ಭ್ರಷ್ಟಾಚಾರಕ್ಕೆ ಅಂಕುಶ: ಮೋದಿ
ರಾಜ್ಯಸಭೆಯಲ್ಲಿ ಪ್ರಧಾನಿ ಉತ್ತರ
ನವದೆಹಲಿ,ಜು. ೩- ದೇಶದಲ್ಲಿ ಭ್ರಷ್ಟಾಚಾರವನ್ನು ಬೇರು ಸಮೇತ ಕಿತ್ತೊಗೆಯುವುದು ನಮ್ಮ ಉದ್ದೇಶ ಎಂದು ಪ್ರದಾನಿ ನರೇಂದ್ರ ಮೋದಿ ರಾಜ್ಯಸಭೆಯಲ್ಲಿಂದು ಗುಡುಗಿದ್ದಾರೆ. ಈ ನಡುವೆ ಪ್ರತಿ ಪಕ್ಷಗಳ ಸದಸ್ಯರು ವಿರೋದ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದಲ್ಲಿ ಸಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿವೆ ಎಂದು ಆರೋಪಿಸಿ ಸಭಾತ್ಯಾಗ ಮಾಡಿದರು.ಪ್ರತಿಪಕ್ಷಗಳು ಸಭಾತ್ಯಾಗವನ್ನು ನಡೆಸಿದ್ದನ್ನು ತರಾಟೆಗೆ ತೆಗೆದುಕೊಂಡ ಮೋದಿ ತಾವು ಎತ್ತಿದ ಪ್ರಶ್ನೆಗಳಿಗೆ ನಾವು ಹೇಳುವ ಉತ್ತರವನ್ನು ಕೇಳುವ ತಾಳ್ಮೆಯಿಲ್ಲ. ಆದ್ದರಿಂದ ಅವರು ಓಡಿ ಹೋಗುತ್ತಿದ್ದಾರೆ. ಪ್ರತಿಪಕ್ಷಗಳ ಮೇಲ್ಮನೆ ಸಂಪ್ರದಾಯಗಳನ್ನು ಅವಮಾನಿಸುತ್ತಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ ಜನರು ಎಲ್ಲ ರೀತಿಯಲ್ಲಿ ವಿಪಕ್ಷಗಳನ್ನು ಸೋಲಿಸಿದ್ದಾರೆ. ಅವರಿಗೆ ಗಲ್ಲಿಗಳಲ್ಲಿ ಕೂಗುವುದನ್ನು ಬಿಟ್ಟರೆ ಬೇರೆ ಆಯ್ಕೆಗಳಿಲ್ಲ ಎಂದು ಕಿಡಿಕಾರಿದರು.ರಾಷ್ಟ್ರಪತಿಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರ ನೀಡಲು ಮುಂದಾಗುತ್ತಿದ್ದಂತೆ ಪ್ರತಿ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.ಈ ನಡುವೆ ಮಾತು ಮುಂದುವಿರಿಸಿದ ಪ್ರಧಾನಿ ದೇಶದಲ್ಲಿ “ಮುಂದಿನ ಐದು ವರ್ಷಗಳು ಮೂಲ ಸೌಕರ್ಯಕ್ಕೆ ಒತ್ತು ನೀಡುವ ಜೊತೆಗೆ ಬಡತನದ ವಿರುದ್ಧದ ಹೋರಾಟದ ಸಂಕಲ್ಪ ಮಾಡಿರುವುದಾಗಿ ಇಂದಿಲ್ಲಿ ಪ್ರಕಟಿಸಿದ್ದಾರೆ.ಈ ಬಾರಿಯ ಚುನಾವಣೆ ಸಂವಿಧಾನವನ್ನು ಉಳಿಸುವುದೆ ಆಗಿದ್ದರೆ ದೇಶದ ಜನರು ೧೯೭೭ ರಂತೆ ಆಯ್ಕೆಗೆ ಹೋಗುತ್ತಿದ್ದರು ಎಂದು ಹೇಳುವ ಮೂಲಕ ವಿಪಕ್ಷಗಳ ನಾಯಕರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.ಕಳೆದ ಹತ್ತು ವರ್ಷದಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಆದ್ಯತೆ ನೀಡಿದ್ದು ಮುಂದಿನ ಐದು ವರ್ಷಗಳಲ್ಲಿ ದೇಶ ಬಡತನದ ವಿರುದ್ಧದ ಹೋರಾಟದಲ್ಲಿ ವಿಜಯಶಾಲಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಿದ ಪ್ರಧಾನಿ ಮುಂದಿನ ೧೦ ವರ್ಷಗಳಲ್ಲಿ ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ, ಅದರ ಪರಿಣಾಮ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಕಾಣಲಿದೆ ಎಂದಿದ್ದಾರೆ.ಪರಿಶಿಷ್ಟ ಜಾತಿಣ ಪಂಗಡ, ಹಿಂದುಳಿದ ಸಮಯದಾದ ಮೀಸಲಾತಿಯನ್ನು ಕಾಂಗ್ರೆಸ್ ಪಕ್ಷ ಕಿತ್ತೊಕೊಂಡಿದೆ ಎಂದು ಆರೋಪಿಸಿದ್ದಾರೆ.
