ಅದ್ಧೂರಿ ಮುತ್ಯಾಲಮ್ಮ ಪಲ್ಲಕ್ಕಿ ಉತ್ಸವ
ಕೆ.ಆರ್.ಪುರ, ಜು.೧೩: ಮಹದೇವಪುರ ಕ್ಷೇತ್ರದ ಹೂಡಿಯ ತಿಗಳರಪಾಳ್ಯದಲ್ಲಿ ಶ್ರೀ ಮುತ್ಯಾಲಮ್ಮ ದೇವಿ, ಶಿವ ಪಾರ್ವತಿ ಪಲ್ಲಕ್ಕಿ ಉತ್ಸವ ಹಾಗೂ ಯಾತ್ರಾ ಮಹೋತ್ಸವವನ್ನು ಸಮಾಜಸೇವಕ ಹೂಡಿ ಚಿನ್ನಿ ರಾಮಚಂದ್ರ ನೇತೃತ್ವದಲ್ಲಿ ಹಾಗೂ ಹೂಡಿ ಗ್ರಾಮಸ್ಥರು ಸಮ್ಮುಖದಲ್ಲಿ ವಿಜೃಂಭಣೆಯಿಂದ ನೇರವೇರಿತು.
ಮುಂಜಾನೆ ಉತ್ಸವದೊಂದಿಗೆ ತಮಟೆ ವಾದ್ಯ , ವೀರಗಾಸೆ , ಹಾಗೂ ಡೊಲ್ಲು ಕುಣಿತ ವಾದ್ಯಗಳೊಂದಿಗೆ ನೂರಾರು ಭಕ್ತಾದಿಗಳು ಸಾಗಿದರು . ಈ ವೇಳೆ ಸಮಾಜಸೇವಕ ಹೂಡಿ ಚಿನ್ನಿ ರಾಮಚಂದ್ರ ಅವರು ಮಾತನಾಡಿ ಕಡಪದಲ್ಲಿ ನೆಲೆಸಿರುವ ಸಪ್ತಮಾತೃಕೆಯರ ಪುಣ್ಯಕ್ಷೇತ್ರಕ್ಕೆ ಪ್ರತಿವರ್ಷ ಪಲ್ಲಕ್ಕಿ ಉತ್ಸವ ಮುಖಾಂತರ ತೆರಲಿ ದೈವವನ್ನು ಭಕ್ತಿ ಭಾವದಿಂದ ಆರಾಧಿಸಲಾಗುತ್ತಿದೆ .ಹೂಡಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಮುತ್ಯಾಲಮ್ಮ ದೇವಿಗೆ , ಕಾಲದ ಹಿಂದೆ ತಂತ್ರ ವಿದ್ಯೆ ಮೂಲಕ ಮಾಟ ಮಾಂತ್ರ ಮಾಡಿ ದೇವಿಯನ್ನು ಬಂಧಿಸುವ ಕೆಲಸಕ್ಕೆ ಕೆಲವರು ಮುಂದಾಗಿದ್ರು , ಆ ಬಂಧನದಿಂದ ದೇವಿಯನ್ನು ಮುಕ್ತಿಗೊಳಿಸಿ ಮತ್ತೆ ಶಕ್ತಿ ತುಂಬುವ ಸಲುವಾಗಿ ಕಡಪದಲ್ಲಿ ನೆಲೆಸಿರುವ ಸಪ್ತಮಾತೃಕೆಯರ ದೇಗುಲಕ್ಕೆ ತರಲಿ ಮುತ್ಯಾಲಮ್ಮ ದೇವಿಗೆ ಅರಿಶಿನ ಕುಂಕುಮವನ್ನು ನೀಡಿ ಆ ಭಾಗದಲ್ಲಿರುವ ೧೦೧ ಕಲ್ಯಾಣಿಗಳ ದಿವ್ಯ ತೀರ್ಥದೊಂದಿಗೆ ಅಭಿಷೇಕ ಮಾಡಿ ದೇವಿಯನ್ನು ಆರಾಧಿಸುವಂತ ಕೆಲಸ ಮಾಡಲಾಗುತ್ತಿದೆ . ತಲ ತಲಾಂತರದಿಂದ ಈ ಒಂದು ಪದ್ಧತಿ ನಡೆಯುತ್ತಾ ಬರುತ್ತಿತ್ತು ಮುಂದಿನ ಪೀಳಿಗೆಗೂ ಈ ಯಾತ್ರೆ ಬಳುವಳಿಯಾಗಿ ಸಲ್ಲಬೇಕು ದೇವಿಯ ಆಶೀರ್ವಾದಲ್ಲಿ ಕರುನಾಡು ಸುಭಿಕ್ಷೆಯಾಗಿರಬೇಕು ಎಂದರು .