿ ಬಿಜೆಪಿ ಸುಪ್ರೀಂಕೋರ್ಟ್ ಮೊರೆ ಹೋಗಿದೆ.
ಬಿಜೆಪಿ ಪಾಲಿಕೆ ವಿರೋದ ಪಕ್ಷದ ನಾಯಕ ರಾಜಾ ಇಕ್ಬಾಲ್ ಸಿಂಗ್ ಅವರು ಪಾಲಿಕೆಯ ಸ್ಥಾಯಿ ಸಮಿತಿ ಚುನಾವಣೆ ವಿಳಂಬದ ಬಗ್ಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಮೇಯರ್ ಶೆಲ್ಲಿ ಒಬೆರಾಯ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ದೆಹಲಿಯ ಮುನ್ಸಿಪಲ್ ಕಾಪೋರೇಷನ್ ಸ್ಥಾಯಿ ಸಮಿತಿ ಚುನಾವಣೆ ಸುತ್ತಲಿನ ವಿವಾದ ಸುಪ್ರೀಂ ಕೋರ್ಟ್ ಅಂಶಗಳು ತಲುಪಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ತೆಗೆದುಕೊಳ್ಳುವ ನಿರ್ಧಾರ ಕುತೂಹಲ ಕೆರಳಿಸಿದೆ.
ಲೆಪ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರ ನಿರ್ದೇಶನದ ಹೊರತಾಗಿಯೂ ಚುನಾವಣೆ ಮುಂದೂಡುವ ಮೂಲಕ ಶೆಲ್ಲಿ ಒಬೆರಾಯ್ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ. ಈ ಕ್ರಮ ಆಗಸ್ಟ್ ೫ ರ ಸುಪ್ರೀಂ ಕೋರ್ಟ್ ಆದೇಶವನ್ನು ಅವಮಾನಿಸಿದೆ ಎಂದು ನ್ಯಾಯಾಲಯದಲ್ಲಿ ಅರ್ಜಿ ದಾಖಲು ಮಾಡಿದ್ದಾರೆ
ಅಕ್ಟೋಬರ್ ೫ ರವರೆಗೆ ಸ್ಥಾಯಿ ಸಮಿತಿ ಚುನಾವಣೆ ಮುಂದೂಡುವ ಮೂಲಕ ಮೇಯರ್ ಶೆಲ್ಲಿ ಒಬೆರಾಯ್ ಕಾನೂನು ಮತ್ತು ಸಂಪ್ರದಾಯ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಪಾಲಿಕೆ ವಿರೋಧ ಪಕ್ಷದ ನಾಯಕ ರಾಜಾ ಇಕ್ಬಾಲ್ ಸಿಂಗ್ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದಾರೆ.
ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಚುನಾವಣೆ ಬಹಿಷ್ಕರಿಸಿದ ನಂತರ ೧೮ ಸದಸ್ಯರ ದೆಹಲಿ ಮುನ್ಸಿಪಲ್ ಕಾಪೆರ್ರೇಷನ್ ಸ್ಥಾಯಿ ಸಮಿತಿಯಲ್ಲಿ ಬಿಜೆಪಿಯು ಅವಿರೋಧವಾಗಿ ಕೊನೆಯ ಸ್ಥಾನವನ್ನು ಗೆದ್ದಿದೆ. ಪಕ್ಷದ ಕೌನ್ಸಿಲರ್‍ಗಳು ಚಲಾಯಿಸಿದ ಎಲ್ಲಾ ೧೧೫ ಮತಗಳನ್ನು ಬಿಜೆಪಿ ಅಭ್ಯರ್ಥಿ ಸುಂದರ್ ಸಿಂಗ್ ಪಡೆದರೆ, ವಿರೋಧ ಪಕ್ಷದ ಅಭ್ಯರ್ಥಿ ನಿರ್ಮಲಾ ಕುಮಾರಿ ಒಂದೂ ಪಡೆಯಲಿಲ್ಲ. ಇದರ ಪರಿಣಾಮವಾಗಿ, ಬಿಜೆಪಿ ಈಗ ಸಮಿತಿಯಲ್ಲಿ ೧೦ ಸ್ಥಾನಗಳನ್ನು ನಿಯಂತ್ರಿಸುತ್ತದೆ ಮತ್ತು ಎಎಪಿ ಎಂಟು ಸ್ಥಾನ ಹೊಂದಿದೆ.
ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಬಿಜೆಪಿಯು “ಜನಾದೇಶವನ್ನು ಕದಿಯುತ್ತಿದೆ” ಎಂದು ಆರೋಪಿಸಿದ್ದು ಚುನಾವಣಾ ಪ್ರಕ್ರಿಯೆ “ಗೂಂಡಾಗಿರಿ” ಎಂದು ದೂರಿದ್ದಾರೆ
ಅಕ್ರಮಗಳನ್ನು ನೆಪವಾಗಿಟ್ಟುಕೊಂಡು ಕಾಂಗ್ರೆಸ್ ಸೇರಿದಂತೆ ಆಡಳಿತ ಪಕ್ಷ ಚುನಾವಣೆ ಬಹಿಷ್ಕರಿಸಿದೆ. ತಟಸ್ಥವಾಗಿರಲು ಮತ್ತು “ಕುದುರೆ ವ್ಯಾಪಾರ” ತಪ್ಪಿಸಲು ಚುನಾವಣೆಗಳಿಂದ ದೂರವಿರುವುದಾಗಿ ಕಾಂಗ್ರೆಸ್ ಈ ಹಿಂದೆ ಹೇಳಿತ್ತು.