ಸೋಲಿನಲ್ಲಿ ಕಾಂಗ್ರೆಸ್ ವಿಶ್ವದಾಖಲೆ: ವಿರೋದ ಪಕ್ಷದಲ್ಲಿ ಕೂರಲು ” ಕೈ ಗೆ ಜನಾದೇಶ: ಪ್ರಧಾನಿ ವಾಗ್ದಾಳಿ
ನವದೆಹಲಿ,ಜು.2- ಕಾಂಗ್ರೆಸ್‌ನ ಇತಿಹಾಸದಲ್ಲಿ ಇದು ಮೂರನೇ ಅತಿ ದೊಡ್ಡ ಸೋಲು. ಸತತ ಮೂರನೇ ಬಾರಿ 100 ಸ್ಥಾನ ಪಡೆಯಲು ಕಾಂಗ್ರೆಸ್ ವಿಫಲವಾಗಿದೆ‌, ದೇಶದ ಜನ ವಿರೋದ ಪಕ್ಷದಲ್ಲಿಯೇ ಕೂರಿ ಎಂದು ಜನಾದೇಶ ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ದ ನೇರ ವಾಗ್ದಾಳಿ ನಡೆಸಿದ್ದಾರೆ.
ಒಬ್ಬ ಹುಡುಗ 99 ಅಂಕಗ ಗಳಿಸಿ ಆತ ಅದನ್ನು ಎಲ್ಲರಿಗೂ ತೋರಿಸುತ್ತಿದ್ದ, 99 ಅನ್ನು ಕೇಳಿದಾಗ ಜನರು ಆತನ್ನುಬ ತುಂಬಾ ಪ್ರೋತ್ಸಾಹಿಸುತ್ತಿದ್ದರು, ಆಗ ಒಬ್ಬ ಶಿಕ್ಷಕರು ಬಂದು ನೀವು 100 ರಲ್ಲಿ 99 ಸ್ಕೋರ್ ಮಾಡಿದ್ದೀರೋ ಅಥವಾ 543 ರಲ್ಲಿ 99 ಸ್ಕೋರ್ ಮಾಡಿದ್ದಿರೋ ಎಂದು ಪ್ರಶ್ನಿಸಿದ್ದರು.ವೈಫಲ್ಯದಲ್ಲಿ ವಿಶ್ವ ದಾಖಲೆ ಬರೆದಿದ್ದೀರಿ. ಈಗ ಆ ಮಗುವಿಗೆ ಇದನ್ನು ಯಾರು ವಿವರಿಸುತ್ತಾರೆ ಎಂದು ಲೋಕಸಭೆಯ ವಿರೋದ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ದ ವಾಗ್ದಾಳಿ ನಡೆಸಿದರು
ಸಂಸತ್ತಿ ಜಂಟಿ ಸದನ ಉದ್ದೇಶಿಸಿ ರಾಷ್ಟ್ರಪತಿ ಮಾಡಿದ ಭಾಷಣದ ಮೇಲಿನ ಚರ್ಚೆಗೆ ಉತ್ತರ ನೀಡಲು ಮುಂದಾಗುತ್ತಿದ್ದಂತೆ ಪ್ರತಿ ಪಕ್ಷಗಳ ಸದಸ್ಯರು ಅಡ್ಡಿ ಪಡಿಸಿದರು. ಇದರ ನಡುವೆಯೇ ಅವರು ತಮ್ಮ ವಿಚಾರಗಳನ್ನು ಸದನದ ಮುಂದೆ ಇಟ್ಟರು.
ಕಾಂಗ್ರೆಸ್ ಪಕ್ಷ ಸೋಲು ಒಪ್ಪಿಕೊಳ್ಳದೆ ‘ಸಿರ್ಸಾಸನಾ’ ಮಾಡುತ್ತಿದೆ.
2024ರ ಚುನಾವಣೆಯಲ್ಲಿ ಈ ದೇಶದ ಜನತೆ ಕಾಂಗ್ರೆಸ್‌ಗೆ ಜನಾದೇಶ ನೀಡಿದ್ದು, ವಿರೋದ ಪಕ್ಷದಲ್ಲಿತೇ ಅಲ್ಲೇ ಕೂತು, ವಾದ ವಿವಾದಗಳು ಮುಗಿದಾಗ ಕೂಗಾಡುತ್ತಿರಿ ಎಂದು ವಾಗ್ದಾಳಿ ನಡೆಸಿದರು.
