ಏಷ್ಯನ್ ಗೇಮ್ಸ್‍ನಲ್ಲಿ ಯೋಗಕ್ಕೆ ಗ್ರೀನ್ ಸಿಗ್ನಲ್
ಹೊಸದಿಲ್ಲಿ: ಪ್ರತಿಷ್ಠಿತ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಯೋಗವನ್ನು ಸ್ಪರ್ಧಾತ್ಮಕ ಕ್ರೀಡೆಯನ್ನಾಗಿ ಸೇರಿಸಲು ಏಷ್ಯಾ ಕಾರ್ಯನಿರ್ವಹಕರ ಮಂಡಳಿ ಒಪ್ಪಿಗೆ ನೀಡಿದೆ ಎಂದು ಭಾರತ ಒಲಿಂಪಿಕ್ಸ್ ಅಸೋಸಿಯೇಷನ್ ಅಧ್ಯಕ್ಷೆ ಪಿ.ಟಿ. ಉಷಾ ತಿಳಿಸಿದ್ದಾರೆ. ಇದರೊಂದಿಗೆ ಒಲಿಂಪಿಕ್ ಕೌನ್ಸಿಲ್ ಆï ಏಷ್ಯಾ ಒಸಿಎ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಸಿಗುವ ಬಗ್ಗೆ ಖಚಿತಪಡಿಸಿದ್ದಾರೆ.
ಕಾರ್ಯನಿರ್ವಹಕರ ನಿರ್ಧಾರವನ್ನು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾಹಂಗಾಮಿ ಅಧ್ಯಕ್ಷ ರಣೀರ್ ಸಿಂಗ್ ತಮಗೆ ತಿಳಿಸಿರುವುದಾಗಿ ಪಿ.ಟಿ. ಉಷಾ ಹೇಳಿದ್ದಾರೆ. ಕಾರ್ಯ ನಿರ್ವಹಕರ ದೃಢವಾದ ಬೆಂಬಲಕ್ಕೆ ಪಿ.ಟಿ. ಉಷಾ ಧನ್ಯವಾದ ತಿಳಿಸಿದ್ದಾರೆ.
ಒಸಿಎ ಕಾರ್ಯನಿರ್ವಹರ ನಿರ್ಧಾರಕ್ಕೆ ನನಗೆ ಸಂತಸ ನೀಡಿದೆ. ಯೋಗಕ್ಕೆ ಮಾನ್ಯತೆ ನೀಡಬೇಕೆನ್ನುವ ಭಾರತದ ಮನವಿಗೆ ಮನ್ನಣೆ ನೀಡಿದೆ. ಇದೀಗ ಶಫಾರಸ್ಸು ಕ್ರೀಡಾ ಸಮಿತಿಯಿಂದ ಸಾಮಾನ್ಯ ಸಭೆಗೆ ಅನಮೋದನೆಗೆ ಹೋಗಲಿದೆ ಎಂದು ಮಾಜಿ ಅಥ್ಲೀಟ್ ತಿಳಿಸಿದ್ದಾರೆ.
ಹಲವಾರಿ ಕ್ರೀಡೆಗಳನ್ನೊಳಗೊಂಡ ಕ್ರೀಡಾಕೂಟಕ್ಕೆ ಯೋಗವನ್ನು ಸೇರ್ಪಡೆಗೊಳಿಸುತ್ತಿರುವುದು ಇದು ಮೊದಲ ಹೆಜ್ಜೆಯಾಗಿದೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಅಸೊಸಿಯೇಷನ್ ಹೇಳಿದೆ.
ಯೋಗವನ್ನು ಕ್ರೀಡೆಯನ್ನ ಪದಕ ಕ್ರೀಡೆಯಾಗಿಯೋ ಅಥವಾ ಪ್ರದರ್ಶನದ ಕ್ರೀಡೆಯಾಗಬೇಕೊ ಎನ್ನುವುದರ ಬಗ್ಗೆ ಸಾಮಾನ್ಯ ಸಭೆಯಲ್ಲಿ ನಿರ್ಧಾರವಾಗಲಿದೆ. ಇದೀಗ ಯೋಗ ವಿಶ್ವಾದ್ಯಾಂತ ಮನ್ನಣೆ ಪಡೆದಿರುವುದರಿಂದ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ ಪದಕದ ಕ್ರೀಡೆಯನ್ನಾಗಿ ಮನ್ನಣೆ ನೀಡಬಹುದೆಂದು ಮೂಲಗಳು ತಿಳಿಸಿವೆ.