ಮಾಮೇರು ಸಮಾರಂಭದಲ್ಲಿ ರಾಧಿಕಾ ಮಿಂಚಿಂಗ್
ಮುಂಬೈ,ಜು.೪-ಅಂಬಾನಿ ಕುಟುಂಬದಲ್ಲಿ ಸಂತಸದ ವಾತಾವರಣ ಮೂಡಿದೆ .ಅನಂತ್ ಅಂಬಾನಿ ಮದುವೆ ಸಮಾರಂಭ ವಿಜೃಂಭಣೆಯಿಂದ ಆರಂಭವಾಗಿದೆ.ಜುಲೈ ೧೨ ರಂದು ಅನಂತ್ ಮತ್ತು ರಾಧಿಕಾ ವಿವಾಹವಾಗಲಿದ್ದಾರೆ. ಮದುವೆಯ ಪೂರ್ವ ವಿಧಿವಿಧಾನಗಳು ಸಡಗರದಿಂದ ಆರಂಭವಾಗಿದೆ. ಜುಲೈ ೨ರಂದು ೫೦ ಜೋಡಿಗಳ ಸಾಮೂಹಿಕ ವಿವಾಹದೊಂದಿಗೆ ಆರಂಭವಾದ ವಿವಾಹ ವಿಧಿವಿಧಾನಗಳು ಬುಧವಾರ ಮಾಮೇರು ಕಾರ್ಯಕ್ರಮದೊಂದಿಗೆ ಮುಕ್ತಾಯಗೊಂಡಿದ್ದಾವೆ. ಗುಜರಾತಿ ಕುಟುಂಬಗಳಲ್ಲಿ, ಮಾಮೇರು ಆಚರಣೆಯ ಸಮಯದಲ್ಲಿ, ತಾಯಿಯ ಕಡೆಯಿಂದ ಜನರು ಬಂದು ವಧುವರರನ್ನು ಆಶೀರ್ವದಿಸುತ್ತಾರೆ. ಈ ಸಮಯದಲ್ಲಿ, ವಧುವಿಗೆ ಸೀರೆ, ಆಭರಣ ಮತ್ತು ಬಟ್ಟೆಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ. ಈ ಆಚರಣೆಯು ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುವ ಭಾತ್ ಆಚರಣೆಯನ್ನು ಹೋಲುತ್ತದೆ.
ಈ ಸಂದರ್ಭದಲ್ಲಿ, ರಾಧಿಕಾ ತಮ್ಮ ಕಸೂತಿ ಲೆಹೆಂಗಾದಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಕಿವಿಯೋಲೆಗಳು, ಮಾಂಗ್ ಟಿಕ್ಕಾ ಮತ್ತು ಭಾರೀ ನೆಕ್ಲೇಸ್ ಧರಿಸಿದ್ದರು. ಈ ಸಮಯದಲ್ಲಿ, ಅನಂತ್ ತನ್ನ ಭಾವಿ ವಧುವಿನ ಜೊತೆ ಸಂತೋಷದಿಂದ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಮಾಮೇರು ಸಮಯದಲ್ಲಿ, ರಾಧಿಕಾ ಅವರ ತಾಯಿಯ ಚಿಕ್ಕಪ್ಪ ಅವರಿಗೆ ಸಾಕಷ್ಟು ಸಿಹಿತಿಂಡಿಗಳು ಮತ್ತು ಉಡುಗೊರೆಗಳನ್ನು ನೀಡಿದ್ದಾರೆ. ಈ ಸಂಪೂರ್ಣ ಕಾರ್ಯಕ್ರಮದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ, ನೀತಾ ಅಂಬಾನಿ ಮತ್ತು ಆಕಾಶ್, ಶ್ಲೋಕಾ, ಇಶಾ ಮತ್ತು ಆನಂದ್ ಪಿರಾಮಲ್ ಉಪಸ್ಥಿತರಿದ್ದರು.
ಇಶಾ ಅವರ ಮಾವ ಸ್ವಾತಿ ಪಿರಮಾಲ್ ಮತ್ತು ಆನಂದ್ ಪಿರಮಾಲ್ ಕೂಡ ಉಪಸ್ಥಿತರಿದ್ದರು. ಅಂಬಾನಿ ಸೊಸೆ ಶ್ಲೋಕಾ ಮೆಹ್ತಾ ಅವರ ತಾಯಿ ಮೋನಾ ಮೆಹ್ತಾ ಮತ್ತು ತಂದೆ ರಸೆಲ್ ಮೆಹ್ತಾ ಕೂಡ ಅದ್ಭುತವಾಗಿ ಕಾಣುತ್ತಿದ್ದರು. ನಿನ್ನೆ ನಡೆದ ಮಾಮೇರು ಸಮಾರಂಭಕ್ಕೆ ಆಂಟಿಲಿಯಾ ವಧುವಿನಂತೆ ಅಲಂಕರಿಸಲಾಗಿತ್ತು.