ಸಿಎಂ, ಡಿಸಿಎಂ ನಿರ್ಧಾರ ಹೈಕಮಾಂಡ್‍ಗೆ ಬಿಟ್ಟದ್ದು:ತಂಗಡಗಿ
ಕಲಬುರಗಿ:ಜು.1: ರಾಜ್ಯದ ಮುಖ್ಯಮಂತ್ರಿ ಮತ್ತುಉಪಮುಖ್ಯಮಂತ್ರಿ ಹುದ್ದೆಗಳಲ್ಲಿ ಬದಲಾವಣೆ ಮಾಡುವ ಕುರಿತು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆಯೇ ಹೊರತು; ನಾವ್ಯಾರೂ ಅಲ್ಲ ಎಂದು ರಾಜ್ಯದಕನ್ನಡ ಮತ್ತು ಸಂಸ್ಕøತಿ ಖಾತೆ ಸಚಿವ ಶಿವರಾಜ ತಂಗಡಗಿ ಸ್ಪಷ್ಟನೆ ನೀಡಿದರು.
ಕೆಕೆಆರ್‍ಡಿಬಿ ಸಭೆಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿದಅವರು, ಕೆಂಪೇಗೌಡಜಯಂತಿಕಾರ್ಯಕ್ರಮದ ವೇದಿಕೆಯಲ್ಲಿ ವಿಶ್ವಒಕ್ಕಲಿಗರ ಸಮುದಾಯದ ಶ್ರೀ ಚಂದ್ರಶೇಖರ ಸ್ವಾಮೀಜಿಯವರುಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವಂತೆ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದಾಗನಾನು ಸಹ ವೇದಿಕೆಯಲ್ಲಿದ್ದೆ.ರಾಜ್ಯದ ಮುಖ್ಯಮಂತ್ರಿಗಳ ಬಗ್ಗೆ ಅವರಿಗೂಒಳ್ಳೆಯಅಭಿಪ್ರಾಯಇದೆ.ಆದರೂಇಂಥದ್ದೊಂದು ಹೇಳಿಕೆ ಏಕೆ ನೀಡಿದರೋಗೊತ್ತಿಲ್ಲ. ಅದೇನಿದ್ದರೂ ಸ್ವಾಮೀಜಿಗಳ ವೈಯಕ್ತಿಕ ಹೇಳಿಕೆಯಷ್ಟೆಎಂದರು.
ಇಷ್ಟಕ್ಕೂ ಕರ್ನಾಟಕದಲ್ಲಿ ಸಿಎಂ ಬದಲಾವಣೆ ಮತ್ತು ಎಷ್ಟು ಉಪಮುಖ್ಯಮಂತ್ರಿಗಳು ಇರಬೇಕುಎಂಬುದುಕಾಂಗ್ರೆಸ್ ಪಕ್ಷದ ವೇದಿಕೆಗಿಂತಲೂ ಮಾದ್ಯಮಗಳಲ್ಲಿಯೇ ಹೆಚ್ಚು ಚರ್ಚೆಯಾಗುತ್ತಿದೆ.ಮಾದ್ಯಮಗಳು ಇಷ್ಟುಚರ್ಚೆಮಾಡುವಅಗತ್ಯವಿಲ್ಲ ಎಂದು ಮುಗುಳ್ನಗುತ್ತಾ ಹೇಳಿದರು.
ಸಿಎಂ ಹಾಗೂ ಡಿಸಿಎಂ ಯಾರಾಗಬೇಕುಎಂಬುದನ್ನು ಪಕ್ಷದರಾಷ್ಟ್ರೀಯಅಧ್ಯಕ್ಷರಾದ ಮಲ್ಲಿಕಾರ್ಜುನಖರ್ಗೆ, ರಾಹುಲ್‍ಗಾಂಧಿ ಮತ್ತು ಸೋನಿಯಾಗಾಂಧಿ ಸೇರಿದಂತೆ ಪಕ್ಷದಇನ್ನಿತರ ಪ್ರಮುಖರು ನಿರ್ಧರಿಸುತ್ತಾರೆ. ಹಾಗಾಗಿ, ಈ ನಿಟ್ಟಿನಲ್ಲಿ ಈಗ ಚರ್ಚೆ ನಡೆಸುವುದುಅನಗತ್ಯಎಂದುಕಡ್ಡಿಮುರಿದಂತೆ ಹೇಳಿದರು.
