ಕ.ಸಾ.ಪ. ಸರ್ವಾಧ್ಯಕ್ಷೆ ಲಲಿತಾನಾಯಕ್ ಆಯ್ಕೆಗೆ ಮನವಿ
ಬೆಂಗಳೂರು.ಜೂ.೩೦- ಲೇಖಕಿ ಡಾ.ಬಿ.ಟಿ ಲಲಿತಾನಾಯಕ್ ಅವರನ್ನು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಎಂದು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಷಿರವರಿಗೆ ಮನವಿ ಸಲ್ಲಿಸಿದೆ.
ಅಕ್ಷರ ಸಂಸ್ಕೃತಿಯಲ್ಲದ ಜನಾಂಗದಿಂದ ಕನ್ನಡ ಸಾರಸ್ವತಲೋಕದಲ್ಲಿ ತಮ್ಮದೇ ಛಾಪುಮೂಡಿಸಿ, ಕನ್ನಡ ನಾಡು ನುಡಿಗೆ ಅಪಾರ ಸೇವೆ ಸಲ್ಲಿಸಿ ಪ್ರಗತಿ ಪರಸಾಹಿತಿಗಳಾಗಿ ಗುರುತಿಸಿಕೊಂಡಿರುವ ಡಾ.ಬಿ.ಟಿ.ಲಿಲಿತಾನಾಯಕ್ ಇವರಿಗೆ ೭೫ ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಗೌರವ ಸಲ್ಲಿಸಲು ಮಂಡ್ಯದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡುವಂತೆ ಬಂಜಾರ ಭಾಷಾ ಅಕಾಡಮಿ ಅಧ್ಯಕ್ಷರಾದ ಡಾ ಗೋವಿಂದಸ್ವಾಮಿ, ಸದಸ್ಯರಾದ ಶಾಂತನಾಯಕ್, ಪಳಮಿಸ್ವಾಮಿ ಜಾಗೇರಿ, ಡಾ.ರವಿನಾಯಕ್, ಆರ್.ಬಿ.ನಾಯಕ್ ಭಾರತಿ ಭಾಯಿ ಹಾಗೂ ಸರ್ವಸದಸ್ಯರು ಅಕಾಡಮಿ ಮೊದಲ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಿ ಎಂದು ಮನವಿ ಮಾಡಿದ್ದಾರೆ.