3 ನೇ ಸ್ಥಾನಕ್ಕೆ ಗುರಿಗುರಿ:
ಕಳೆದ 10 ವರ್ಷಗಳಲ್ಲಿ ಭಾರತದ ಆರ್ಥಿಕತೆಯನ್ನು 10 ನೇ ಸ್ಥಾನದಿಂದ 5 ನೇ ಸ್ಥಾನಕ್ಕೆ ತೆಗೆದುಕೊಂಡಿದ್ದೇವೆ. ಈಗ ನಾವು ದೇಶದ ಆರ್ಥಿಕತೆಯನ್ನು 3 ನೇ ಸ್ಥಾನಕ್ಕೆ ಕೊಂಡೊಯ್ಯುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕಳೆದ 10 ವರ್ಷಗಳಲ್ಲಿ ಭಾರತವನ್ನು ದೊಡ್ಡ ಉತ್ಪಾದಕ ದೇಶವ್ಙಾಗಿ ಮಾಡಿದ್ದೇವೆ. ಮೊಬೈಲ್ ಫೋನ್‌ಗಳು, ಭಾರತವನ್ನು ಮೊಬೈಲ್ ಫೋನ್‌ಗಳ ದೊಡ್ಡ ರಫ್ತುದಾರನನ್ನಾಗಿ ಮಾಡಿದೆ, ನಮ್ಮ ಅಧಿಕಾರಾವಧಿಯಲ್ಲಿ ಅದೇ ಕೆಲಸವನ್ನು ಮಾಡಲಿದ್ದೇವೆ ಮತ್ತು ಪ್ರಪಂಚದ ಪ್ರಮುಖ ಕೆಲಸಗಳಲ್ಲಿ ಆ ಚಿಪ್‌ಗಳನ್ನು ಭಾರತದ ನೆಲದಲ್ಲಿ ಉತ್ಪಾದಿಸಲಾಗುವುದು ಎಂದು ತಿಳಿಸಿದ್ದಾರೆ
ಜಾತಿ ಎತ್ತಿಕಟ್ಟುವ ಕೆಲಸ:
ಕಾಂಗ್ರೆಸ್ ಪಕ್ಷ ಒಂದು ಜಾತಿಯ ವಿರುದ್ಧ ಇನ್ನೊಂದು ಜಾತಿಯನ್ನು ಎತ್ತಿಕಟ್ಟಲು ಪ್ರತಿ ದಿನವೂ ಹೊಸ ಹೊಸ ನಿರೂಪಣೆಗಳನ್ನು ಸೃಷ್ಟಿಸುತ್ತಿದೆ ಮತ್ತು ಹೊಸ ಯೋಜನೆಗಳನ್ನು ಹಬ್ಬಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಗೆದ್ದು ಜನ ಅರಾಜಕತೆ ಸೃಷ್ಠಿ ಮಾಡುವ ಉದ್ದೇಶ ಹೊಂದಿದ್ದರು. ಅದರೆ ದೇಶದ ಜನರು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ ಎಂದರು
ಅತಿ ದೊಡ್ಡ ಚುನಾವಣೆ:
ವಿಶ್ವದ ಅತಿದೊಡ್ಡ ಚುನಾವಣಾ ಪ್ರಚಾರದಲ್ಲಿ ಸಾರ್ವಜನಿಕರು ನಮ್ಮನ್ನು ಆಯ್ಕೆ ಮಾಡಿದ್ದಾರೆ ಮತ್ತು ಕೆಲವರ ನೋವು ನನಗೆ ಅರ್ಥವಾಗುತ್ತದೆ. ನಿರಂತರವಾಗಿ ಸುಳ್ಳುಗಳನ್ನು ಹರಡಿದರೂ ಅವರು ಭಾರಿ ಸೋಲನ್ನು ಅನುಭವಿಸಿದ್ದಾರೆ ಎಂದು ಕಾಂಗ್ರೆಸ್ ವಿರುದ್ದ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು
