ಆಪ್‌ನಿಂದ ಸ್ಥಾಯಿ ಸಮಿತಿ ಚುನಾವಣೆ ಬಹಿಷ್ಕಾರ
ನವದೆಹಲಿ, ಸೆ.೨೭- ದೆಹಲಿ ಮಹಾನಗರ ಪಾಲಿಕೆ -ಎಂಸಿಡಿ ಸ್ಥಾಯಿ ಸಮಿತಿ ಚುನಾವಣೆಗಳನ್ನು ಮೇಯರ್ ಶೆಲ್ಲಿ ಒಬೆರಾಯ್ ’ಅಕ್ರಮ’ ಎಂದು ಘೋಷಿಸಿದ್ದು ಎಎಪಿ ಚುನಾವಣೆಯನ್ನು ಬಹಿಷ್ಕರಿಸುತ್ತದೆ
ಎಂಸಿಡಿ ಸ್ಥಾಯಿ ಸಮಿತಿಯ ಕೊನೆಯ ತೆರವಾದ ಸ್ಥಾನಕ್ಕೆ ಇಂದು ಸ ಚುನಾವಣೆ ನಡೆಸುವಂತೆ .ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ಪೌರಾಯುಕ್ತರಿಗೆ ಸೂಚಿಸಿದ್ದರು.
ಮಹತ್ವದ ಬೆಳವಣಿಗೆಯೊಂದರಲ್ಲಿ, ದೆಹಲಿ ಮೇಯರ್ ಶೆಲ್ಲಿ ಒಬೆರಾಯ್ ಎಂಸಿಡಿ ಆಯುಕ್ತರು ಘೋಷಿಸಿದ ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಯನ್ನು “ಅಕ್ರಮ” ಎಂದು ಘೋಷಿಸಿದ್ದಾರೆ.
ಮೇಯರ್ ಅವರು ಆಯುಕ್ತರಿಗೆ ಔಪಚಾರಿಕ ಪತ್ರ ಬರೆದಿದ್ದು, ಇಂದು ನಡೆಯಲಿರುವ ಚುನಾವಣೆ ಅಸಂವಿಧಾನಿಕ ಮತ್ತು ಅಸಿಂಧು ಎಂದು ತಿಳಿಸಿದ್ದಾರೆ.
ಸ್ಥಾಯಿ ಸಮಿತಿಯ ಆರನೇ ಸದಸ್ಯರ ಆಯ್ಕೆಗೆ ಅಕ್ಟೋಬರ್ ೫ ರಂದು ಚುನಾವಣೆ ನಡೆಸುವಂತೆ ಎಂಸಿಡಿ ಆಯುಕ್ತರಿಗೆ ಶೆಲ್ಲಿ ಒಬೆರಾಯ್ ಸೂಚನೆ ನೀಡಿದರು. ನಾಗರಿಕ ಸಂಸ್ಥೆಯಲ್ಲಿ ನಡೆಯುತ್ತಿರುವ ತೀವ್ರ ರಾಜಕೀಯ ದಿಂದ ಚುನಾವಣೆ ಗಮನ ಸೆಳೆದಿದೆ.
ಸ್ಥಾಯಿ ಸಮಿತಿಯ ಐವರು ಸದಸ್ಯರನ್ನು ಈಗಾಗಲೇ ಆಯ್ಕೆ ಮಾಡಲಾಗಿದ್ದು, ಮುಂಬರುವ ಚುನಾವಣೆಯು ಸಮಿತಿಯನ್ನು ಪೂರ್ಣಗೊಳಿಸಿ ಅಂತಿಮ ಸದಸ್ಯರನ್ನು ನಿರ್ಧರಿಸುತ್ತದೆ.
ಎಎಪಿ ಚುನಾವಣೆ ಬಹಿಷ್ಕಾರ
ಕೌನ್ಸಿಲರ್‌ಗಳ ತಪಾಸಣೆಗೆ ಅಡ್ಡಿಯುಂಟಾದ ನಂತರ, ಎಂಸಿಡಿ ಸ್ಥಾಯಿ ಸಮಿತಿಯ ಚುನಾವಣೆಯನ್ನು ಮೇಯರ್ ಶೆಲ್ಲಿ ಒಬೆರಾಯ್ ಅವರು ಅಕ್ಟೋಬರ್ ೫ ರವರೆಗೆ ಮುಂದೂಡಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಚುನಾವಣೆಯನ್ನು ಮುಂದೂಡುವುದನ್ನು ರದ್ದುಗೊಳಿಸಿದ್ದಾರೆ ಮಧ್ಯಾಹ್ನ ೧ ಗಂಟೆಗೆ ಚುನಾವಣೆ ನಡೆಸುವಂತೆ ಎಂಸಿಡಿ ಆಯುಕ್ತ ಅಶ್ವನಿ ಕುಮಾರ್ ಅವರಿಗೆ ಸೂಚಿಸಿದ್ದಾರೆ
ಈ ಕುರಿತು ಪ್ರತಿಕ್ರಿಯಿಸಿರುವ ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ, ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಯನ್ನು ಎಎಪಿ ಬಹಿಷ್ಕರಿಸುವುದಾಗಿ ಘೋಷಿಸಿದ್ದು ಈ ಹಿಂದೆ ನಿರ್ಧರಿಸಿದಂತೆ ಅಕ್ಟೋಬರ್ ೫ ರಂದು ಮಾತ್ರ ಚುನಾವಣೆ ನಡೆಯಲಿದೆ ಎಂದು ಹೀಗಾಗಲೇ ಮೇಯರ್ ಪ್ರಕಟಿಸಿದ್ದಾರೆ ಎಂದಿದ್ದಾರೆ.