ಕದನ ವಿರಾಮ ಪ್ರಸ್ತಾವ ಇಸ್ರೇಲ್ ತಿರಸ್ಕಾರ
ಟೆಲ್ ಅವೀವಾ,ಸೆ.೨೭- ಲೆಬನಾನ್‌ನಲ್ಲಿ ನಡೆಯುತ್ತಿರುವ ವೈಮಾನಿಕ ದಾಳಿಯ ನಡುವೆ ೨೧ ದಿನಗಳ ಕದನ ವಿರಾಮಕ್ಕಾಗಿ ಮಿತ್ರರಾಷ್ಟ್ರಗಳ ಒತ್ತಾಯವನ್ನು ಇಸ್ರೇಲ್ ತಿರಸ್ಕರಿಸಿದೆ.
ಅಮೆರಿಕಾ, ಫ್ರಾನ್ಸ್, ಮತ್ತು ಇತರ ಮಿತ್ರರಾಷ್ಟ್ರಗಳು ೨೧ ದಿನಗಳ ಕದನ ವಿರಾಮ ಘೋಷಿಸುವಂತೆ ಇಸ್ರೇಲ್‌ಗೆ ಮಾಡಿದ ಮನವಿಯನ್ನು ಬೆಂಜಮಿನ್ ನೆತನ್ಯಾಹು ನಿರಾಕರಿಸಿದ್ದಾರೆ
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗಿಯಾಗುವುದಕ್ಕೂ ಮುನ್ನ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ಈ ವಿಷಯ ಪ್ರಕಟಿಸಿದ್ದು ಹೆಜ್ಬೊಲ್ಲಾ ಉಗ್ರಗಾಮಿಗಳೊಂದಿಗೆ “ಗೆಲುವಿನ” ತನಕ ಹೋರಾಟ ಮುಂದುವರಿಯಲಿದೆ ಎಂದು ಪ್ರತಿಜ್ಞೆ ಮಾಡಿದ್ದಾರೆ
ಲೆಬನಾನ್ ಸುತ್ತಮುತ್ತಲಿನ ಇರಾನ್ ಬೆಂಬಲಿತ ಹೆಜ್ಬೊಲ್ಲಾ ಭದ್ರಕೋಟೆಗಳ ಮೇಲೆ ಇಸ್ರೇಲಿ ಬಾಂಬ್ ದಾಳಿ ನಡೆಸಿ ನೂರಾರು ಜನರನ್ನು ಕೊಂದಿದೆ, ಆದರೆ ಉಗ್ರಗಾಮಿ ಗುಂಪು ರಾಕೆಟ್ ವಾಗ್ದಾಳಿಯಿಂದ ಪ್ರತೀಕಾರ ನಡೆಯುತ್ತಿದೆ. ಈ ನಡುವೆ ಇಸ್ರೇಲ್ ಪ್ರಧಾನಿ ಈ ವಿಷಯ ಪ್ರಕಟಿಸಿದ್ದಾರೆ.
ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಮತ್ತು ಅವರ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಮಯದಲ್ಲಿ ನಡೆದ ಸಭೆಯಲ್ಲಿ ಈ ವಿಷಯ ಪ್ರಸ್ತಾಪ ಮಾಡಲಾಗಿದ್ದು ಅದನ್ನು ನಿರಾಕರಿಸಿದ್ದಾರೆ
ಕದನ ವಿರಾಮ ಘೋಷಣೆ ಮಾಡುವಂತೆ ಇಸ್ರೇಲ್‌ಗೆ ಸೂಚನೆ ನೀಡಿದ್ದೇವೆ ಎಂದು ಅಮೆರಿಕಾ ರಾಷ್ಟ್ರೀಯ ಭದ್ರತೆ ವಕ್ತಾರ ಜಾನ್ ಕಿರ್ಬಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.