ದೆಹಲಿಯಲ್ಲಿ ಭಾರಿ ಮಳೆ ; ಆರೆಂಜ್ ಅಲರ್ಟ್
ನವದೆಹಲಿ,ಜೂ.೩೦- ರಾಷ್ಟ್ರ ರಾಜಧಾನಿ ದೆಹಲಿ ಮತ್ತು ರಾಷ್ಟ್ರ ರಾಜಧಾನಿ ವಲಯ ಸೇರಿದಂತೆ ಸುತ್ತ ಮುತ್ತಲ ಪ್ರದೇಶದಲ್ಲಿ ಬಾರಿ ಮಳೆಯಾಗಲಿರುವ ಹಿನ್ನೆಲೆಯಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ “ಆರೆಂಜ್ ಅಲರ್ಟ್” ಘೋಷಿಸಲಾಗಿದೆ.
ಈ ನಡುವೆ ದೆಹಲಿಯಲ್ಲಿ ಮಳೆ ಸಂಬಂಧಿತ ಅನಾಹುತಗಳಲ್ಲಿ ಒಂದೇ ದಿನ ಆರು ಮಂದಿ ಸೇರಿದಂತೆ ಮೃತಪಟ್ಟವರ ಸಂಖ್ಯೆ ಎರಡು ದಿನಗಳಲ್ಲಿ ೧೧ ಕ್ಕೆ ಏರಿಕೆಯಾಗಿದೆ.
ಬಾರಿ ಮಳೆ ಹಿನ್ನೆಲೆಯಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಮಳೆಯಾಗುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಪ್ರದೇಶದಲ್ಲಿ ೩೦ ರಿಂದ ೪೦ ಕಿಮೀ ವೇಗದಲ್ಲಿ ಗುಡುಗು ಮತ್ತು ಬಿರುಗಾಳಿ ಸಹಿತ ಸಾಧಾರಣದಿಂದ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಜುಲೈ ೧ ಮತ್ತು ೨ ರ ಮುನ್ಸೂಚನೆಂ, “ಸಾಮಾನ್ಯವಾಗಿ ಮೋಡ ಕವಿದ ಆಕಾಶ. ಭಾರೀ ಮಳೆ,ಗುಡುಗು ಸಹಿತ ಮಳೆ ಜೊತೆಗೆ ಗರಿಷ್ಠ ತಾಪಮಾನ ೩೦ ಡಿಗ್ರಿ ಸೆಲ್ಸಿಯಸ್ ತನಕ ಸಾಗುವ ನಿರೀಕ್ಷೆಯಿದ್ದು, ಜುಲೈ ೨ ಮತ್ತು ೩ ರಂದು ೨೯ ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಲಿದೆ ಎಂದು ಹವಾಮಾನ ಇಲಾಖೆ ತನ್ನ ಮಾಹಿತಿಯಲ್ಲಿ ತಿಳಿಸಿದೆ.
ಜುಲೈ ೩ ರಿಂದ ೫ ರವರೆಗೆ, ಸಾಧಾರಣದಿಂದ ಭಾರೀ ಮಳೆ ಮತ್ತು ಗುಡುಗು ಸಹಿತ ಸಾಮಾನ್ಯವಾಗಿ ಮೋಡ ಕವಿದ ವಾತಾರಣ ಇರಲಿದೆ. ದೆಹಲಿಯ ಕೆಲವು ಭಾಗಗಳಲ್ಲಿ ಮಳೆಯಾಗಿದ್ದು, ರೋಹಿಣಿ ಮತ್ತು ಬುರಾರಿಯಂತಹ ಪ್ರದೇಶಗಳಲ್ಲಿ ತುಂತುರು ಮಳೆಯಾಗಿದೆ. ನಗರದಲ್ಲಿ ಕನಿಷ್ಠ ತಾಪಮಾನ ೨೮ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಇಡೀ ಮುಂಗಾರು ಋತುವಿನಲ್ಲಿ ದೆಹಲಿಯು ಸಾಮಾನ್ಯವಾಗಿ ಸುಮಾರು ೬೫೦ ಮಿಮೀ ಮಳೆ ಪಡೆಯುತ್ತದೆ.ಈ ಋತುವಿನಲ್ಲಿ ಭಾರೀ ಮಳೆಯಿಂದ ಕಳೆದ ಶುಕ್ರವಾರ, ರಾಜಧಾನಿಯಲ್ಲಿ ಮುಂಗಾರು ಮಳೆ ಸರಿಸುಮಾರು ಮೂರನೇ ಒಂದು ಭಾಗ ಪಡೆದುಕೊಂಡಿದೆ.
ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯಿರುವಾಗ ನೀರು ನಿಲ್ಲದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.