ಅಗ್ನಿಪಥ್ ರಾಹುಲ್‌ಗೆ ರಾಜನಾಥ್ ತಿರುಗೇಟು
ನವದೆಹಲಿ,ಜು.೨-’ಅಗ್ನಿಪಥ’ ಯೋಜನೆಯಡಿಯಲ್ಲಿ ನೇಮಕಗೊಂಡವರ ಕುಟುಂಬಗಳಿಗೆ ಪರಿಹಾರ ನೀಡುತ್ತಿಲ್ಲ ಎನ್ನುವ ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಆರೋಪಕ್ಕೆ ತಿರುಗೇಟು ನೀಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮರ್ಪಕ ಪರಿಹಾರ ನೀಡಲಾಗುತ್ತಿದೆ ಎಂದಿದ್ದಾರೆ.
ಅಗ್ನಿವೀರ ಕುಟುಂಬಗಳಿಗೆ ಪರಿಹಾರ ನೀಡಲಾಗುತ್ತಿದ್ದರೂ ರಾಹುಲ್ ಗಾಂಧಿ ಸದನದ ಮೂಲಕ ಸುಳ್ಳು ಹೇಳುತ್ತಿದ್ದಾರೆ. ಅಗ್ನಿವೀರರು ಕೆಲಸದ ಸಮಯದಲ್ಲಿ ಮೃತಪಟ್ಟರೆ ೧ ಕೋಟಿ ರೂಪಾಯಿ ಪರಿಹಾರ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ
ಸೇನೆಯ ಸಾಮಾನ್ಯ ನೇಮಕಾತಿಯಂತೆ ಕೂಡ ಅಗ್ನಿವೀರರು ಕೆಲಸ ಸಮಯದಲ್ಲಿ ಮೃತರಾದರೆ ಅವರ ಕುಟುಂಬಗಳಿಗೆ ಪರಿಹಾರ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿದ ರಾಹುಲ್ ಗಾಂಧಿ ಕೆಲವು ದಿನಗಳ ಹಿಂದೆ ಪಂಜಾಬ್‌ನಲ್ಲಿ ನೆಲಬಾಂಬ್ ಸ್ಫೋಟದಲ್ಲಿ ಹುತಾತ್ಮರಾದ ಅಗ್ನಿವೀರನ ಕುಟುಂಬವನ್ನು ನಾನು ಭೇಟಿಯಾಗಿದ್ದೆ ಅವರನ್ನು ಹುತಾತ್ಮ ಎಂದು ಕರೆಯುತ್ತಿದ್ದೇನೆ, ಆದರೆ ಸರ್ಕಾರ ಅವರನ್ನು ಹುತಾತ್ಮ ಎಂದು ಗುರುತಿಸುವುದಿಲ್ಲ ಕುಟುಂಬ. ಪಿಂಚಣಿ ಅಥವಾ ಪರಿಹಾರವನ್ನು ಪಡೆಯುವುದಿಲ್ಲ, ಅಥವಾ ಅವರ ಮಗನನ್ನು ಹುತಾತ್ಮ ಎಂದು ಗುರುತಿಸುತ್ತಿಲ್ಲ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಾಜನಾಥ್ ಸಿಂಗ್, ರಾಹುಲ್ ಗಾಂಧಿ ಸುಳ್ಳು ಹೇಳುತ್ತಿದ್ದಾರೆ. ಅವರ ಆರೋಪದಲ್ಲಿ ಹುರುಳಿಲ್ಲ.
ಯೋಜನೆಯನ್ನು ಹೊರತರುವ ಮೊದಲು ಕೇಂದ್ರ ಸರ್ಕಾರ ಕನಿಷ್ಠ ೧೫೮ ಸಂಸ್ಥೆಗಳೊಂದಿಗೆ ನೇರ ಸಮಾಲೋಚನೆ ನಡೆಸಿದೆ ಮತ್ತು ಅವರ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಸ್ವೀಕರಿಲಾಗಿದೆ ಎಂದೂ ಹೇಳಿದ್ದಾರೆ.
ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಈ ಯೋಜನೆಯನ್ನು ಮೊದಲು ಅರ್ಥಮಾಡಿಕೊಳ್ಳಬೇಕು” ಅಗ್ನಿವೀರರ ಬಗ್ಗೆ ರಾಹುಲ್ ಗಾಂಧಿ ಅವರು ಸದನದ ಮೂಲಕ ತಪ್ಪು ಮಾಹಿತಿ ನೀಡಬಾರದು ಎಂದು ಹೇಳಿದರು