ಕೆಆರ್‌ಎಸ್‌ಗೆ 11 ಅಡಿ ನೀರು
ಮಂಡ್ಯ, ಜೂ.೨- ಕಾವೇರಿ ಜಲಾನಯನ ಪ್ರದೇಶದಲ್ಲಿ ಸತತ ಮಳೆಯಾಗುತ್ತಿರುವುದರಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಎಆರ್‌ಎಸ್ ಅಣೆಕಟ್ಟೆಯ ನೀರಿನ ಮಟ್ಟ ಹೆಚ್ಚಾಗಿದೆ.
ಒಂದೇ ವಾರದಲ್ಲಿ ೧೧ ಅಡಿಯಷ್ಟು ಡ್ಯಾಂ ಭರ್ತಿಯಾಗಿದೆ .ಕೆಆರ್ ಎಸ್ ನೀರಿನ ಮಟ್ಟ ೯೮ ಅಡಿ ತಲುಪಿದೆ.
ವಾರದ ಹಿಂದೆಯಷ್ಟೇ ಕೆಆರ್‌ಎಸ್ ಅಣೆಕಟ್ಟೆಯ ನೀರಿನ ಮಟ್ಟ ೮೭ ಅಡಿಗೆ ಕುಸಿದಿತ್ತು. ಸದ್ಯ ನಿರಂತರ ಮಳೆಯಿಂದಾಗಿ ಕೆಆರ್ ಎಸ್ ಗೆ ನೀರು ಹರಿದು ಬರುತ್ತಿದೆ.
ಮಳೆ ಜೋರಾದರೆ ಇನ್ನು ಕೆಲವೇ ದಿನಗಳಲ್ಲಿ ಡ್ಯಾಂ ಸಂಪೂರ್ಣ ಭರ್ತಿಯಾಗುವ ಸಾಧ್ಯತೆ ಇದೆ. ಸದ್ಯ ಅಣೆಕಟ್ಟೆಯಲ್ಲಿ ಸುಮಾರು ೨೧.೯೮೭ ಟಿಎಂಸಿ ನೀರು ಸಂಗ್ರಹವಾಗಿದೆ.