ಶೀಘ್ರ ಫಲಾನುಭವಿಗಳಿಗೆ ಗ್ಯಾರಂಟಿ ಹಣ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು. ೬- ಸದ್ಯದಲ್ಲೇ ಕಳೆದ ಜೂನ್ ತಿಂಗಳ ಗೃಹ ಲಕ್ಷ್ಮಿ ಯೋಜನೆಯ ಹಣ ಬರಲಿದೆ. ಆಗಲೇ ಡಿಬಿಟಿ ಮಾಡಲು ಹಣ ಮಂಜೂರು ಮಾಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಅವರು ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತ. ಈ ಯೋಜನೆಗೆ ಕಳೆದ ಮೇ ತಿಂಗಳು ಆರಂಭದಲ್ಲೇ ಹಣ ನೀಡಿತ್ತು ಈಗ ಒಂದು ತಿಂಗಳದ್ದು ಬಾಕಿ ಇದೆ. ಸದ್ಯದಲ್ಲೇ ಅವರವರ ಖಾತೆಗಳಿಗೆ ಹಣ ಸಂದಾಯವಾಗಲಿ ಎಂದು ಹೇಳಿದರು.
ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ವಿತರಣೆ ಹಣ ಸರ್ಕಾರ ನೀಡಲು ವಿಳಂಬವಾಗುವುದಕ್ಕೆ ನಾನಾ ಕಾರಣಗಳಿವೆ. ಈ ಕುರಿತು ಹಣಕಾಸು ಇಲಾಖೆಯೊಂದಿಗೆ ಮಾತುಕತೆ ಮಾಡಿ ವಿಭಾಗವಾರು ಯಾವುದೇ ಆರೋಪಗಳು ಕೇಳಿಬರದಂತೆ ಟೆಂಡರ್ ಕರೆಯಲಾಗಿದೆ. ಸಧ್ಯದಲ್ಲೇ ಅಂಗನವಾಡಿಗಳಿಗೆ ಮೊಟ್ಟೆ ಸರಬರಾಜು ಆಗಲಿದೆಂದರು.
ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷ, ಹೈಕಮಾಂಡ್ ಏನು ಹೇಳುತ್ತೆ ಅದನ್ನು ಕೇಳುವೆ ಎಂದರು.
ಅಂಗನವಾಡಿ ಹೆಸರು ಬದಲಾವಣೆ ಬಗ್ಗೆ ನಿರ್ಧರಿಸಿದೆ. ಈ ಬಗ್ಗೆ ಚರ್ಚೆ ನಡೆದಿದೆ. ಸರಿಯಾದ ನಿರ್ಧಾರ ತೆಗೆದುಕೊಳ್ಳಲಿದೆಂದ ಅವರು ಅಂಗನವಾಡಿ ಕೇಂದ್ರಗಳಲ್ಲಿಎಲ್ ಕೆಜ ಯುಕೆಜಿ ಆರಂಭಿಸುವ ಬಗ್ಗೆ ಸಿಎಂ ಅವರ ಜೊತೆ ಮಾತನಾಡಿರುವೆ. ಪದವಿ, ಸ್ನಾತಕೋತ್ತರ ಪದವಿ ಪಡೆದವರು ಅಂಗನವಾಡಿ ಕಾರ್ಯಕರ್ತರಿದ್ದಾರೆ. ಅವರು ಮಕ್ಕಳಿಗೆ ಆಂಗ್ಲ ಭಾಷೆ ಭೋದಿಸಲು ಸಮರ್ಥರಿದ್ದಾರೆ ಎಂಬುದನ್ನು ಸಿಎಂ ಗಮನಕ್ಕೆ ತಂದಿದೆ.ಈ ಬಗ್ಗೆ ಶಿಕ್ಷಣ ಇಲಾಖೆ, ನಮ್ಮ ಇಲಾಖೆ ಚರ್ಚೆ ನಡೆಸಿದೆ. ಗುಣಮಟ್ಟದ ಶಿಕ್ಷಣ, ಸದೃಢ ಮಕ್ಕಳನ್ನು ನಿರ್ಮಿಸುವುದೇ ನಮ್ಮ ಗುರಿಯಾಗಿದೆ.ಯಾವುದೇ ಕಾರಣಕ್ಕೆ ಅಂಗನವಾಡಿಗಳನ್ನು ಮುಚ್ಚುವುದಿಲ್ಲ ಎಂದರು.
ಎಸ್ಸಿ, ಎಸ್ಟಿ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಕುರಿತ ಬಿಜೆಪಿಯವರ ಆಕ್ಷೇಪಕ್ಕೆ ಉತ್ತರಿಸಿ. ಗ್ಯಾರೆಂಟಿ ಯೋಜನೆಗಳಲ್ಲೂ ಎಸ್ಸಿ ಎಸ್ಟಿ ಜನರಿದ್ದಾರೆ. ಅವರಿಗೆ ಈ ಅನುದಾನ ಬಳಕೆಯಾಗುತ್ತೆ ಎಂದ ಅವರು. ಬಿಜೆಪಿಯವರ ಪ್ರತಿಯೊಂದು ಆರೋಪಕ್ಕೆ ಉತ್ತರ ಕೊಡಲು ಆಗಲ್ಲ. ಅವರ ಅವಧಿಯಲ್ಲಿ ಎಸ್ಸಿ, ಎಸ್ಟಿ ಸಮುದಾಯ ಅಭಿವೃದ್ಧಿಗೆ ಎಷ್ಟು ಅನುದಾನ ಮೀಸಲಿಟ್ಟಿದ್ದಾರೆ ಎಂಬುವುದನ್ನು ತಿಳಿಸಲಿ ಎಂದರು.
ಮುಡಾ ಅಕ್ರಮ ಬಗ್ಗೆ ನನಗೆ ಗೊತ್ತಿಲ್ಲ. ಜಿಲ್ಲೆಯಲ್ಲಿ ಸತೀಶ್ ಜಾರಕಿಹೊಳಿ, ಲಕ್ಷ್ಮಣ ಸವದಿ ಅವರು ಹಿರಿಯ ನಾಯಕರಾಗಿದ್ದು, ಎಲ್ಲರೂ ಒಗ್ಗಟ್ಟಾಗಿದ್ದೇವೆ. ಈಗಾಗಲೇ ಅವರೊಂದಿಗೆ ಮಾತನಾಡಲಾಗಿದೆ. ಏನೆ ಸಮಸ್ಯೆ ಇದ್ದರೂ ಪಕ್ಷದ ಚೌಕಟ್ಟಿನಲ್ಲಿ ಕುಳಿತು ಬಗೆಹರಿಸಿಕೊಳ್ಳುತ್ತೇವೆ ಎಂದರು.