ತಿರುಪತಿಯಲ್ಲಿ ತಿಂಗಳ ಕಾಲ ಸೆಕ್ಷನ್ ೩೦ ಜಾರಿ
ತಿರುಮಲ,ಸೆ.೨೭-ತಿರುಪತಿ ಜಿಲ್ಲೆಯಾದ್ಯಂತ ಒಂದು ತಿಂಗಳ ಕಾಲ ಸೆಕ್ಷನ್ ೩೦ ಪೊಲೀಸ್ ಕಾಯ್ದೆ ಜಾರಿಯಲ್ಲಿದೆ ಎಂದು ಜಿಲ್ಲಾ ಎಸ್ಪಿ ಸುಬ್ಬರಾಯುಡು ತಿಳಿಸಿದ್ದಾರೆ. ತಿರುಮಲ ಲಡ್ಡು ವಿವಾದದ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ತಿರುಮಲ ತಿರುಪತಿ ಮತ್ತಿತರ ಪ್ರದೇಶಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಒಂದು ತಿಂಗಳ ಕಾಲ (ಅಕ್ಟೋಬರ್ ೨೪ ರವರೆಗೆ) ನಿರ್ಬಂಧಗಳು ಜಾರಿಯಲ್ಲಿರುತ್ತವೆ ಎಂದು ಹೇಳಲಾಗಿದೆ.
ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯದೆ ಸಭೆ ಮೆರವಣಿಗೆ ನಡೆಸದಂತೆ ನಿರ್ಬಂಧ ಹೇರಲಾಗಿದೆ.ಸಭೆ ನಡೆಸಲು ಪೊಲೀಸ್ ಇಲಾಖೆಯಿಂದ ಪೂರ್ವಾನುಮತಿ ಪಡೆಯಬೇಕು.
ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಸುಬ್ಬರಾಯಡು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾ ಎಸ್ಪಿ ಸುಬ್ಬರಾಯುಡು ಅವರು ವಿವಿಧ ಪಕ್ಷದ ಮುಖಂಡರು, ಸಂಘಟನೆಗಳು, ವಿವಿಧ ಗುಂಪುಗಳು ಮತ್ತು ಜನರು ಪೊಲೀಸರ ಆದೇಶವನ್ನು ಪಾಲಿಸುವ ಮೂಲಕ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಲು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
೨೮ರಂದು ತಿರುಮಲಕ್ಕೆ ಜಗನ್
ಇದೇ ತಿಂಗಳ ೨೮ ರಂದು ತಿರುಮಲ ಶ್ರೀಗಳ ದರ್ಶನಕ್ಕೆ ವೈಸಿಪಿ ಮುಖ್ಯಸ್ಥ ಜಗನ್ ನಿರ್ಧರಿಸಿದ್ದಾರೆ . ಲಡ್ಡು ವಿವಾದದ ಸಂದರ್ಭದಲ್ಲಿ ರಾಜ್ಯಾದ್ಯಂತ ಇರುವ ಎಲ್ಲಾ ದೇವಸ್ಥಾನಗಳಲ್ಲಿ ಒಂದೇ ದಿನ ಪೂಜೆ ನಡೆಸುವಂತೆ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಇದರೊಂದಿಗೆ ಎಪಿಯಲ್ಲಿ ತಿರುಮಲ ಲಡ್ಡು ವಿವಾದ ಮತ್ತಷ್ಟು ತಾರಕಕ್ಕೇರಿದೆ.ಜಗನ್ ಕರೆ ಮೇರೆಗೆ ಇದೇ ೨೮ರಂದು ರಾಜ್ಯಾದ್ಯಂತ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಲು ವೈಸಿಪಿ ಮುಖಂಡರು ಹಾಗೂ ಕಾರ್ಯಕರ್ತರು ಸಿದ್ಧತೆ ನಡೆಸಿದ್ದಾರೆ. ಜಗನ್ ತಿರಮಲ ದೇವರ ದರ್ಶನ ಮಾಡಲಿದ್ದಾರೆ.