ಫ್ರಾನ್ಸ್ ನಲ್ಲಿ ೧,೩೦೦ ವರ್ಷಗಳಷ್ಟು ಹಳೆಯ ಮಾಂತ್ರಿಕ ಖಡ್ಗ ಕಣ್ಮರೆ!
ಪ್ರಪಂಚದ ಅತ್ಯಂತ ತೀಕ್ಷ್ಣವಾದ ಮುರಿಯಲಾಗದ ,ಮತ್ತು ಅಲೌಕಿಕ ಶಕ್ತಿ ಹೊಂದಿದೆ ಎಂದು ನಂಬಲಾಗಿರುವ ಪ್ರಾಚೀನ ಫ್ರೆಂಚ್ ಖಡ್ಗವು ಕಣ್ಮರೆಯಾಗಿದೆ. ರೋಕಮಾಡೂರ್ ಪಟ್ಟಣದಲ್ಲಿ, ೧೦೦ ಅಡಿ ಬಂಡೆಯಲ್ಲಿ ಅರ್ಧ ಹುದುಗಿರುವ ೧,೩೦೦ ವರ್ಷಗಳಷ್ಟು ಹಳೆಯದಾದ ಖಡ್ಗವನ್ನು ಕದ್ದಿಯಲಾಗಿದೆ ಎಂದು ಸ್ಥಳೀಯರು ನಂಬಿದ್ದಾರೆ. ಇದೀಗ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ ನೆಲಮಟ್ಟದಿಂದ ಸುಮಾರು ೧೦೦ ಅಡಿ ಎತ್ತರಕ್ಕೆ ಹತ್ತಿ ಆ ಖಡ್ಗವನ್ನು ಕದಿಯಲು ಹೇಗೆ ಸಾಧ್ಯ? ಎಂಬುದು ಪ್ರಶ್ನೆ.
ಇಲ್ಲಿಯವರೆಗೆ ಈ ಪಟ್ಟಣದ ಅತಿದೊಡ್ಡ ಪ್ರವಾಸಿ ಆಕರ್ಷಣೆ ಎಂದರೆ ಈ ಖಡ್ಗ ಮತ್ತು ಅದರ ಇತಿಹಾಸ. ಇದೀಗ ಖಡ್ಗವು ನಾಪತ್ತೆಯಾಗಿದೆ .
ಆಯುಧದ ಕಣ್ಮರೆಯು ನಿಗೂಢವಾಗಿಯೇ ಉಳಿದಿದೆ.
ಪುರಾತನ ಅವಶೇಷವನ್ನು ಪತ್ತೆಹಚ್ಚಲು ತನಿಖೆಯನ್ನು ಪ್ರಾರಂಭಿಸಲಾಗಿದೆ.
ಇದರಿಂದಾಗಿ ತಮ್ಮ ಹೊಟ್ಟೆಪಾಡು ಗತಿ ಬದಲಾಗಬಹುದು ಎಂಬ ಆತಂಕ ಸ್ಥಳೀಯರಲ್ಲಿದೆ. ಪಟ್ಟಣದ ಮೇಯರ್ ಡೊಮಿನಿಕ್ ಲೆನ್ ಫೆಂಟ್ ಮಾತನಾಡಿ, ನೂರಾರು ವರ್ಷಗಳಿಂದ ತಮ್ಮ ಊರಿನ ಇತಿಹಾಸದೊಂದಿಗೆ ನಂಟು ಹೊಂದಿರುವ ಖಡ್ಗದ ಬಗ್ಗೆ ಪ್ರತಿಯೊಬ್ಬ ಪ್ರವಾಸಿ ಮಾರ್ಗದರ್ಶಿಯೂ ವಿವರಿಸುತ್ತಾರೆ.
