ಅನಂತ್, ರಾಧಿಕಾ ಪ್ರತಿಜ್ಞಾವಿಧಿ ಸರಮಾರಂಭ
ಮುಂಬೈ.ಜು.೧೩- ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ತಮ್ಮ ಗೆಳತಿ ಜತೆ ರಾಧಿಕಾ ಇಂದು ನಡೆಯುವ ಅದ್ಧೂರಿ ಸಮಾರಂಭದಲ್ಲಿ ಪ್ರತಿಜ್ಞೆ ತೆಗೆದುಕೊಳ್ಳಲಿದ್ದಾರೆ.
ಜತೆಗೆ ಇಂದು ಶುಭ್ ಆರ್ಶೀವಾದ್ ಸಮಾರಂಭ ಇಂದು ನಡೆಯಲಿದೆ. ನಾಳೆ ಮಂಗಳ ಉತ್ಸವ್ ಸಮಾರಂಭ ನೆರವೇರಲಿದೆ. ನಿನ್ನೆ ಜಿಯೋ ವರ್ಲ್ಡ್ ಕನ್ವೆನ್ಶನ್ ಸೆಂಟರ್‌ನಲ್ಲಿ ವಿವಾಹ ಸಮಾರಂಭ ನೆರವೇರಿದೆ. ಈ ದಶಕದ ಅದ್ದೂರಿ ಮದುವೆ ಇದಾಗಿದೆ.
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ತಮ್ಮ ಬ್ಲಾಗ್‌ನಲ್ಲಿ ಅದ್ಧೂರಿ ಮದುವೆ ಸಮಾರಂಭದ ಸಂಭ್ರಮವನ್ನು ಬರೆದುಕೊಂಡಿದ್ದಾರೆ. ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಪ್ರಿಯಾಂಕಾ ಚೋಪ್ರಾ, ರಜನಿಕಾಂತ್ ಸಮಾರಂಭದಲ್ಲಿ ಡ್ಯಾನ್ಸ್ ಮಾಡಿ ಸಮಾರಂಭಕ್ಕೆ ಮೆರೆಗು ನೀಡಿ ನವ ದಂಪತಿಗಳಿಗೆ ಶುಭ ಕೋರಿದ್ದಾರೆ.
ನಟ ಶಾರುಖ್ ಖಾನ್, ಅಮಿತಾಬ್ ಬಚ್ಚನ್ ಮತ್ತು ರಜನಿಕಾಂತ್ ಅವರ ಆರ್ಶೀವಾದ ಪಡೆದರು.ಸಚಿನ್ ತೆಂಡೂಲ್ಕರ್ ಮತ್ತು ರಜನಿಕಾಂತ್ ಇಬ್ಬರು ಒಟ್ಟಿಗೆ ಕುಳಿತು ಸಮಾರಂಭ ವೀಕ್ಷಿಸಿದರು.
ಖ್ಯಾತ ಯೂಟ್ಯಬರ್ ರಣವೀರ್ ಅಲ್ಲಾಹ್ಬಾದಿಯಾ ನೀಲಿಬಣ್ಣದ ಕುರ್ತಾ ಧರಿಸಿ ಬಂದಿದ್ದರು.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಧಿಕಾ ಇಂದು ಸಿಂಧೂರಿ ಕೆಂಪು ಬಣ್ಣದ ಲೆಹಂಗದಲ್ಲಿ ಮಿಂಚಿದ್ದಾರೆ. ಮನೀಶ್ ಮಲ್ಹೋತ್ರಾ ವಸ್ತ್ರವಿನ್ಯಾಸ ಮಾಡಿದ್ದಾರೆ.
ವರ್ಣರಂಜಿತ ಸಮಾರಂಭದಲ್ಲಿ ನಡೆಯಲಿದೆ. ಪ್ರಿ ವೆಟ್ಟಿಂಗ್ ಸಂಭ್ರಮ ಈಗಾಗಲೇ ಜಾಮ್‌ನಗರದಲ್ಲಿರುವ ಗ್ರ್ಯಾಂಡ್‌ಬಾಶ್‌ನಲ್ಲಿ ಆರಂಭವಾಗಿದೆ. ವಿಶ್ವದ ಶ್ರೇಷ್ಠ ಗಣ್ಯವ್ಯಕ್ತಿಗಳಾದ ಬಿಲ್‌ಗೇಟ್ಸ್, ಮಾರ್ಕ್ ಜೂಕ್‌ಬರ್ಗ್ ಮತ್ತು ಇವಾನಾ ಟ್ರಂಪ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.