ಐಐಎಂ ಗಿಟ್ಟಿಸಿಕೊಂಡ ಬಡವಿದ್ಯಾರ್ಥಿ ಸುಮಂತ್
ಲಖನೌ,ಜು.೪-ಆಂಧ್ರಪ್ರದೇಶದ ನಂದಯಾಲ್‌ನ ೨೨ ವರ್ಷದ ಎಂಜಿನಿಯರಿಂಗ್ ಪದವೀಧರ ಗಾನಮದ್ದುಲ ನಾಗ ಸುಮಂತ್ ಈ ವರ್ಷ ಐಐಎಂ ಲಕ್ನೋಗೆ ಸೇರುವ ಕನಸು ನನಸಾಗಿಸಿಕೊಂಡಿದ್ದಾರೆ.
ಟ್ರಕ್ ಚಾಲಕ ಸುಬ್ಬರಾಯುಡು ಗಾನಮದ್ದುಲ ಮತ್ತು ಶಿಶುವಿಹಾರದ ಶಿಕ್ಷಕಿ ಜಿ ಆದಿ ಲಕ್ಷ್ಮಿ ಅವರ ಪುತ್ರನಾದ ಸುಮಂತ್ ಹಣಕಾಸಿನ ಸಮಸ್ಯೆಯ ನಡುವೆಯೂ ಅಡೆತಡೆಗಳನ್ನು ದಾಟಿ ಈ ಸಾಧನೆಗೆ ಪಾತ್ರರಾಗಿದ್ದಾರೆ
ಟ್ರಕ್ ಚಾಲಕರಾಗಿರುವ ತಂದೆಯ ಹೆಚ್ಚಿನ ಆದಾಯ ಜೀವನ ನೆಡಸಲು ಸಾಕಾಗುತ್ತಿದ್ದ ಸಮಯದಲ್ಲಿ ಕಷ್ಟಪಟ್ಟು ಓದಿ ಉನ್ನತ ಸಂಸ್ಥೆಯಲ್ಲಿ ಪ್ರವೇಶ ಪಡೆದಿದ್ದಾರೆ ಸುಮಂತ್. ಈ ಮೂಲಕ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದನ್ನು ಇತರರಿಗೆ ತೋರಿಸಿಕೊಟ್ಟಿದ್ದಾರೆ
ಈ ಕುರಿತು ಪ್ರತಿಕ್ರಿಯೆ ನೀಡಿರುವ ಗಾನಮದ್ದುಲ ನಾಗ ಸುಮಂತ್, “ನನ್ನ ತಂದೆಯ ಕಷ್ಟಗಳನ್ನು ನಾನು ನೋಡಿದ್ದೇನೆ, ಸುಗ್ಗಿಯ ಸಮಯದಲ್ಲಿ, ಅವರು ಭತ್ತ ಮತ್ತು ಹತ್ತಿಯ ಹೊರೆಗಳನ್ನು ಹೊತ್ತುಕೊಂಡು ದೂರದ ಪ್ರಯಾಣ ಮಾಡುವಾಗ ಅವರು ವಾರಗಟ್ಟಲೆ ದೂರವಿರುತ್ತಾರೆ” ಇದ್ನು ನೋಡಿ ಜೀವನದಲ್ಲಿ ಸಾಧನೆ ಮಾಡುವ ಹಂಬಲವೇ ಈ ಯಶಸ್ಸಿಗೆ ಕಾರಣ ಎಂದಿದ್ದಾರೆ
ಸುಮಂತ್ ಪೂರ್ವ ವಿಶ್ವವಿದ್ಯಾಲಯ ಮತ್ತು ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ವಿದ್ಯಾರ್ಥಿವೇತನವನ್ನು ಗಳಿಸಿ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ್ದ ಹಿರಿಮೆಗೆ ಪಾತ್ರವಾಗಿದ್ದಾರೆ. ೧೦ ನೇ ತರಗತಿಯಲ್ಲಿ ೯.೮ ಮತ್ತು ೧೨ ನೇ ತರಗತಿಯ ರಾಜ್ಯ ಬೋರ್ಡ್ ಪರೀಕ್ಷೆಗಳಲ್ಲಿ ೮.೮ ಅಂಕಗಳನ್ನು ಗಳಿಸಿದ ನಂತರ ಅವರು ಶ್ರೀಕಾಕುಲಂನಿಂದ ೮.೮ ಯೊಂದಿಗೆ ಉತ್ತಮ ಶ್ರೇಣಿಯಲ್ಲಿ ಪಾಸಾಗಿದ್ದರು.
ಇದೀಗ ಲಕ್ನೋ ಐಐಎಂನಲ್ಲಿ ಪ್ರವೇಶ ಪಡೆಯುವ ಮೂಲಕ ಬಡ ಮಕ್ಕಳೂ ಕಠಿಣ ಪರಿಶ್ರಮವಿದ್ದರೆ ಕಬ್ಬಿಣದ ಕಡಲೆಯನ್ನು ಅರಗಿಸಿಕೊಳ್ಳಬಹುದು ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಜೊತೆಗೆ ಇತೆರ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದ್ದಾರೆ.