ಅನುದಾನ ತಾರತಮ್ಯ: ಆತಂಕ
ಕೆ.ಆರ್. ಪುರ,ಜೂ.೨೯- ಕಾಂಗ್ರೆಸ್ ಸರ್ಕಾರದಲ್ಲಿ ಅನುದಾನ ತಾರತಮ್ಯ ಹೆಚ್ಚಾಗಿದ್ದು,ಇದರಿಂದ ಗುತ್ತೆದಾರರ ಸ್ಥಿತಿ ಪತಾಳಕ್ಕೆ ತಲುಪಿದೆ ಎಂದು ಶಾಸಕ ಬಿ.ಎ.ಬಸವರಾಜ ಅವರು ತಿಳಿಸಿದರು.
ಕ್ಷೇತ್ರದ ಮಹದೇವಪುರ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರರು ನೇಣು ಹಾಕಿಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರು.
ಬಿಜೆಪಿ ಶಾಸಕರಿಗೆ ಅನುದಾನ ನೀಡುತ್ತಿಲ್ಲ ಇದರಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಮಸ್ಯೆ ಉಂಟಾಗಿದೆ ಸಾರ್ವಜನಿಕರು ಪರದಾಡುವ ಸ್ಥಿತಿ ಎದುರಾಗಿದೆ ಎಂದು ನುಡಿದರು.
ಗುತ್ತಿಗೆದಾರರು ತಮ್ಮ ಬಳಿ ನೋವು ಹಂಚಿಕೊಂಡಿದ್ದು,ಅವರ ಸ್ಥಿತಿ ಸುಧಾರಣೆ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಎಸ್.ಜಿ.ನಾಗರಾಜ್,ಮುಖಂಡರಾದ ಸುನೀಲ್ ಗೌಡ,ಮಂಜುನಾಥ, ಪ್ರಭಾಕರ ರೆಡ್ಡಿ, ಕೇಶವ ರೆಡ್ಡಿ ಇದ್ದರು.