ನಾಗೇಂದ್ರಗೆ ಎಸ್‌ಐಟಿ ಗ್ರಿಲ್
(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಜು.೯-ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ತನಿಖೆಯನ್ನು ತೀವ್ರಗೊಳಿಸಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಮಾಜಿ ಸಚಿವ, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಅವರನ್ನು ಇಂದು ತೀವ್ರ ವಿಚಾರಣೆ ನಡೆಸಿದರು.ಶಾಸಕ ನಾಗೇಂದ್ರ ಅವರ ಜೊತೆ ನಿಗಮದ ಅಧ್ಯಕ್ಷರು ಆಗಿರುವ ರಾಯಚೂರು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸನಗೌಡ ದದ್ದಲ್ ಅವರು ಎಸ್ ಐಟಿ ವಿಚಾರಣೆಗೆ ಹಾಜರಾಗಿದ್ದು,ಇವರಿಬ್ಬರನ್ನು ಅಧಿಕಾರಿಗಳು ವಿಚಾರಣೆ ಕೈಗೊಂಡಿದ್ದಾರೆ.ಶಾಸಕ ನಾಗೇಂದ್ರ ಹಾಗೂ ನಿಗಮದ ಅಧ್ಯಕ್ಷ ಶಾಸಕ ಬಸನಗೌಡ ದದ್ದಲ್ ಅವರಿಗೆ ಹಗರಣದ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಜುಲೈ ೯ರಂದು ಸಿಐಡಿ ಕಚೇರಿಗೆ ಬರುವಂತೆ ಸೂಚಿಸಿ ಎಸ್‌ಐಟಿ ನೋಟಿಸ್ ಜಾರಿ ಮಾಡಿತ್ತು.ನಿಗಮದ ಬ್ಯಾಂಕ್ ಖಾತೆಯಿಂದ ೯೪.೯೭ ಕೋಟಿ ರೂಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪದಡಿ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಎಸ್‌ಐಟಿ ನಡೆಸುತ್ತಿದ್ದು,ವಿಚಾರಣೆಗೆ ಹಾಜರಾದ ಇವರಿಬ್ಬರಿಂದ ಮಾಹಿತಿಯನ್ನು ಅಧಿಕಾರಿಗಳು ಪಡೆದಿದ್ದಾರೆ.ಎಸ್‌ಐಟಿ ಮುಖ್ಯಸ್ಥ ಮನೀಶ್ ಖರ್ಬೀಕರ್ ಅವರ ನೇತೃತ್ವದಲ್ಲಿ ವಿಚಾರಣೆಯಲ್ಲಿ ಇಬ್ಬರಿಗೂ ಹಗರಣದ ಸಂಬಂಧ ಪಟ್ಟಿ ಮಾಡಿಕೊಂಡ ಕೆಲವು ಪ್ರಶ್ನೆ ಕೇಳಿ ಇಬ್ಬರ ಹೇಳಿಕೆಗಳನ್ನೂ ದಾಖಲು ಮಾಡಿಕೊಳ್ಳಲಾಗಿದೆ.ಸಿಐಡಿ ಕಚೇರಿಗೆ ಬೆಳಿಗ್ಗೆ ೧೧ರ ವೇಳೆ ಆಗಮಿಸಿ ದ ಶಾಸಕರಾದ ನಾಗೇಂದ್ರ ನಿಗಮದ ಅಧ್ಯಕ್ಷ, ಶಾಸಕ ಬಸನಗೌಡ ದದ್ದಲ್ ಅವರನ್ನು ಎಸ್ ಐಟಿ ಅಧಿಕಾರಿಗಳು ಸುಧೀರ್ಘ ವಿಚಾರಣೆ ಕೈಗೊಂಡಿದ್ದಾರೆ.ನಿಗಮದಲ್ಲಿ ಕೋಟ್ಯಂತರ ಅವ್ಯವಹಾರ ಅಧಿಕಾರಿಯೊಬ್ಬರ ಆತ್ಮಹತ್ಯೆ,ಹಣ ವಿವಿಧ ಖಾತೆಗಳಿಗೆ ವರ್ಗಾವಣೆ ಸೇರಿ ಹಲವು ಪ್ರಶ್ನೆಗಳಿಗೆ ಹೇಳಿಕೆಯನ್ನು ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾಗಿದ್ದ ಬಿ.ನಾಗೇಂದ್ರ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಹೊರಬಿದ್ದ ಬಳಿಕ ಜೂನ್ ೬ರಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.ಬಿ.