ದೇಶದ ಜನತೆ ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ನೀಡಿರುವ ಅವಕಾಶ, ವಿಕಸಿತ ಭಾರತ ಸಾಕಾರದ ಜೊತೆಗೆ’ ’ಆತ್ಮನಿರ್ಭರ ಭಾರತ’ ನಿರ್ಮಾಣಕ್ಕೆ ಆದ್ಯತೆ ನೀಡುವುದಾಗಿದೆ ಎಂದು ಹೇಳಿದ್ದಾರೆ.
ವಿಶ್ವಾಸದ ರಾಜಕಾರಣಕ್ಕೆ ಜಯ:
ಲೋಕಸಭೆ ಚುನಾವಣೆಯಲ್ಲಿ ದೇಶದ ಜನರ ಬುದ್ಧಿವಂತಿಕೆ ಬಗ್ಗೆ ಹೆಮ್ಮೆಪಡುತ್ತೇವೆ, ಸುಳ್ಳು ಪ್ರಚಾರಕ್ಕೆ ಮನ್ನಣೆ ನೀಡದೆ ಕಾರ್ಯಕ್ಷಮತೆಗೆ ಆದ್ಯತೆ ನೀಡಿದ್ದಾರೆ. ಜೊತೆಗೆ ಮೋಸದ ರಾಜಕಾರಣ ತಿರಸ್ಕರಿಸಿ ವಿಶ್ವಾಸದ ರಾಜಕೀಯದ ಮೇಲೆ ವಿಜಯದ ಮುದ್ರೆ ಹಾಕಿದ್ದಾರೆ ಎಂದು ಹೇಳಿದ್ದಾರೆ.
’ಸ್ವತಂತ್ರ ಭಾರತ ಮತ್ತು ಸಂಸದೀಯ ಪಯಣದ ಇತಿಹಾಸದಲ್ಲಿ ಹಲವು ದಶಕಗಳ ನಂತರ ಸಾರ್ವಜನಿಕರು ಸರ್ಕಾರಕ್ಕೆ ಜನಾದೇಶ ನೀಡಿರುವುದು ನಡೆದಿದೆ. ೬೦ ವರ್ಷಗಳ ನಂತರ, ಸರ್ಕಾರವು ೧೦ ವರ್ಷಗಳ ನಂತರ ಮರಳಿದೆ ಎಂದು ಅರ್ಥಮಾಡಿಕೊಂಡಿದ್ದೇನೆ, ಇದು ಸಾಮಾನ್ಯ ವಿಷಯವಲ್ಲ ಎಂದು ಹೇಳಿದ್ದಾರೆ
ಲೋಕಸಭಾ ಚುನಾವಣಾ ಫಲಿತಾಂಶಗಳು ಬಂದಾಗಿನಿಂದ, ಕಾಂಗ್ರೆಸ್ ಪಕ್ಷದ ನಾಯಕರು ಬೆಂಬಲವಿಲ್ಲದಿದ್ದರೂ ತಮ್ಮ ಪಕ್ಷದ ಧ್ವಜವನ್ನು ಮಾತ್ರ ಹಿಡಿದಿದ್ದರು ಎಂದು ಅವರು ಲೇವಡಿ ಮಾಡಿದ್ದಾರೆ.ಭಾರತ ಮಹಿಳಾ ನೇತೃತ್ವದ ಅಭಿವೃದ್ಧಿಗೆ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡಿದೆ ಮತ್ತು ಇಂದು ನಾವು ಅದರ ಫಲಿತಾಂಶಗಳಾಗಿವೆ. ನಾವು ಮಹಿಳೆಯರ ಆರೋಗ್ಯ, ನೈರ್ಮಲ್ಯ ಮತ್ತು ಕ್ಷೇಮ ಕ್ಷೇತ್ರಗಳಲ್ಲಿಯೂ ಕೆಲಸ ಮಾಡಿದ್ದೇವೆ” ಎಂದು ಹೇಳಿದ್ದಾರೆ