ಡುರಾಂಡಲ್ ಎಂದು ಕರೆಯಲ್ಪಡುವ ಖಡ್ಗವನ್ನು ಫ್ರೆಂಚ್ ಎಕ್ಸ್ ಕ್ಯಾಲಿಬರ್ ಎಂದೂ ಕರೆಯುತ್ತಾರೆ. ಸ್ಥಳೀಯ ದಂತಕಥೆಯ ಪ್ರಕಾರ ಖಡ್ಗವು ಅಲೌಕಿಕ ಶಕ್ತಿಯನ್ನು ಹೊಂದಿದೆ. ಇದು ಒಂದೇ ಏಟಿಗೆ ಕಲ್ಲನ್ನು ಎರಡು ಭಾಗ ಮಾಡಬಲ್ಲದು. ೮ ನೇ ಶತಮಾನದಲ್ಲಿ, ಒಬ್ಬ ದೇವದೂತನು ರೋಮನ್ ಚಕ್ರವರ್ತಿ ಚಾರ್ಲ್ಮ್ಯಾಗ್ನೆಗೆ ಖಡ್ಗವನ್ನು ಅರ್ಪಿಸಿದ್ದಾನೆ ಎನ್ನಲಾಗಿದೆ. ಸ್ವಲ್ಪ ಸಮಯದ ನಂತರ ಅವನು ತನ್ನ ಅತ್ಯುತ್ತಮ ಸೈನಿಕನಾದ ರೋಲ್ಯಾಂಡ್‌ಗೆ ಖಡ್ಗವನ್ನು ಕೊಟ್ಟಿದ್ದಾನೆ. ಆದರೆ ಯುದ್ಧದಲ್ಲಿ ಸಾಯುವ ಮೊದಲು, ರೋಲ್ಯಾಂಡ್ ಕತ್ತಿಯನ್ನು ಮುರಿಯಲು ಬಯಸಿದನು, ಅದು ಶತ್ರುಗಳ ಕೈಗೆ ಸಿಗಬಾರದು ಎಂಬುದು ಆತನ ಬಯಕೆಯಾಗಿತ್ತು. ಆದರೆ ಅದು ಸಾಧ್ಯವಾಗದ ಕಾರಣ ತಾಳ್ಮೆ ಕಳೆದುಕೊಂಡು ಗಾಳಿಗೆ ಎಸೆದಿದ್ದಾನೆ.ಪರಿಣಾಮವಾಗಿ, ಖಡ್ಗವು ಗಾಳಿಯಲ್ಲಿ ಕೆಲವು ನೂರಾರು ಕಿಲೋಮೀಟರ್ ಗಳಷ್ಟು ಪ್ರಯಾಣಿಸಿದೆ ಮತ್ತು ಅಂತಿಮವಾಗಿ ರೋಕಮಾಡೋರ್ ಪಟ್ಟಣದ ಕಲ್ಲಿನ ಬಂಡೆಯಲ್ಲಿ ಸಿಲುಕಿಕೊಂಡಿದೆ.
ಫ್ರೆಂಚ್ ಸಾಹಿತ್ಯದ ಅತ್ಯಂತ ಹಳೆಯ ಉಳಿದಿರುವ ಕೃತಿ, ೧೧ ನೇ ಶತಮಾನದ ಕತ್ತಿಯ ಮ್ಯಾಜಿಕ್ ಸಾಮರ್ಥ್ಯಗಳನ್ನು ವಿವರಿಸಲು ಹೆಸರುವಾಸಿಯಾಗಿದೆ, ಇದು ದಿ ಸಾಂಗ್ ಆಫ್ ರೋಲ್ಯಾಂಡ ಆಗಿದೆ. ಈ ಮಹಾಕಾವ್ಯದ ಅಸ್ತಿತ್ವದಲ್ಲಿರುವ ಏಕೈಕ ಹಸ್ತಪ್ರತಿಯನ್ನು ಪ್ರಸ್ತುತ ಆಕ್ಸ್‌ಫರ್ಡ್‌ನಲ್ಲಿರುವ ಬೋಡ್ಲಿಯನ್ ಲೈಬ್ರರಿಯಲ್ಲಿ ಸಂರಕ್ಷಿಸಲಾಗಿದೆ.