ಸ್ವಾಮಿಜಿಗಳು ಹೇಳಿಕೆ ಎಂಬುದೇನಿದ್ದರೂಅವರ ವೈಯಕ್ತಿಕಅಭಿಪ್ರಾಯಆಗಿರುತ್ತದೆಯೇ ಹೊರತು; ಅದಕ್ಕೆ ಹೆಚ್ಚಿನಅರ್ಥಕಲ್ಪಿಸಬೇಕಾದಅಗತ್ಯವಿಲ್ಲ ಎಂದು ನುಡಿದರು.
ರಾಜ್ಯದಲ್ಲಿಸರೋಜಿನಿ ಮಹಿಷಿ ವರದಿ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ಸಮಿತಿರಚಿಸಲಾಗಿದೆ. ನಮಗೆ ಕನ್ನಡಿಗರೂ ಬೇಕು.ಅನ್ಯಭಾಷಿಕರೂ ಬೇಕು.ಇಷ್ಟಾದರೂಕನ್ನಡಿಗರಿಗೆಅನ್ಯಾಯ ಆಗಲು ಬಿಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.
ರಾಜ್ಯದಲ್ಲಿಗ್ಯಾರಂಟಿ ಯೋಜನೆಗಳಿಂದಾಗಿ ಜನರು ನೆಮ್ಮದಿಯಿಂದ ಬದುಕುತ್ತಿದ್ದಾರೆ. ಬಡವರಿಗಾಗಿ ನೀಡುವ ಯೋಜನೆಗಳ ಕುರಿತುಯಾರೂ ಹಗುರವಾಗಿ ಮಾತನಾಡಬಾರದುಎಂದು ಸಚಿವತಂಗಡಗಿ ಮನವಿ ಮಾಡಿದರು.
ರಾಜ್ಯದಲ್ಲಿಕಾಂಗ್ರೆಸ್ ಪಕ್ಷಕ್ಕೆ ಬಹುಮತಇರಬಹುದಾದರೂ ವಿಶ್ವಾಸಮತವಿಲ್ಲ ಎಂಬ ಸಿ.ಟಿ.ರವಿ ಹೇಳಿಕೆಗೆ ತಿರುಗೇಟು ನೀಡಿದ ಸಚಿವತಂಗಡಗಿ, ರವಿ ಏನು ಮಾಡನಾಡುತ್ತಾರೋಎಂಬುದುಅವರಿಗೇಗೊತ್ತಿರುವುದಿಲ್ಲ. ಅವರುತಮ್ಮ ಪಕ್ಷದ ಹೈಕಮಾಂಡನ್ನು ಮೆಚ್ಚಿಸಲು ಏನೇನೋ ಮಾತನಾಡುತ್ತಿರುತ್ತಾರೆ. ಈಗೀಗ ಅವರಿಗೆಕರ್ನಾಟಕದ ವಿರೋಧ ಪಕ್ಷದ ನಾಯಕರಾಗುವ ಕನಸು ಕಾಡುತ್ತಿದೆ.ಆ ದೃಷ್ಟಿಯಿಂದಲೂಅವರು ಹೀಗೆಲ್ಲಾ ಮಾತನಾಡುತ್ತಿರಬಹುದುಎಂದುಚಾಟಿ ಬೀಸಿದರು.
ಮಾಜಿ ಸಚಿವರೇವುನಾಯಕ ಬೆಳಮಗಿ ಸೇರಿದಂತೆಇನ್ನಿತರರು ಉಪಸ್ಥಿತರಿದ್ದರು.