“ನಿನ್ನೆ ಮತ್ತು ಇಂದು, ಹಲವಾರು ಸಂಸದರು ರಾಷ್ಟ್ರಪತಿಗಳ ಭಾಷಣದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ, ವಿಶೇಷವಾಗಿ ಸಂಸದರಾಗಿ ನಮ್ಮ ನಡುವೆ ಮೊದಲ ಬಾರಿಗೆ ಬಂದವರು. ಅವರು ಸಂಸತ್ತಿನ ಎಲ್ಲಾ ನಿಯಮಗಳನ್ನು ಅನುಸರಿಸಿದರು ಮತ್ತು ಅವರ ನಡವಳಿಕೆ ಅನುಭವಿ ಸಂಸದರಂತೆಯೇ ಇತ್ತು ಎಂದಿದ್ದಾರೆ
ಭ್ರಷ್ಟಾಚಾರದ ವಿರುದ್ದ ಶೂನ್ಯ ನೀತಿ:
ಭ್ರಷ್ಟಾಚಾರದ ವಿರುದ್ಧ ನಮ್ಮ ಶೂನ್ಯ-ಸಹಿಷ್ಣು ನೀತಿಗಾಗಿ ದೇಶವು ನಮ್ಮನ್ನು ಆಶೀರ್ವದಿಸಿದೆ. ಪ್ರಪಂಚದಾದ್ಯಂತ ಭಾರತದ ವಿಶ್ವಾಸಾರ್ಹತೆ ಹೆಚ್ಚಿದೆ…ನಮ್ಮ ಪ್ರತಿಯೊಂದು ನೀತಿ, ಪ್ರತಿ ನಿರ್ಧಾರ, ಪ್ರತಿಯೊಂದು ಕ್ರಿಯೆಯ ಏಕೈಕ ಗುರಿ ಭಾರತವಾಗಿದೆ ಎಂದು ಅವರು ಹೇಳಿದ್ದಾರೆ
ದೇಶ ದೀರ್ಘಕಾಲದವರೆಗೆ ತುಷ್ಟೀಕರಣದ ರಾಜಕೀಯವನ್ನು ಮತ್ತು ದೀರ್ಘಕಾಲ ತುಷ್ಟೀಕರಣದ ಆಡಳಿತದ ಮಾದರಿಯನ್ನು ನೋಡಿದೆ… ನಾವು ಪ್ರತಿ ಪಕ್ಷದ ತುಷ್ಠೀಕರಣಕ್ಕೆ ಬದಲಾಗಿ ಸಂತುಷ್ಠೀಕರಣ ನಮ್ಮ ಉದ್ದೇಶ ಎಂದಿದ್ದಾರೆ.
ವಿಕಸಿತ ಭಾರತಕ್ಕೆ ಒತ್ತು:
ವಿಕಸಿತ ಭಾರತ ನಿರ್ಮಾಣಕ್ಕೆ ಸಂಕಲ್ಪ ಮಾಡಲಾಗಿದೆ ಆ ಸಂಕಲ್ಪವನ್ನು ಈಡೇರಿಸಲು ನ ಪ್ರಯತ್ನಿಸುತ್ತೇವೆ ಮತ್ತು ನಾವು ಅದನ್ನು ಸಂಪೂರ್ಣ ಸಮರ್ಪಣೆ ಮತ್ತು ಪ್ರಾಮಾಣಿಕತೆಯಿಂದ ಮಾಡುತ್ತೇವೆ ಮತ್ತು ನಮ್ಮ ಸಮಯದ ಪ್ರತಿ ಕ್ಷಣವನ್ನು ಕಳೆಯುತ್ತೇವೆ ಎಂದು ದೇಶವಾಸಿಗಳಿಗೆ ಭರವಸೆ ನೀಡಿದ್ದಾರೆ.
2014ರ ಆ ದಿನಗಳನ್ನು ನೆನೆಸಿಕೊಂಡರೆ ನಮ್ಮ ದೇಶದ ಜನರು ಆತ್ಮಸ್ಥೈರ್ಯ ಕಳೆದುಕೊಂಡಿದ್ದಾರೆ ಎಂಬುದು ಅರಿವಾಗುತ್ತದೆ . ದೇಶ ಹತಾಶೆಯ ಪ್ರಪಾತದಲ್ಲಿ ಮುಳುಗಿತ್ತು. ಇಂತಹ ಸಮಯದಲ್ಲಿ 2014ಕ್ಕಿಂತ ಮೊದಲು ಅತಿ ದೊಡ್ಡದು. ದೇಶ ಅನುಭವಿಸಿದ ನಷ್ಟ ದೇಶವಾಸಿಗಳ ಆತ್ಮಸ್ಥೈರ್ಯವನ್ನು ಕಳೆದುಕೊಂಡಿತು ಮತ್ತು ನಂಬಿಕೆ ಮತ್ತು ಆತ್ಮವಿಶ್ವಾಸವನ್ನು ಕಳೆದುಕೊಂಡಾಗ ಆತ್ಮ ಸ್ಥೈರ್ಯ ತುಂಬಿದ್ದೇವೆ ಎಂದಿದ್ದಾರೆ.
