ಭಗವದ್ಗೀತೆ ಶ್ಲೋಕ ಹಂಚಿಕೊಂಡ ಅಖ್ತರ್
ಕರಾಚಿ.ಜು.೧- ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ಶೊಯೇಬ್ ಅಖ್ತರ್ ಭಗವದ್ಗೀತೆ ಶ್ಲೋಕವನ್ನು ಹಂಚಿಕೊಂಡು ಸುದ್ದಿಯಾಗಿದ್ದಾರೆ. ಮಾಜಿ ವೇಗಿಯ ಅಚ್ಚರಿ ಪೋಸ್ಟ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ.
ಈ ಪೋಸ್ಟ್ ಭಗವದ್ಗೀತೆಗೆ ಸಂಬಂಧಿಸಿದ್ದು ಎಂಬುದೇ ಇಲ್ಲಿ ವಿಶೇಷ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೊಯೇಬ್ ಅಖ್ತರ್ ಭಗವದ್ಗೀತೆ ಶ್ಲೋಕವನ್ನು ಹಂಚಿಕೊಂಡಿದ್ದಾರೆ. ಅದು ಕೂಡ ಭಗವಾನ್ ವಿಷ್ಣುವಿನ ಅವತಾರವಾದದ ಚಿತ್ರದೊಂದಿಗೆ. ಅನಿಯಂತ್ರಿತ ಮನಸ್ಸಿಗಿಂತ ದೊಡ್ಡ ಶತ್ರುವಿಲ್ಲ ಎನ್ನುವ ಶ್ಲೋಕದ ವಿಡಿಯೋವನ್ನು ಅಖ್ತರ್ ಶೇರ್ ಮಾಡಿದ್ದು, ಇದೀಗ ಈ ವಿಡಿಯೋ ಭಾರೀ ವೈರಲ್ ಆಗಿದೆ. ಶೋಯೆಬ್ ಪೋಸ್ಟ್‌ಗೆ ಭಾರತೀಯ ಕ್ರಿಕೆಟ್ ಪ್ರೇಮಿಗಳು ಸಂತಸ ವ್ಯಕ್ತಪಡಿಸುತ್ತಿದ್ದರೆ, ಅತ್ತ ಪಾಕ್‌ನಲ್ಲಿ ಕೆಲವರು ತಗಾದೆ ತೆಗೆದಿದ್ದಾರೆ. ಇದಾಗ್ಯೂ ಶೊಯೇಬ್ ಅಖ್ತರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ಈ ಪೋಸ್ಟ್ ಅನ್ನು ಅಳಿಸಿ ಹಾಕಿಲ್ಲ ಎಂಬುದು ವಿಶೇಷ.