ಡೆಂಗ್ಯೂ ತಡೆಗೆ ಎಚ್ಚರಿಕೆ ವಹಿಸಿ
ಬೆಂಗಳೂರು, ಜು.೧೪- ರಾಜ್ಯಾದ್ಯಂತ ವ್ಯಾಪಕವಾಗಿ ಹೆಚ್ಚುತ್ತಿರುವ ಡೆಂಗ್ಯು ಜ್ವರದ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು. ಆದರೆ, ಇದರ ಬಗ್ಗೆ ಭಯ ಪಡುವ ಅಗತ್ಯವಿಲ್ಲ ಎಂದು ಅವಧೂತ ವಿನಯ್ ಗುರೂಜಿ ಸಲಹೆ ನೀಡಿದ್ದಾರೆ.
ನಗರದಲ್ಲಿಂದು ಮಹಾತ್ಮಾ ಗಾಂಧಿ ಸೇವಾ ಟ್ರಸ್ಟ್ ಉತ್ತರಹಳ್ಳಿಯಲ್ಲಿ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನ ಹಾಗೂ ಸೊಳ್ಳೆಗಳ ಔಷಧ ಸಿಂಪಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಮಳೆ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಯಲ್ಲಿ ಡೆಂಗ್ಯು ಜ್ವರವೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮ ವಹಿಸಬೇಕು. ನಗರಗಳಲ್ಲಿ ಜನರು ಸ್ವಚ್ಛತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ತಮ್ಮ ಸುತ್ತಮುತ್ತ, ನಗರವನ್ನು ಸ್ವಚ್ಛವಾಗಿಡುವ ಮೂಲಕ ರೋಗಗಳಿಂದ ದೂರ ಇರಬೇಕು. ಡೆಂಗ್ಯು ಜ್ವರದ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಲ್ಲಿ ಬಿಬಿಎಂಪಿ ಕಾರ್ಯವನ್ನು ಶ್ಲಾಘಿಸಿದರು.
ಉತ್ತರಹಳ್ಳಿ ಸುತ್ತಮುತ್ತ ಸ್ವಚ್ಛತೆ ನಡೆಸಲಾಯಿತು. ಡೆಂಗ್ಯು ಬಗ್ಗೆ ಜನಜಾಗೃತಿ ಮೂಡಿಸಲಾಯಿತು.ಸೊಳ್ಳೆಗಳ ನಿಯಂತ್ರಣಕ್ಕೆ ಔಷಧ ಸಿಂಪಡಿಸಲಾಯಿತು. ಪೌರಕಾರ್ಮಿಕರನ್ನು ಅವಧೂತರು ಸನ್ಮಾನಿಸಿದರು. ಶಾಸಕ ಎಂ. ಕೃಷ್ಣಪ್ಪ, ಟ್ರಸ್ಟ್‌ನ ಇದರ ಮಣಿ ಹೆಗ್ಡೆ ಸೇರಿದಂತೆ ನೂರಾರು ಅವಧೂತ ಅನುಯಾಯಿಗಳು ಮತ್ತಿತರರಿದ್ದರು.