ಭಾರತದ ಅಭಿವೃದ್ಧಿ ವೇಗಕ್ಕೆ ಜಗತ್ತೇ ಆಶ್ಚರ್ಯ
ನವದೆಹಲಿ,ಜು.೯- ಕಳೆದ ೧೦ ವರ್ಷಗಳಲ್ಲಿ ದೇಶ ಸಾಧಿಸಿದ ಅಭಿವೃದ್ಧಿ ವೇಗವನ್ನು ನೋಡಿ ಜಗತ್ತೇ ಆಶ್ಚರ್ಯಚಕಿತವಾಗಿದೆ, ವಿಶ್ವದ ಜನರು ಭಾರತಕ್ಕೆ ಬಂದಾಗ, ’ಭಾರತ್ ಬದಲ್ ರಹಾ ಹೈ’- ಭಾರತ ಬದಲಾಗುತ್ತಿದೆ” ಎಂದು ಹೇಳುತ್ತಿದ್ದಾರೆ ಇದು ಭಾರತದ ಪರಿವರ್ತನೆ, ಪುನ ರ್ ನಿರ್ಮಾಣವನ್ನು ನಿರೂಪಿಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದ್ದಾರೆ.
೨೧ ನೇ ಶತಮಾನ ಭಾರತಕ್ಕೆ ಸೇರಿದ್ದು ಭಾರತ ವಿಶ್ವ ಬಂಧುವಾಗಿದೆ. ವಿಶ್ವಕ್ಕೆ ಹೊಸ ಆತ್ಮವಿಶ್ವಾಸ ನೀಡುತ್ತಿದೆ ಇಡೀ ಜಗತ್ತು, ಶಾಂತಿ, ಸಂವಾದ ಮತ್ತು ರಾಜತಾಂತ್ರಿಕತೆಯ ಬಗ್ಗೆ ಮಾತನಾಡುವಾಗ ಭಾರತದ ಹೊಸ, ಉದಯೋನ್ಮುಖ, ವಿಶ್ವ ಕ್ರಮ ಬಲವಾದ ಆಧಾರ ಸ್ತಂಭವಾಗಿ ಕಾಣುತ್ತಿದೆ ಎಂದು ಹೇಳಿದ್ದಾರೆ.
ಮಾಸ್ಕೋದಲ್ಲಿ ಭಾರತೀಯ ಸಮುದಾಯ ಉದ್ದೇಶಿಸಿ ಮಾತನಾಡಿದ ಅವರು ೧೪೦ ಕೋಟಿ ಭಾರತೀಯರು ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಗೆ ಬರಲು ಸಜ್ಜಾಗಿದ್ದಾರೆ ಎಂದರು.
ಭಾರತ ಕೇವಲ ೧೦ ವರ್ಷಗಳಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿದೆ. ಭಾರತ ಕೇವಲ ೧೦ ವರ್ಷಗಳಲ್ಲಿ ೪೦,೦೦೦ ಕಿಲೋಮೀಟರ್‌ಗಳಿಗಿಂತ ಹೆಚ್ಚು ರೈಲುಮಾರ್ಗಗಳನ್ನು ವಿದ್ಯುದ್ದೀಕರಣಗೊಳಿಸಿದೆ. ಜಗತ್ತು ಭಾರತದ ಶಕ್ತಿಯನ್ನು ಅರಿತುಕೊಂಡಿದೆ. ಇದೇ ಕಾರಣಕ್ಕೆ , ’ಭಾರತ್ ಬದಲ್ ರಹಾ ಹೈ ಎಂದು ಹೇಳುತ್ತಿದ್ದಾರೆ ಎಂದು ಹೇಳಿದರು.
ಆರ್ಥಿಕತೆಯನ್ನು ಕೋವಿಡ್ ಬಿಕ್ಕಟ್ಟಿನಿಂದ ಹೊರತಂದಿದ್ದೇವೆ, ಆದರೆ ಭಾರತ ತನ್ನ ಆರ್ಥಿಕತೆಯನ್ನು ಸಹ ಒಂದನ್ನಾಗಿ ಮಾಡಿದೆ” ಎಂದು ಹೇಳಿದ ಅವರು ಮೂಲಸೌಕರ್ಯಗಳ ಹೆಚ್ಚಳಕ್ಕೆ ಆದ್ಯತೆ ನೀಡಿದ್ದೇವೆ ಎಂದಿದ್ದಾರೆ.
ಆರೋಗ್ಯ ಸೇವೆಗಳನ್ನು ಸುಧಾರಿಸುತ್ತಿದ್ದೇವೆ, ಆದರೆ ದೇಶದ ಪ್ರತಿಯೊಬ್ಬ ಬಡವರಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದೇವೆ ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆ ಆಯುಷ್ಮಾನ್ ಭಾರತ್. ಯೋಜನೆ ಜಾರಿಗೆ ತಂದಿದ್ದೇವೆ ಎಂದರು.
