೧೩೧ ಕಾಡು ಪ್ರಾಣಿಗಳು ಸಾವು
ಅಸ್ಸಾಂ, ಜು.೯-ವಿಶ್ವವಿಖ್ಯಾತ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಹದಲ್ಲಿ ಕನಿಷ್ಠ ೧೩೧ ಕಾಡು ಪ್ರಾಣಿಗಳು ಸಾವನ್ನಪ್ಪಿದ್ದು, ೯೬ ಇತರರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಸಿಕ್ಕಿಬಿದ್ದ ಘೆಂಡಾಮೃಗದ ಕರುವಿನ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಈ ವಿಡಿಯೋದ ಮೂಲಕ ಅವರು ಹಲವಾರು ವಾರಗಳಿಂದ ಪ್ರವಾಹದಿಂದ ತೀವ್ರವಾಗಿ ತತ್ತರಿಸಿರುವ ಪ್ರಸಿದ್ಧ ಉದ್ಯಾನವನದಲ್ಲಿನ ಕಾಡು ಪ್ರಾಣಿಗಳ ಅವಸ್ಥೆಯ ಮೇಲೆ ಬೆಳಕು ಚೆಲ್ಲಿದ್ದಾರೆ.