ನಟ ದರ್ಶನ್ ಸ್ಥಿತಿ ಕಂಡು ಕಣ್ಣೀರಿಟ್ಟ ಮಾಲತಿ ಸುಧೀರ್
ಬೆಂಗಳೂರು,ಜು.೩-ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಖ್ಯಾತ ನಟ ದರ್ಶನ್ ಜೈಲಿನಿಂದ ಹೊರ ಬರುತ್ತಾನೆ ಎಂದು ಮಾಲತಿ ಸುಧೀರ್ ಕಣ್ಣೀರಿಟ್ಟಿದ್ದಾರೆ.
ನನ್ನ ಮಗ ಜೈಲಿನಿಂದ ಹೊರ ಬರುತ್ತಾನೆ ಎಂದು ಆತನ ಸ್ಥಿತಿ ನೆನೆದು ಮಾಲತಿ ಕಣ್ಣೀರು ಹಾಕಿದ್ದಾರೆ. ನನ್ನ ಮಗ ಖಂಡಿತ ಹೊರ ಬರುತ್ತಾನೆ. ಆ ರಾಯರಲ್ಲಿ ಕೇಳಿಕೊಳ್ಳುತ್ತೇನೆ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ದುಃಖ ಇರುವಾಗ ಮೌನ ಇರುತ್ತದೆ. ನೋವಿರುವಾಗಲೂ ಮೌನ ಇರುತ್ತದೆ. ಮಗ ತರುಣ್ ಜೊತೆಯೂ ದರ್ಶನ್ ಪ್ರಕರಣದ ಕುರಿತು ನಾನೇನು ಕೇಳಲಿಲ್ಲ ಎಂದು ಮಾಲತಿ ಸುಧೀರ್ ಮಾತನಾಡಿದ್ದಾರೆ.
ಅಂದಹಾಗೆ, ದರ್ಶನ್‌ರನ್ನ ಬಾಲ್ಯದಿಂದಲೂ ಖಳನಟ ಸುಧೀರ್ ಪತ್ನಿ ಮಾಲತಿ ನೋಡಿಕೊಂಡು ಬಂದಿದ್ದಾರೆ. ಪುತ್ರ ತರುಣ್ ಮತ್ತು ದರ್ಶನ್ ಸ್ನೇಹಿತರು. ದರ್ಶನ್ ನಟನೆಯ ರಾಬರ್ಟ್, ಕಾಟೇರ ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶನ ಮಾಡಿದ್ದರು.