ಕಳೆದ ಎರಡೂವರೆ ದಿನಗಳಲ್ಲಿ ಸುಮಾರು ೭೦ ಸಂಸದರು ಈ ಚರ್ಚೆಯಲ್ಲಿ ಭಾಗವಹಿಸಿದ್ದರು. ರಾಷ್ಟ್ರಪತಿಗಳ ಭಾಷಣದ ಮೇಲಿನ ಈ ಚರ್ಚೆಯನ್ನು ಪುಷ್ಟೀಕರಿಸಿದ ನಿಮ್ಮೆಲ್ಲ ಸಂಸದರಿಗೆ ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಹೇಳಿದರು
ಕಾಂಗ್ರೆಸ್ ವಿರುದ್ದ ವಾಗ್ದಾಳಿ
ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ೬೦,೦೦೦ ಕೋಟಿ ರೈತರ ಸಾಲ ಮನ್ನಾ ಯೋಜನೆ ಇತ್ತು ಆದರೆ ಫಲಾನುಭವಿಗಳ ಪಟ್ಟಿಯಲ್ಲಿ ಅಗತ್ಯವಿರುವ ಸಣ್ಣ ರೈತರ ಹೆಸರನ್ನು ಸೇರಿಸಲಾಗಿಲ್ಲ” ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಪ್ರಧಾನಿ ಮೋದಿ ಮಾತನಾಡುತ್ತಿದ್ದಂತೆ ವಿರೋಧ ಪಕ್ಷದ ಸಂಸದರು ಪ್ರತಿಭಟನೆ, ಘೋಷಣೆಗಳನ್ನು ಕೂಗಿದರು ಈ ನಡುವೆ ಮಾತು ಮುಂದುವರಿಸಿದ ಅವರು ವಿರೋಧ ಪಕ್ಷದ ಸಂಸದರು ವಿರೋದ ಪಕ್ಷದ ನಾಯಕನಿಗೂ ಮಾತನಾಡಲು ಅವಕಾಶ ನೀಡಲಿಲ್ಲ ಮತ್ತು ಅದಕ್ಕಾಗಿ ಅವರಿಗೆ ಅವಕಾಶ ನೀಡಬೇಕು ಎಂದು ಲೇವಡಿ ಮಾಡಿದ್ದಾರೆ.
ಸತ್ಯ ಕೇಳುವ ಶಕ್ತಿ ಇಲ್ಲ:
ಸುಳ್ಳನ್ನು ಹರಡುವವರಿಗೆ ಸತ್ಯವನ್ನು ಕೇಳುವ ಶಕ್ತಿ ಇಲ್ಲ ಎಂದು ದೇಶ ಗಮನಿಸುತ್ತಿದೆ, ಸತ್ಯವನ್ನು ಎದುರಿಸುವ ಧೈರ್ಯವಿಲ್ಲದವರಿಗೆ ಉತ್ತರಗಳನ್ನು ಕೇಳುವ ಧೈರ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ
ಈ ಚರ್ಚೆಗಳಲ್ಲಿ ಎದ್ದ ಪ್ರಶ್ನೆಗಳು ಮೇಲ್ಮನೆಯ ವೈಭವದ ಸಂಪ್ರದಾಯವವನ್ನು ವಿರೋದ ಪಕ್ಷಗಳು ಅವಮಾನಿಸುತ್ತಿವೆ ಎಂದಿದ್ದಾರೆ.