ಭಯೋತ್ಪಾದಕರ ಮಟ್ಟ:
2014ರ ಮೊದಲು ಭಯೋತ್ಪಾದಕರು ಎಲ್ಲಿ ಬೇಕಾದರೂ ಬಂದು ದಾಳಿ ನಡೆಸುತ್ತಿದ್ದರು. ಅಮಾಯಕರ ಹತ್ಯೆ, ಭಾರತದ ಮೂಲೆ ಮೂಲೆಯನ್ನು ಗುರಿಯಾಗಿಸಿ ಸರ್ಕಾರಗಳು ಸದ್ದಿಲ್ಲದೆ ಕುಳಿತಿದ್ದರು. ಇದೀಗ ಅದನ್ನು ಮಟ್ಟ ಹಾಕಿದ್ದೇವೆ ಎಂದರು
ಲಜ್ಜೆಗೆಟ್ಟ ನೀತಿ:
ದೆಹಲಿಯಿಂದ 1 ರೂಪಾಯಿ ಕಳುಹಿಸಿದರೆ ಕೇವಲ 15 ಪೈಸೆ ತಲುಪುತ್ತದೆ ಎಂದು ಸಾರ್ವಜನಿಕವಾಗಿ ನಿರ್ಲಜ್ಜವಾಗಿ ಒಪ್ಪಿಕೊಂಡಾಗ ಹಗರಣಗಳ ಕಾಲವಿತ್ತುಕಾಲ ಈಗ ಬದಲಾಗಿದೆ ಎಂದಿದ್ದಾರೆ.
,1 ರೂಪಾಯಿಯಲ್ಲಿ 85 ಪೈಸೆ ಹಗರಣವಿದೆ. ಈ ಜಗತ್ತು. ಹಗರಣಗಳು ದೇಶವನ್ನು ಹತಾಶೆಯ ಆಳದಲ್ಲಿ ಮುಳುಗಿಸಿತ್ತು, ನಾವು ದುರ್ಬಲ 5 ರಲ್ಲಿದ್ದೆವು … ಬಡವರು ಮನೆ ಖರೀದಿಸಲು ಬಯಸಿದರೆ, ಅವರು ಗ್ಯಾಸ್ ಸಂಪರ್ಕಕ್ಕಾಗಿ ಸಾವಿರಾರು ರೂಪಾಯಿಗಳನ್ನು ನೀಡಬೇಕಾಗಿತ್ತು ಎಂದಿದ್ದಾರೆ.
ಮೂರು ಪಟ್ಟು ವೇಗದಲ್ಲಿ ಕೆಲಸ:
“ನಮ್ಮ ಮೂರನೇ ಅವಧಿ ಎಂದರೆ ನಾವು ಮೂರು ಪಟ್ಟು ವೇಗದಲ್ಲಿ ಕೆಲಸ ಮಾಡುತ್ತೇವೆ, ನಾವು ಮೂರು ಪಟ್ಟು ಶಕ್ತಿಯನ್ನು ಹಾಕುತ್ತೇವೆ. ನಮ್ಮ ಮೂರನೇ ಅವಧಿ ಎಂದರೆ ನಾವು ದೇಶದ ಜನರಿಗೆ ಮೂರು ಪಟ್ಟು ಫಲಿತಾಂಶವನ್ನು ನೀಡುತ್ತೇವೆ ಎಂದು‌ ಪ್ರಧಾನಿ‌ ನರೇಂದ್ರ ಮೋದಿ ಹೇಳಿದ್ದಾರೆ
ಕಳೆದ 10 ವರ್ಷಗಳಲ್ಲಿ ನನ್ನ ಸರ್ಕಾರವು ಅನೇಕ ಯಶಸ್ಸನ್ನು ಮಾಡಿದೆ, ಅನೇಕ ಸಾಧನೆಗಳನ್ನು ಮಾಡಿದೆ, ಆದರೆ ಎಲ್ಲರಿಗೂ ಶಕ್ತಿ ತುಂಬಿದ ಒಂದು ಸಾಧನೆಯು ದೇಶವನ್ನು ಹೊರತೆಗೆಯುವುದು ಹತಾಶೆಯ ಆಳದಲ್ಲಿ ಭರವಸೆ ಮತ್ತು ನಂಬಿಕೆಯೊಂದಿಗೆ ನಿಂತು, ದೇಶದಲ್ಲಿ ಆತ್ಮಸ್ಥೈರ್ಯವನ್ನು ನಿರ್ಮಿಸಲಾಗಿದೆ ಎಂದಿದ್ದಾರೆ.