ಕೃತಕ ಬುದ್ಧಿಮತ್ತೆ ಜಾಗತಿಕ ಪಾಲುದಾರಿಕೆಗೆ ಒತ್ತು
ನವದೆಹಲಿ,ಜು,೩-ಕೃತಕ ಬುದ್ದಿಮತ್ತೆಯಲ್ಲಿ ಭಾರತ, ಜಾಗತಿಕ ಪಾಲುದಾರಿಕೆಗೆ ಒತ್ತು ನೀಡಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಹಾಗು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇಂದಿಲ್ಲಿ ಹೇಳಿದ್ದಾರೆ.
ಕೆಲವು ತಿಂಗಳ ಹಿಂದೆ ಕೇಂದ್ರ ಸಚಿವ ಸಂಪುಟ ಭಾರತದ ಎಐ ಮಿಷನ್ ಅನ್ನು ಅನುಮೋದಿಸಿದೆ.ಕೃತಕ ಬುದ್ದಿಮತ್ತೆಯಲ್ಲಿ ಶಕ್ತಿ ಮತ್ತು ಸಾಮರ್ಥ್ಯ, ಕೃಷಿ, ಶಿಕ್ಷಣ, ಆರೋಗ್ಯ, ಔಷಧ, ಔಷಧೀಯ ಮತ್ತು ನಮ್ಮ ಸಮಾಜಕ್ಕೆ ಸಂಬಂಧಿಸಿದ ಈ ಎಲ್ಲಾ ಕ್ಷೇತ್ರಗಳಲ್ಲಿ ಬಳಸಿಕೊಳ್ಳಲು ಈ ಮಿಷನ್ ಪ್ರಾರಂಭಿಸಿದ್ದೇವೆ ಎಂದಿದ್ದಾರೆ.
ದೆಹಲಿಯಲ್ಲಿ ಆಯೋಜಿಸಿರುವ ಗ್ಲೋಬಲ್ ಇಂಡಿಯಾ ಎಐ ಶೃಂಗಸಭೆ ಉದ್ಘಾಟನೆ ವೇಳೆ ಮಾತನಾಡಿದ ಅವರು ಈ ವರ್ಷವಿಡೀ, ಕೃತಕ ಬುದ್ದಿಮತ್ತೆಯ ಸಾಮರ್ಥ್ಯ ಮತ್ತು ಸಮಾಜಗಳು ಅಗತ್ಯವಿರುವ ತಾಂತ್ರಿಕಕಾನೂನು ಕ್ರಮಗಳಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಲಾಗುವುದು. ಎಐಗೆ ಸಂಬಂಧಿದ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
ಕೃತಕ ಬುದ್ದಿಮತ್ತೆಯಲ್ಲಿ “ಭಾರತ ಜಾಗತಿಕ ಪಾಲುದಾರಿಕೆ ಹೊಂದಲು ಹೆಚ್ಚಿನ ಆದ್ಯತೆ ನೀಡಿದೆ. ಕೃತಕ ಬುದ್ದಿಮತ್ತೆಯಿಂದ ಎದುರಾಗುವ ಅಪಾಯಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಲಾಗುವುದು ಅನೇಕ ದೇಶಗಳಲ್ಲಿ, ಎಐಗೆ ಸಂಬಂಧಿಸಿದ ಅಪಾಯಗಳನ್ನು ಒಳಗೊಂಡಿರುವ ಸಾಕಷ್ಟು ಚಟುವಟಿಕೆಗಳು ಸಂಭವಿಸಿವೆ ಮತ್ತು ಈಗಾಗಲೇ ಎ ನಲ್ಲಿ ಕಾನೂನನ್ನು ಅಂಗೀಕರಿಸಲಾಗಿದೆ ಎಂದು ಹೇಳಿದ್ದಾರೆ.
ಜಾಗತಿಕವಾಗಿ ಕೃತಕ ಬುದ್ದಿಮತ್ತೆ ಬಗ್ಗೆ ಉದ್ದೇಶಪೂರ್ವಕವಾಗಿ ಎಐ ಸಂಸ್ಥೆಂ ಸ್ಥಾಪಿಸಿದೆ… ಆದ್ದರಿಂದ ಇದು ಈ ಶೃಂಗಸಭೆಯ ಪ್ರಮುಖ ಗಮನ ಸೆಳೆದಿದೆ. ತಂತ್ರಜ್ಞಾನವನ್ನು ಪ್ರಜಾಪ್ರಭುತ್ವಗೊಳಿಸಬೇಕು ಎಂದು ಯಾವಾಗಲೂ ಒತ್ತಿಹೇಳಿದೆ ಎಂದು ಅವರು ತಿಳಿಸಿದ್ದಾರೆ.
ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಓಪನ್ ಎಐ ಉಪಾಧ್ಯಕ್ಷ ಶ್ರೀನಿವಾಸ್ ನಾರಾಯಣನ್, ಭಾರತದಿಂದ ಕಲಿಯಲು ನಾಯಕತ್ವದ ತಂಡದಲ್ಲಿ ಬೆಳೆಯುತ್ತಿರುವ ಅಭ್ಯಾಸ ಬೆಳೆಸಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಯಾವುದೇ ಪ್ರಮುಖ ನಿರ್ಧಾರಗಳಲ್ಲಿ ಭಾರತವನ್ನು ಮನಸ್ಸಿನಲ್ಲಿಟ್ಟುಕೊಂಡು ಮುಂದುವರೆಯುತ್ತೇವೆ. ಕಳೆದ ಐದು ವರ್ಷಗಳಲ್ಲಿ ಇಡೀ ಕ್ಷೇತ್ರ ೧.೫ ವರ್ಷಗಳ ಹಿಂದೆ ನಾವು ಜಿಟಿಪಿ ಅನ್ನು ಪ್ರಾರಂಭಿಸಿದ್ದೇವೆ.ಕಳೆದ ೧೮ ತಿಂಗಳುಗಳಲ್ಲಿ, ಜನರು ಅದನ್ನು ಪರಿವರ್ತಕ ರೀತಿಯಲ್ಲಿ ಬಳಸುತ್ತಿರುವುದನ್ನು ನೋಡಿದ್ದೇವೆ ಎಂದಿದ್ದಾರೆ.