ಫ್ರಾನ್ಸ್ ಪ್ರಧಾನಿ ರಾಜೀನಾಮೆ
ಪ್ಯಾರಿಸ್,ಜು.೮- ಫ್ರಾನ್ಸ್ ಪ್ರಧಾನಿ ಗೇಬ್ರಿಯಲ್ ಅಟ್ಟಲ್ ರಾಜೀನಾಮೆ ಘೋಷಿಸಿದ್ದು, ಉತ್ತರಾಧಿಕಾರಿ ನೇಮಕ ಮಾಡುವವರೆಗೂ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲು ನಿರ್ಧರಿಸಿದ್ದಾರೆ
ಮತದಾನದ ಆರಂಭಿಕ ಅಂದಾಜಿನ ಪ್ರಕಾರ ಎನ್‌ಎಫ್ಪಿ ಬಹುತ್ವ ಗಳಿಸಿದೆ ಆದರೆ ಸಂಪೂರ್ಣ ಬಹುಮತದ ಕೊರತೆಯಿದೆ, ಇಮ್ಯಾನ್ಯುಯಲ್ ಮ್ಯಾಕ್ರನ್ ಅವರ ಆಡಳಿತ ಪಕ್ಷ ಎರಡನೇ ಸ್ಥಾನದಲ್ಲಿದೆ ಮತ್ತು ಬಲಪಂಥೀಯ ನ್ಯಾಷನಲ್ ರಾಲಿ ಮೂರನೇ ಸ್ಥಾನದಲ್ಲಿದೆ.
ಜುಲೈ ೨೬ ರಂದು ಪ್ಯಾರಿಸ್ ಒಲಿಂಪಿಕ್ಸ್ ಪ್ರಾರಂಭವಾಗಲಿರುವುದರಿಂದ ರಾಜೀನಾಮೆ ತಿರಸ್ಕರಿಸಿದರೆ, “ಕರ್ತವ್ಯದ ಬೇಡಿಕೆಗಳಿರುವವರೆಗೂ” ಅಧಿಕಾರದಲ್ಲಿ ಮುಂದುವರಿಯಲು ಸಿದ್ಧ ಎಂದು ಗೇಬ್ರಿಯಲ್ ಅಟ್ಟಾಲ್ ಹೇಳಿದ್ದಾರೆ.
“ಈ ಅಭಿಯಾನದ ಆರಂಭದಿಂದಲೂ,ಮೂರು ಅಪಾಯಗಳ ವಿರುದ್ಧ ಎಚ್ಚರಿಕೆ ನೀಡಿದ್ದೇನೆ ಫ್ರಾನ್ಸ್ ಇನ್ಸೌಮೈಸ್ ಪಕ್ಷದ ಸಂಪೂರ್ಣ ಬಹುಮತ, ರಾಷ್ಟ್ರೀಯ ರ್ಯಾಲಿಯ ಸಂಪೂರ್ಣ ಬಹುಮತದ ಅಪಾಯ, ಮೌಲ್ಯಗಳು ಮತ್ತು ತತ್ವ ಸಾಕಾರಗೊಳಿಸುವ ಆಂದೋಲನ ಕಣ್ಮರೆಯಾಗುವ ಅಪಾಯವಿದೆ ಎಂದಿದ್ದಾರೆ