ಅಂಬಾನಿ ನಿವಾಸದಲ್ಲಿ ಮದುವೆ ಸಡಗರ
ಮುಂಬೈ,ಜು.೬-ದಿಗ್ಗಜ ಉದ್ಯಮಿ ಮುಖೇಶ್ ಅಂಬಾನಿ ಮನೆಯಲ್ಲಿ ಮದುವೆಯ ಸಡಗರ ಶುರುವಾಗಿದೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಸಂಗೀತ ಸಮಾರಂಭ ಜುಲೈ ೫ ರಂದು ಜಿಯೋ ಸೆಂಟರ್‌ನಲ್ಲಿ ನಡೆಯಿತು. ಇಡೀ ಬಾಲಿವುಡ್ ಅಲ್ಲಿ ನೆರೆದಿತ್ತು. ಪಾಪ್ ಗಾಯಕ ಜಸ್ಟಿನ್ ಬೈಬರ್ ಕೂಡ ಆಗಮಿಸಿ ತಮ್ಮ ಸಂಗೀತ ಕಾರ್ಯಕ್ರಮದಿಂದ ಸಮಾರಂಭಕ್ಕೆ ಹೆಚ್ಚಿನ ರಂಗು ತುಂಬಿದ್ದಾರೆ. ಅವರು ಅದ್ಭುತ ಪ್ರದರ್ಶನವನ್ನು ನೀಡಿದ್ದಾರೆ ಅದರ ಅನೇಕ ವೀಡಿಯೊಗಳು ಹೊರಬಂದಿವೆ. ಅಲ್ಲಿ ಎಲ್ಲರೂ ಅವನ ಹಾಡುಗಳಿಗೆ ನೃತ್ಯ ಮಾಡುತ್ತಿದ್ದಾರೆ. ಯಶಸ್ವಿ ಕಾರ್ಯಕ್ರಮ ನಂತರ , ಇಂದು ಶನಿವಾರ ಬೆಳಿಗ್ಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
. ಸದ್ಯ ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಸಂಗೀತದಲ್ಲಿ ಜಸ್ಟಿನ್ ಬೀಬರ್ ಅವರನ್ನು ಕರೆತಂದ ಅಂಬಾನಿ ಕುಟುಂಬವು ೮೩ ಕೋಟಿ ರೂ.ಗಳ ಸಂಭಾವನೆಯನ್ನು ಬೀಬರ್‌ಗೆ ನೀಡಿದೆ ಎಂದು ವರದಿಯಾಗಿದೆ.
ಬೈಬರ್ ಮುಂಬೈನಿಂದ ಮಿಯಾಮಿಗೆ ತೆರಳಿದ್ದಾರೆ.
ವೈರಲ್ ಭಯಾನಿ ಅವರು ಹಂಚಿಕೊಂಡ ವೀಡಿಯೊದಲ್ಲಿ, ಜಸ್ಟಿನ್ ಶನಿವಾರದ ಮುಂಜಾನೆ ಮುಂಬೈನ ಖಾಸಗಿ ಟರ್ಮಿನಲ್‌ಗೆ ಆಗಮಿಸುತ್ತಿರುವುದನ್ನು ಕಾಣಬಹುದು. ಅವರ ಜೊತೆಯಲ್ಲಿ ಅವರ ಮ್ಯಾನೇಜರ್ ಮತ್ತು ಇತರ ಸಿಬ್ಬಂದಿ ಇದ್ದರು.