ಭಾರತ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ, ವಿಶ್ವದ ಅತಿ ಎತ್ತರದ ಪ್ರತಿಮೆ ನಿರ್ಮಿಸಿದಾಗ, ಜಗತ್ತು ಹೇಳುತ್ತದೆ, ಭಾರತ ಬದಲಾಗುತ್ತಿದೆ ಮತ್ತು ಭಾರತವು ಹೇಗೆ ಬದಲಾಗುತ್ತಿದೆ ಎಂದು ಭಾರತ ತನ್ನ ೧೪೦ ಕೋಟಿ ನಾಗರಿಕರ ಬೆಂಬಲ ಸಹಕಾರ ನಂಬುತ್ತಿದೆ ಎಂದಿದ್ದಾರೆ.
ವಿಶ್ವದ ವಿವಿಧ ಭಾಗಗಳಲ್ಲಿ ವಾಸಿಸುವ ಭಾರತೀಯ ಸಹೋದರ ಸಹೋದರಿಯರು ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಕನಸನ್ನು ನನಸಾಗಿಸಲು ಬಯಸುತ್ತಾರೆ. ಮಾತೃಭೂಮಿಯ ಅಭಿವೃದ್ಧಿ ನಮ್ಮ ದೃಢ ಸಂಕಲ್ಪ ಎಂದಿದ್ದಾರೆ.
ಚಂದ್ರನ ಅಂಗಳ ಪ್ರವೇಶ
ಭಾರತ ನಿಗದಿಪಡಿಸಿದ ಗುರಿ ಸಾಧಿಸುವುದನ್ನು ಖಾತ್ರಿಪಡಿಸಿಕೊಳ್ಳುತ್ತಿದೆ. ಭಾರತ ಚಂದ್ರನ ಭಾಗಕ್ಕೆ ಚಂದ್ರಯಾನವ ಕೊಂಡೊಯ್ಯುವ ದೇಶವಾಗಿದ್ದು, ವಿಶ್ವದ ಯಾವುದೇ ದೇಶವನ್ನು ತಲುಪಲು ಸಾಧ್ಯವಾಗಲಿಲ್ಲ. ಭಾರತ ವಿಶ್ವಕ್ಕೆ ಡಿಜಿಟಲ್ ವಹಿವಾಟಿನ ಅತ್ಯಂತ ವಿಶ್ವಾಸಾರ್ಹ ಮಾದರಿಯನ್ನು ನೀಡುತ್ತಿರುವ ದೇಶ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು.
ಭಾರತ ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟಪ್ ಪರಿಸರ ವ್ಯವಸ್ಥೆ ಹೊಂದಿರುವ ದೇಶವಾಗಿದೆ ೨೦೧೪ರಲ್ಲಿ ನೂರಾರು ಸ್ಟಾರ್ಟಪ್‌ಗಳು ಇದ್ದವು, ಇಂದು ಲಕ್ಷಗಟ್ಟಲೆ ಸ್ಟಾರ್ಟ್‌ಅಪ್‌ಗಳಿವೆ, ಭಾರತ ಪೇಟೆಂಟ್‌ಗಳನ್ನು ದಾಖಲಿಸುವ ಮತ್ತು ದಾಖಲೆ ಸಂಖ್ಯೆಯಲ್ಲಿ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸುವ ದೇಶವಾಗಿದೆ ಎಂದಿದ್ದಾರೆ.
ಸತತ ಮೂರನೇ ಬಾರಿಗೆ ಅಧಿಕಾರಕ್ಕೆ
ಭಾರತದಲ್ಲಿ ೬೦ ವರ್ಷಗಳ ನಂತರ ಭಾರತದಲ್ಲಿ ಮೂರನೇ ಬಾರಿಗೆ ಸರ್ಕಾರ ಆಯ್ಕೆಯಾಗುತ್ತಿರುವುದು ಅತ್ಯಂತ ದೊಡ್ಡ ವಿಷಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಅರುಣಾಚಲ ಪ್ರದೇಶ, ಸಿಕ್ಕಿಂ, ಆಂಧ್ರಪ್ರದೇಶ ಮತ್ತು ೪ ರಾಜ್ಯಗಳಲ್ಲಿ ಚುನಾವಣೆಗಳು ನಡೆದಿವೆ. ಒಡಿಶಾ ಮತ್ತು ಎನ್‌ಡಿಎ ಈ ನಾಲ್ಕು ರಾಜ್ಯಗಳಲ್ಲಿ ಕ್ಲೀನ್ ಸ್ವೀಪ್ ಬಹುಮತದೊಂದಿಗೆ ಗೆದ್ದಿದೆ ಮತ್ತು ಒಡಿಶಾದಲ್ಕಿ ದೊಡ್ಡ ಕ್ರಾಂತಿ ತರಲಾಗಿದೆ ಎಂದು ಹೇಳಿದರು.