ಆರು ಹಿಜ್‌ಬುಲ್ ಉಗ್ರರ ಹತ್ಯೆ
ಶ್ರೀನಗರ,ಜು.೮-ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‍ನಲ್ಲಿ ಆರು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರನ್ನು ಭದ್ರತಾ ಪಡೆ ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದು ಬಂಕರ್‌ನಲ್ಲಿ ಅಡಗಿದ್ದ ಮಾಹಿತಿ ಲಭ್ಯವಾಗಿದೆ
ವಾರ್ಡ್‌ರೋಬ್‌ನ ಹಿಂದಿನ ಬಂಕರ್‌ನಲ್ಲಿ ಆರು ಉಗ್ರರು ಅಡಗಿ ಕುಳಿತಿದ್ದ ಮಾಹಿತಿ ಆಧರಿಸಿ ಭದ್ರತಾ ಸಿಬ್ಬಂದಿ ಏನ್‌ಕೌಂಟರ್ ನಡೆಸಿ ಹತ್ಯೆ ಮಾಡಿದ್ದು ವಾರ್ಡ್ ರೋಬ್‌ನಲ್ಲಿ ಉಗ್ರರು ಅಡಗಿ ಕುಳಿತಿದ್ದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಎನ್‌ಕೌಂಟರ್‌ನಲ್ಲಿ ಹತರಾದ ಆರು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರು,ಚಿನ್ನಿಗಮ್ ಫ್ರಿಸಾಲ್‌ನ ಅಡಗುತಾಣದಲ್ಲಿ ತಂಗಿದ್ದರು, ಅಲ್ಲಿ ಅಲ್ಮೇರಾದಲ್ಲಿ ಬಂಕರ್ ನಿರ್ಮಿಸಿದ್ದರು. ಭಯೋತ್ಪಾದಕರಿಗೆ ಆಶ್ರಯ ನೀಡುವಲ್ಲಿ ಸ್ಥಳೀಯರು ಭಾಗಿಯಾಗಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಕುಗಮ್‌ನ ಚಿನ್ನಿಗಮ್ ಫ್ರಿಸಲ್ ಪ್ರದೇಶದಲ್ಲಿನ ನಾಗರಿಕ ನಿವಾಸದಲ್ಲಿ ವಾರ್ಡ್‌ರೋಬ್‌ನ ಹಿಂದೆ ಮರೆಮಾಚಲ್ಪಟ್ಟಿರುವ ಸಣ್ಣ ಮತ್ತು ಉತ್ತಮವಾಗಿ ಭದ್ರಪಡಿಸಿದ ಕಾಂಕ್ರೀಟ್ ಅಡಗುತಾಣವನ್ನು ಭದ್ರತಾ ಅಧಿಕಾರಿಗಳು ಪರಿಶೀಲಿಸಿದ್ದಾರೆ.
ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ವೀಡಿಯೊದಲ್ಲಿ, ಭದ್ರತಾ ಅಧಿಕಾರಿಗಳು ನಾಗರಿಕ ನಿವಾಸದಲ್ಲಿ ವಾರ್ಡ್‌ರೋಬ್‌ನ ಹಿಂದೆ ಮರೆಮಾಡಲಾಗಿರುವ ಸಣ್ಣ ಭದ್ರಪಡಿಸಿದ ಕಾಂಕ್ರೀಟ್ ಅಡಗುತಾಣ ಪರಿಶೀಲಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ
ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಒಟ್ಟು ಆರು ಹಿಜ್ಬುಲ್ ಭಯೋತ್ಪಾದಕರು ಈ ಕಾರ್ಯಾಚರಣೆಯಲ್ಲಿ ಇಬ್ಬರು ಭಾರತೀಯ ಸೇನೆಯ ಸೈನಿಕರು ಸಹ ಸಾವನ್ನಪ್ಪಿದ್ದರು.
ಪ್ಯಾರಾ ಕಮಾಂಡೋ ಸೇರಿದಂತೆ ಇಬ್ಬರು ಸೇನಾ ಯೋಧರು ಭಯೋತ್ಪಾದಕರ ವಿರುದ್ಧ ಹೋರಾಡುವಾಗ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ.
ಕಾರ್ಯಾಚರಣೆಯ ಕುರಿತು ಮಾತನಾಡಿದ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ಆರ್ ಆರ್ ಸ್ವೈನ್, ಇಷ್ಟು ದೊಡ್ಡ ಸಂಖ್ಯೆಯ ಭಯೋತ್ಪಾದಕರನ್ನು ತಟಸ್ಥಗೊಳಿಸಿರುವುದು ಪ್ರಮುಖ ಸಾಧನೆಯಾಗಿದೆ ಎಂದು ಹೇಳಿದ್ದಾರೆ.