ಸಹಪಾಠಿಗಳು, ಸೇನೆ, ನೌಕಾಪಡೆ ಮುಖ್ಯಸ್ಥರು
ನವದೆಹಲಿ,ಜೂ.೩೦- ಮಧ್ಯಪ್ರದೇಶದ ಸೈನಿಕ ಶಾಲೆ ರೇವಾದಲ್ಲಿ ವ್ಯಾಸಂಗ ಮಾಡಿದ ಇಬ್ಬರು ಸಹಪಾಠಿಗಳು ಭಾರತೀಯ ಸೇನೆ ಮತ್ತು ನೌಕಾಪಡೆಯ ಮುಖ್ಯಸ್ಥರಾಗುವ ಇತಿಹಾಸ ನಿರ್ಮಾಣ ಮಾಡಿದ್ಧಾರೆ.
ಅಡ್ಮಿರಲ್ ದಿನೇಶ್ ತ್ರಿಪಾಠಿ ಅವರು ಮೇ ೧ ರಂದು ಭಾರತೀಯ ನೌಕಾಪಡೆಯ ಕಮಾಂಡರ್ ಆಗಿ ಅಧಿಕಾರ ವಹಿಸಿಕೊಂಡಿದ್ದು, ಲೆಫ್ಟಿನೆಂಟ್ ಜನರಲ್ ದ್ವಿವೇದಿ ಅವರು ಭಾರತೀಯ ಸೇನಾ ಮುಖ್ಯಸ್ಥರಾಗಿ ನಾಳೆ ಅಧಿಕಾರ ವಹಿಸಿಕೊಳ್ಳಲಿದ್ದು ಹೊಸ ಇತಿಹಾಸ ನಿರ್ಮಾಣ ಮಾಡಲು ಸಜ್ಜಾಗಿದ್ದಾರೆ. ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ತ್ರಿಪಾಠಿ ಮತ್ತು ಭಾರತೀಯ ಸೇನಾ ಪಡೆಯ ನಿಯೋಜಿತ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ೧೯೭೦ ರ ದಶಕದ ಆರಂಭದಲ್ಲಿ ೫ನೇ ತರಗತಿಯಿಂದ ಶಾಲೆಯಲ್ಲಿ ಒಟ್ಟಿಗೆ ವ್ಯಾಸಂಗ ಮಾಡಿದ್ದರು.
ಭಾರತೀಯ ಸೇನಾ ಇತಿಹಾಸದಲ್ಲಿ ಮೊದಲ ಬಾರಿಗೆ ಇಬ್ಬರು ಸಹಪಾಠಿಗಳಾದ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಮತ್ತು ಅಡ್ಮಿರಲ್ ದಿನೇಶ್ ತ್ರಿಪಾಠಿ ಭಾರತೀಯ ಸೇನೆ ಮತ್ತು ನೌಕಾಪಡೆಯ ಸೇವಾ ಮುಖ್ಯಸ್ಥರಾಗಲಿದ್ದು ಮಹತ್ವದ ಸಂಗತಿಯಾಗಿದೆ. ಲೆಫ್ಟಿನೆಂಟ್ ಜನರಲ್ ದ್ವಿವೇದಿ ಅವರ ರೋಲ್ ಸಂಖ್ಯೆ ೯೩೧ ಮತ್ತು ಅಡ್ಮಿರಲ್ ತ್ರಿಪಾಠಿ ಅವರ ರೋಲ್ ಸಂಖ್ಯೆ ೯೩೮ ಆಗಿದ್ದರಿಂದ ಇಬ್ಬರು ಅಧಿಕಾರಿಗಳೂ ಶಾಲಾ ದಿನದಿಂದಲೂ ಉತ್ತಮ ಸ್ನೇಹ ಸಂಬಂಧ ಹೊಂದಿದ್ದರು. ಇದೀಗ ಭಾರತೀಯ ಸೇನೆಯಲ್ಲಿ ಮಹತ್ವದ ಜವಾಬ್ದಾರಿ ಹೊತ್ತಿದ್ದಾರೆ. ಸೇನೆಯ ಹಿರಿಯ ನಾಯಕತ್ವದ ನಡುವಿನ ಬಲವಾದ ಸ್ನೇಹ ಪಡೆಗಳ ನಡುವಿನ ಕಾರ್ಯ ಸಂಬಂಧವನ್ನು ಬಲಪಡಿಸುವಲ್ಲಿ ಬಹಳಷ್ಟು ಮುಖ್ಯವಾಗಿದೆ ಎಂದು ಎಂದು ಇಬ್ಬರೂ ಅಧಿಕಾರಿಗಳನ್ನು ಹತ್ತಿರದಿಂದ ಬಲ್ಲ ರಕ್ಷಣಾ ಅಧಿಕಾರಿಯೊಬ್ಬರು ಈ ವಿಷಯ ತಿಳಿಸಿದ್ದಾರೆ.
“೫೦ ವರ್ಷಗಳ ನಂತರ ಭಾರತೀಯಸೇನೆ ಮುನ್ನಡೆಸುವ ಇಬ್ಬರು ಸಹಪಾಠಿಗಳು ಸಿಕ್ಕಿರುವುದು ಹೆಮ್ಮೆಯ ಕ್ಷಣ. ಇದೊಂದು ಅಪರೂಪದ ಸಾಧನೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಭರತ್ ಭೂಷಣ್ ಬಾಬು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಲೆಫ್ಟಿನೆಂಟ್ ಜನರಲ್ ದ್ವಿವೇದಿ ಅವರು ಉತ್ತರ ಸೇನಾ ಕಮಾಂಡರ್ ಆಗಿ ಸುದೀರ್ಘ ಅಧಿಕಾರಾವಧಿಯನ್ನು ಹೊಂದಿದ್ದರು, ಅಲ್ಲಿ ಅವರು ಪೂರ್ವ ಲಡಾಖ್‌ನಲ್ಲಿನ ಎಲ್‌ಎಸಿಯಲ್ಲಿನ ಮಿಲಿಟರಿ ಸ್ಟ್ಯಾಂಡ್‌ಫ್‌ನಲ್ಲಿ ನಡೆಯುತ್ತಿರುವ ಕಾರ್ಯಾಚರಣೆಗಳಿಗೆ ದೀರ್ಘಾವಧಿಯ ಮಾನ್ಯತೆ ಹೊಂದಿದ್ದಾರೆ. ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ೧೯೬೪ರ ಜುಲೈ ೧ ರಂದು ಜನಿಸಿದ ಅವರು ೧೯೮೪ರ ಡಿಸೆಂಬರ್ ೧೫ ರಂದು ಭಾರತೀಯ ಸೇನೆಯ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್‌ಗೆ ನಿಯೋಜನೆ ಮೂಲಕ ಸೇವೆ ಆರಂಭಿಸಿದ್ದರು.