ನಾನೇ ನಟ ದರ್ಶನ್ ಪತ್ನಿ
ಬೆಂಗಳೂರು,ಜು.೪-ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಪವಿತ್ರಾಗೌಡ ದರ್ಶನ್‌ನ ೨ನೇ ಪತ್ನಿಯಲ್ಲ,ಆಕೆ ಸ್ನೇಹಿತೆಯಷ್ಟೇ,ನಾನೇ ದರ್ಶನ್ ಧರ್ಮಪತ್ನಿ ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ಹಾಗೂ ಕೆಲ ಪೊಲೀಸರು ನಟಿ ಪವಿತ್ರಾ ಗೌಡ ಅವರನ್ನು ದರ್ಶನ್ ಅವರು ೨ನೇ ಪತ್ನಿ ಎಂದು ಹೇಳು?ತ್ತಿದ್ದು ಈ ಸಂಬಂಧ ಸ್ಪಷ್ಟನೆ ನೀಡಿ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ವಿಜಯಲಕ್ಷ್ಮೀ ಅವರು ಬರೆದಿರುವ ಪತ್ರದಲ್ಲಿ, ದರ್ಶನ್ ಮತ್ತು ನಾನು ೨೦೦೩ರಲ್ಲಿ ಧರ್ಮಸ್ಥಳದಲ್ಲಿ ಮದುವೆ ಆಗಿದ್ದೇವೆ. ನಮಗೆ ಒಬ್ಬ ಮಗನಿದ್ದಾನೆ ಎಂದು ತಿಳಿಸಿದ್ದಾರೆ.
ಪವಿತ್ರಾ ಗೌಡ ದರ್ಶನ್ ನ ೨ನೇ ಪತ್ನಿ ಅಲ್ಲ. ಕೇವಲ ಸ್ನೇಹಿತೆ ಅಷ್ಟೇ. ಪವಿತ್ರಾ ಗೌಡಗೆ ಈಗಾಗಲೇ ಸಂಜಯ್ ಸಿಂಗ್ ಎಂಬವರ ಜತೆ ಮದುವೆಯಾಗಿದ್ದು, ಒಬ್ಬಳು ಮಗಳು ಕೂಡ ಇದ್ದಾಳೆ. ಕಾನೂನು ಪ್ರಕಾರ ನಾನು ಮಾತ್ರ ದರ್ಶನ್‌ನ ಏಕೈಕ ಪತ್ನಿ.ಆದರೆ, ಪವಿತ್ರಾಗೌಡ ದರ್ಶನ್‌ನ ೨ನೇ ಪತ್ನಿ ಎಂದು ಹೇಳುತ್ತಿರುವುದಕ್ಕೆ ನನಗೆ ನೋವಾಗಿದೆ. ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ನಗರ ಪೊಲೀಸ್ ಆಯುಕ್ತರಿಗೆ ವಿಜಯಲಕ್ಷ್ಮೀ ಬರೆದಿರುವ ಪತ್ರದಲ್ಲಿ ಕೋರಿದ್ದಾರೆ.