ಕುರಾನ್ ನಮಗೆ ಮೊದಲ ಸಂವಿಧಾನ
ಶ್ರೀನಗರ,ಜು.೧೨-ಜಮ್ಮು-ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಮಹಿಳಾ ಘಟಕದ ಅಧ್ಯಕ್ಷೆ ಶಮೀನಾ ಫಿರ್ದೌಸ್ ಅವರು ಕುರಾನ್ ನಮಗೆ ಮೊದಲ ಸಂವಿಧಾನವಾಗಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಆದರೆ ಇಲ್ಲಿ ಇನ್ನೊಂದು ವಿಷಯ ಹೇಳುತ್ತೇನೆ. ನಮ್ಮ ಮುಸ್ಲಿಂ ಕಾನೂನನ್ನು ಪ್ರಶ್ನಿಸುವ ಯಾವುದನ್ನೂ ನಾವು ಒಪ್ಪಿಕೊಳ್ಳುವುದಿಲ್ಲ. ಅಲ್ಲಾಹನು ಕಳುಹಿಸಿದ ದೇವದೂತನು ಬರೆದ ಕುರಾನ್‌ನಲ್ಲಿ ನಾವು ಏನನ್ನೂ ಬದಲಾಯಿಸುವುದಿಲ್ಲ. ಆದರೆ ನಾವು ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಚ್ಛೇದಿತ ಮುಸ್ಲಿಂ ಮಹಿಳೆಯರು ಜೀವನಾಂಶಕ್ಕೆ ಅರ್ಹರು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಬಗ್ಗೆ ಶಮೀನಾ ಫಿರ್ದೋಸ್ ಪ್ರತಿಕ್ರಿಯೆ ನೀಡಿದ್ದಾರೆ. ಕುರಾನ್ ಹೇಳುವ ಮಾರ್ಗದಲ್ಲಿ ನಡೆಯುತ್ತೇವೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್‌ನ ತೀರ್ಪು ಉತ್ತಮವಾಗಿದೆ. ಆದರೆ ವಿಚ್ಛೇದಿತ ಮಹಿಳೆಯರಿಗೆ ಜೀವನಾಂಶ ಪಡೆಯಲು ಈಗಾಗಲೇ ಕಾನೂನು ಇದೆ. ಇದು ಮುಸ್ಲಿಂ ಕಾನೂನಿನ ಪ್ರಕಾರ. ಮುಸ್ಲಿಂ ಮಹಿಳೆಯರು ಈಗಾಗಲೇ ಜೀವನಾಂಶ ಪಡೆಯುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.