ಖಾಲಿದ್ ಜೊತೆ ಸುನೈನಾ ರಹಸ್ಯ ನಿಶ್ಚಿತಾರ್ಥ
ಮುಂಬೈ,ಜು.೨- ಗಂಗೆ ಬಾರೆ ತುಂಗೆ ಬಾರೆ ಕನ್ನಡ ಚಿತ್ರದ ನಾಯಕಿ ಸುನೈನಾ ಈಗ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಸುದ್ದಿಯಲ್ಲಿದ್ದಾರೆ. ದುಬೈ ಮೂಲದ ಯೂಟ್ಯೂಬರ್ ಖಾಲಿದ್ ಜೊತೆ ಸುನೈನಾ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಜುಲೈ ೧ ರಂದು ಸೋಷಿಯಲ್ ಮೀಡಿಯಾ ಸ್ಟಾರ್ ಎಂದೇ ಖ್ಯಾತರಾಗಿರುವ ಖಲೀದ್ ಅಲ್ ಅಮೇರಿಯೊಂದಿಗೆ ಸುನೈನಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇಂತಹ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗಿದೆ.
ಖಲೀದ್ ಅವರು ತಮ್ಮ ಮೊದಲ ಪತ್ನಿ ಸಲಾಮಾ ಅವರಿಗೆ ವಿಚ್ಛೇದನ ನೀಡಿರುವುದನ್ನು ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ಇದಾದ ನಂತರ ಖಲೀದ್ ಎರಡನೇ ಮದುವೆ ಬಗ್ಗೆ ವದಂತಿಗಳು ಹಬ್ಬಿವೆ. ಇನ್ನು ಕಳೆದ ಜೂನ್ ನಲ್ಲಿ ನಟಿ ಸುನೈನಾ ಒಂದು ಪೋಸ್ಟ್ ಮಾಡಿದ್ದಾರೆ. ನಟಿ ಖಲೀದ್ ಕೈ ಹಿಡಿದಿದ್ದಾಳೆ. ಈ ಫೋಟೋಗೆ ಲಾಕ್‌ನ ಚಿತ್ರದ ಎಮೋಜಿಯನ್ನು ಸೇರಿಸಲಾಗಿದೆ. ತಾನು ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಪರೋಕ್ಷವಾಗಿ ನಟಿ ತಿಳಿಸಿದ್ದಾರೆ. ನಟಿಯ ಪೋಸ್ಟ್ ಖಲೀದ್ ಇಷ್ಟಪಟ್ಟಿದ್ದಾರೆ. ಇದೀಗ ಖಲೀದ್ ಕೂಡ ಅಂತಹದ್ದೇ ಫೋಟೋ ಹಾಕಿದ್ದಾರೆ. ಈ ಮೂಲಕ ಇಬ್ಬರ ನಿಶ್ಚಿತಾರ್ಥದ ಸುದ್ದಿಯೂ ಹರಿದಾಡುತ್ತಿದೆ. ಈ ಬಗ್ಗೆ ನಟಿ ಸ್ಪಷ್ಟನೆ ನೀಡುವವರೆಗೆ ಕಾಯಬೇಕು.
ಅಂದಹಾಗೆ, ಪ್ರಜ್ವಲ್ ದೇವರಾಜ್ ಜೊತೆಗಿನ ಗಂಗೆ ಬಾರೆ ತುಂಗೆ ಬಾರೆ ಚಿತ್ರದ ನಂತರ ನಟಿ ದಕ್ಷಿಣದಲ್ಲಿ ಬ್ಯುಸಿಯಾದರು. ರೆಜಿನಾ, ಲಾಠಿ, ಟ್ರಿಪ್, ಕಲಿ ಚಿತ್ರ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.