ನಾಗೇಂದ್ರ ಅವರ ಆಪ್ತ ನೆಕ್ಕಂಟಿ ಕಾಯ ನಾಗರಾಜ್ ಹಾಗೂ ಅವರ ಸಂಬಂಧಿ ಮಾ ನಾಗೇಶ್ವರ ರಾವ್ ಅವರನ್ನು ಎಸ್‌ಐಟಿ ಮದ ಬಂಧಿಸಿತ್ತು. ಅವರಿಬ್ಬರೂ ವಿಚಾರಣೆ ತೆಗೆ ವೇಳೆ ನೀಡಿದ್ದ ಮಾಹಿತಿ ಆಧರಿಸಿ ಮ ನಾಗೇಂದ್ರ ಅವರಿಗೆ ಜುಲೈ ೫ರಂದು ನೋಟಿಸ್ ಜಾರಿ ಮಾಡಲಾಗಿತ್ತು. ಬಸನಗೌಡ ದದ್ದಲ್ ಅವರ ಆಪ್ತರೊಬ್ಬರಿಗೆ ಹಣ ಸಂದಾಯ ಆಗಿರುವ ಆರೋಪದ ಮೇಲೆ ಬಿದ್ದಲ್ ಅವರಿಗೂ ಅಂದೇ ನೋಟಿಸ್ ನೀಡಲಾಗಿತ್ತು’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಹೊಟೇಲ್ ನಲ್ಲಿ ಸಭೆ:
ಈ ನಡುವೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಅವ್ಯವಹಾರ ಸಂಬಂಧ ಕಳೆದ ಮೇ ೨೪ರಂದು ನಗರದ ಹೋಟೆಲ್‌ನಲ್ಲಿ ರಹಸ್ಯ ಸಭೆ ನಡೆದಿರುವ ಆಡಿಯೋ ವೈರಲ್ ಆಗಿದೆ. ಪ್ರಕರಣದ ಆರೋಪಿಗಳ ನಡುವೆ ನಡೆದಿದೆ ಎನ್ನಲಾದ ಆಡಿಯೋ, ವಿಡಿಯೋ ವೈರಲ್ ಆಗಿದೆ. ಇದು ಲೆಕ್ಕ ಪರಿಶೋಧಕ ಪರಶುರಾಮ್ ಮತ್ತು ಎಂಡಿ ಪದ್ಮನಾಭ್ ನಡುವಣ ಮಾತುಕತೆಗೆ ಸಂಬಂಧಿಸಿದ್ದಾಗಿದೆ.ಹೋಟೆಲ್‌ಗೆ ಪರಶುರಾಮ್‌ರನ್ನು ಕರೆಸಿಕೊಂಡಿದ್ದ ಎಂಡಿ ಪದ್ಮನಾಭ್ ಸಭೆ ನಡೆಸಿದ್ದರು ಪ್ರಕರಣದಲ್ಲಿ ಪದ್ಮನಾಭ್ ಎ೭ ಹಾಗೂ ಪರಶುರಾಮ್ ಎ೮ ಆಗಿದ್ದಾರೆ. ಉಭಯರ ನಡುವೆ ನಡೆದ ಮಾತುಕತೆ ವೇಳೆ, ‘ಹಗರಣದ ವಿಚಾರ ಅಧ್ಯಕ್ಷರಿಗೆ ಹೇಳೋಣ್ವಾ’ ಎಂದು ಪರಶುರಾಮ್ ಹೇಳಿದ್ದರು. ಇದಕ್ಕುತ್ತರವಾಗಿ, ‘ಹೇಳಿದ್ರೆ ರಾದ್ಧಾಂತ ಆಗುತ್ತೆ, ಸ್ವಲ್ಪ ದಿನ ಬೇಡ’ ಎಂದು ಪದ್ಮನಾಭ್ ಹೇಳಿದ್ದರು. ಇದಾದ ಎರಡೇ ದಿನಗಳಲ್ಲಿ ಚಂದ್ರಶೇಖರ್ ಆತ್ಮಹತ್ಯೆಗೆ ಶರಣಾಗಿದ್ದರು.
ಅಧಿಕಾರ ದುರ್ಬಳಕೆ ನಿಜ ಡಿಕೆಶಿ
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಧಿಕಾರಿಗಳು ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದು ನಿಜ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಪ್ಪಿಕೊಂಡಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಅಧಿಕಾರಿಗಳು ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿರುವುದು ನಿಜ. ಹಾಗೆಂದ ಮಾತ್ರಕ್ಕೆ ಈ ನಿಗಮದ ಅವ್ಯವಹಾರದಲ್ಲಿ ಮಂತ್ರಿಗಳು, ಶಾಸಕರು ಶಾಮೀಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ಸಿಐಡಿ ಪ್ರಕರಣದ ತನಿಖೆ ನಡೆಸುತ್ತಿದೆ. ಅಧಿಕಾರಿಗಳಿಗೆ ಮುಕ್ತ ಅವಕಾಶ ನೀಡಿದ್ದೇವೆ. ಹಗರಣ ಕುರಿತಂತೆ ಬಿ. ನಾಗೇಂದ್ರ ಅವರಿಂದ ರಾಜೀನಾಮೆ ಪಡೆದಿದ್ದೇವೆ. ತನಿಖೆಗೆ ಸಹಕಾರ ನೀಡುವುದಾಗಿ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಈ ಅವ್ಯವಹಾರದಲ್ಲಿ ಅಧಿಕಾರಿಗಳು ಶಾಮೀಲಾಗಿರುವುದು ಗೊತ್ತಾಗಿದೆ. ಅಧಿಕಾರಿಗಳ ಆಡಿಯೋ ವೀಡಿಯೋ ಬಗ್ಗೆ ಮಾಹಿತಿ ಇಲ್ಲ ಎಂದರು.