೭೦೦ ಕೋಟಿ ಬಾಚಿದ ಕಲ್ಕಿ ೨೮೯೮ ಎಡಿ
ಹೈದರಾಬಾದ್,ಜು.೪- ತೆಲುಗು ಸೇರಿದಂತೆ ವಿವಿಧ ಭಾಷೆಯಲ್ಲಿ ಮೂಡಿಬಂದ “ಕಲ್ಕಿ ೨೮೯೮ ಎಡಿ” ಚಿತ್ರ ಜಾಗತಿಕವಾಗಿ ೭೦೦ ಕೋಟಿ ರೂಪಾಯಿ ಸಂಗ್ರಹಿಸುವ ಮೂಲಕ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ ಹೊಸ ದಾಖಲೆ ಬರೆದಿದೆ
ವೈಜಯಂತಿ ಮೂವೀಸ್ ಸಂಸ್ಥೆ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಈ ವಿಷಯ ಹಂಚಿಕೊಂಡಿದೆ. ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ನಟಿ ದೀಪಿಕಾ ಪಡುಕೋಣೆ ಅವರ ಮಹಾಕಾವ್ಯದ ದೃಶ್ಯದಿಂದ ಬೆಂಕಿಯ ಮೂಲಕ ನಡೆಯುವ ದೃಶ್ಯದಿಂದ ಅದ್ಭುತವಾದ ಸ್ಟಿಲ್ ಪ್ರದರ್ಶಿಸಿದೆ
ಜೂನ್ ೨೭ ರಂದು ಬಿಡುಗಡೆಯಾದ ಈ ಚಿತ್ರ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಮೊದಲ ವಾರದಲ್ಲಿ ಅಂದಾಜು ೩೯೩.೪ ಕೋಟಿ ರೂಪಾಯಿ ಸಂಗ್ರಹಿಸಿದೆ. ಅಖಿಲ ಭಾರತ ಒಟ್ಟು ಕಲೆಕ್ಷನ್ ಅಂದಾಜು ೪೪೧.೫ ಕೋಟಿ ರೂ. ಹೆಚ್ಚುವರಿಯಾಗಿ ಸಂಗ್ರಹವಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಂದ ೧೬೮.೫ ಕೋಟಿ ರೂಪಾಯಿ ಸಂಗ್ರಹಿಸುವುದರೊಂದಿಗೆ, ಚಿತ್ರದ ೭ದಿನಗಳ ಒಟ್ಟು ಮೊತ್ತ ಸುಮಾರು ೬೧೦ ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದೆ.
“ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿ ದೊಡ್ಡ ಬ್ಲಾಕ್‌ಬಸ್ಟರ್” ಎಂದು ಹೇಳಲಾಗಿದೆ. ಅಭಿಮಾನಿಗಳು ಭಾವಪರವಶರಾಗಿದ್ದಾರೆ ಮತ್ತು ಇನ್ನೊಬ್ಬರು “ಅಂತಿಮವಾಗಿ ಚಿತ್ರದ ಬಜೆಟ್‌ನಲ್ಲಿ ತಲುಪಿದೆ. ಈ ಚಿತ್ರ ಎಷ್ಟು ಲಾಭ ಗಳಿಸುತ್ತದೆ ಎಂದು ನೋಡೋಣ” ಎಂದು ಟ್ವಿಟ್ ಮಾಡಿದ್ದಾರೆ
ಚಿತ್ರದಲ್ಲಿ ಪ್ರಭಾಸ್, ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ಅಭಿನಯದ ಚಿತ್ರವನ್ನು ನಾಗ್ ಅಶ್ವಿನ್ ಆಕ್ಷನ್ ಕಟ್ ಹೇಳಿದ್ದಾರೆ.ಚಿತ್ರ ಎರಡನೇ ವಾರಕ್ಕೆ ಪ್ರವೇಶಿಸಿದ್ದು ಕಲೆಕ್ಷನ್‌ನಲ್ಲಿ ಹಾಲಿವುಡ್ ಚಿತ್ರಗಳನ್ನು ಹಿಂದಿಕ್ಕುವ ಸಾಧ್ಯತೆ ಇದೆ.