ಅಮರನಾಥ ಯಾತ್ರೆ ಬೇಸ್ ಕ್ಯಾಂಪಿಗೆ ತೆರಳಿದ ೫,೮೦೦ ಯಾತ್ರಿಕರ ತಂಡ
ಜಮ್ಮು,ಜು.೯-ಜಮ್ಮು ಕಾಶ್ಮೀರದ ವಾರ್ಷಿಕ ಅಮರನಾಥ ಯಾತ್ರೆಗೆ ೫,೮೦೦ ಕ್ಕೂ ಹೆಚ್ಚು ಯಾತ್ರಾರ್ಥಿಗಳ ಹೊಸ ತಂಡ ಜಮ್ಮು ನಗರದಿಂದ ಕಾಶ್ಮೀರದ ಅವಳಿ ಬೇಸ್ ಕ್ಯಾಂಪ್‌ಗಳಿಗೆ ತೆರಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
೩,೮೮೦ ಮೀಟರ್ ಎತ್ತರದ ಗುಹಾ ದೇಗುಲಕ್ಕೆ ಪೂಜೆ ಸಲ್ಲಿಸಲು ನೋಂದಾಯಿಸಿಕೊಂಡ ಯಾತ್ರಾರ್ಥಿಗಳ ಸಂಖ್ಯೆ ೨,೦೭,೦೧೬ ಕ್ಕೆ ತಲುಪಿದ್ದು ಈ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಹೇಳಿದ್ಧಾರೆ
೧,೧೧೭ ಮಹಿಳೆಯರು ಮತ್ತು ೧೮ ಮಕ್ಕಳು ಸೇರಿದಂತೆ ೫,೪೩೩ ಯಾತ್ರಾರ್ಥಿಗಳನ್ನು ಒಳಗೊಂಡ ಹನ್ನೆರಡನೇ ತಂಡ ಭಗವತಿ ನಗರ ಮೂಲ ಶಿಬಿರದಿಂದ ಇಂದು ಮುಂಜಾನೆ ೩.೧೩ ಕ್ಕೆ ೨೧೩ ವಾಹನಗಳಲ್ಲಿ ಭದ್ರತಾ ಸಿಬ್ಬಂದಿಯ ಬೆಂಗಾವಲುಗಳೊಂದಿಗೆ ಹೊರಟಿತು ಎಂದು ಅವರು ತಿಳಿಸಿದ್ದಾರೆ.
೧೨೪ ವಾಹನಗಳಲ್ಲಿ ೩,೪೬೨ ಯಾತ್ರಾರ್ಥಿಗಳು ೪೮ ಕಿಮೀ ಸಾಂಪ್ರದಾಯಿಕ ಪಹಲ್ಗಾಮ್ ಮಾರ್ಗವನ್ನು ಬಳಿಸಿದ್ದು ೮೯ ವಾಹನಗಳಲ್ಲಿ ೧,೯೭೧ ಭಕ್ತರು ಕಡಿಮೆ ಆದರೆ ಕಡಿದಾದ ೧೪ ಕಿಮೀ ಬಾಲ್ಟಾಲ್ ಮಾರ್ಗವನ್ನು ಅಮರನಾಥನ ದರ್ಶನ ಪಡೆಯಲು ಆಯ್ಕೆ ಮಾಡಿಕೊಂಡಿದ್ದಾರೆ. ಇದರೊಂದಿಗೆ ಜೂನ್ ೨೮ ರಿಂದ ೬೭,೬೯೮ ಯಾತ್ರಾರ್ಥಿಗಳು ಜಮ್ಮು ಮೂಲ ಶಿಬಿರದಿಂದ ಕಣಿವೆಗೆ ತೆರಳಿದ್ದಾರೆ.
ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಮೊದಲ ಬ್ಯಾಚ್‌ಗೆ ಚಾಲನೆ ನೀಡಿದ ಜೂನ್ ೨೮ ರಿಂದ ೬೭,೬೯೮ ಯಾತ್ರಿಕರು ಜಮ್ಮು ಮೂಲ ಶಿಬಿರದಿಂದ ಕಣಿವೆಗೆ ತೆರಳಿದ್ದಾರೆ.
೫೨ ದಿನಗಳ ಯಾತ್ರೆಯು ಜೂನ್ ೨೯ ರಂದು ಕಾಶ್ಮೀರದ ಬಲ್ಟಾಲ್ ಮತ್ತು ಪಹಲ್ಗಾಮ್‌ನ ಅವಳಿ ಮೂಲ ಶಿಬಿರಗಳಿಂದ ಔಪಚಾರಿಕವಾಗಿ ಪ್ರಾರಂಭವಾಗಿದ್ದು ಮತ್ತು ಆಗಸ್ಟ್ ೧೯ ರಂದು ಮುಕ್ತಾಯಗೊಳ್ಳಲಿದೆ.ಕಳೆದ ವರ್ಷ ೪.೫ ಲಕ್ಷಕ್ಕೂ ಹೆಚ್ಚು ಯಾತ್ರಿಕರು ಅಮರತನಾಥದಲ್ಲಿರುವ ಶಿವಲಿಂಗದ ದರ್ಶನ ಪಡೆದಿದ್ದರು
ಬಿಗಿ ಭದ್ರತೆ
ಅಮರನಾಥ ಯಾತ್ರೆ ಕೈಗೊಂಡಿರುವ ಭಕ್ತಾಧಿಗಳಿಗೆ ಬಾರಿ ಬಿಗಿ ಭದ್ರತೆ ಒದಗಿಸಲಾಗಿದ್ದು ಯಾತ್ರೆಯ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.